DISTRICT:
ಮಂಗಳೂರು: ಇತ್ತೀಚೆಗೆ ಬಿಡುಗಡೆಯಾಗಿದ್ದ ಬ್ಯಾರಿ ಭಾಷೆಯ ನೂತನ ಲಿಪಿಗಾಗಿ ರೂಪಿಸಿದ್ದ ಆಪ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಬ್ಯಾರಿ ಸಾಹಿತ್ಯ ಅಕಾಡೆಮಿಯ ರಹೀಂ ಉಚ್ಚಿಲ್ ನಗರದ ಸೈಬರ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಬ್ಯಾರಿ ಭಾಷೆಯ ಲಿಪ್ಯಂತರ ಮಾಡುವ ಆಪ್ ಅನ್ನು ಜು.14ರಂದು ತೆರೆದು ಆಡ್ಮಿನ್ ಲಾಗಿನ್ ಆದಾಗ ಅಶ್ಲೀಲ ಚಿತ್ರಗಳು ಕಾಣಿಸಿಕೊಂಡಿವೆ. ಯೂಸರ್ ಕ್ಲಿಕ್ ಮಾಡಿದಾಗ hacked by Mr.7mind ಎಂದು ತೋರಿಸಿದೆ. ಬಳಿಕ ಪಾಸ್ವರ್ಡ್ ಬದಲಿಸಿ ತರೆದಾಗ ಸರಿಯಾಗಿದೆ.
ಎರಡು ದಿನಗಳ ಬಳಿಕ ಮತ್ತೆ ಈ ಆಪ್ ಹ್ಯಾಕ್ ಆಗಿತ್ತು. ಈ ರೀತಿ ಹ್ಯಾಕ್ ಮಾಡುತ್ತಿರುವವರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು ಎಂದು ರಹೀಂ ಉಚ್ಚಿಲ್ ಆಗ್ರಹಿಸಿದ್ದಾರೆ.