ಸುದ್ದಿಮಾಧ್ಯಮ ಸಂಪಾದಕರಿಗೆ ಗ್ರಹಣ ಹಿಡಿದಿದೆ: ಡಾ.ನಿರಂಜನ ವಾನಳ್ಳಿ ವಿಷಾದ

ಸುದ್ದಿಮಾಧ್ಯಮ ಸಂಪಾದಕರಿಗೆ ಗ್ರಹಣ ಹಿಡಿದಿದೆ: ಡಾ.ನಿರಂಜನ ವಾನಳ್ಳಿ ವಿಷಾದ

ಬೆಂಗಳೂರು: ಮಾಧ್ಯಮದಲ್ಲಿ ಸಂಪಾದಕರಿಗೆ ಗ್ರಹಣ ಹಿಡಿದಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ ವಾನಳ್ಳಿ ಹೇಳಿದ್ದಾರೆ.

ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಸಮಕಾಲೀನ ಪತ್ರಿಕೋದ್ಯಮ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು ಫೇಕ್ ನ್ಯೂಸ್ ಸುದ್ದಿಯೇ ಅಲ್ಲ, ಸುದ್ದಿಯಲ್ಲಿ ಸತ್ಯ ಇರಬೇಕು ಎಂದರು.

 ಪತ್ರಿಕೋದ್ಯಮದಲ್ಲಿ ಹಿಂದೆ ಪ್ರಸಾರ ಕಡಿಮೆ ಇತ್ತು ಆದರೆ ಪ್ರಭಾವ ಜಾಸ್ತಿಯಿತ್ತು.  ಈಗ ಪ್ರಸಾರ ಇದೆ ಆದರೆ ಅದು ಜನರಿಗೆ ತಟ್ಟುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ಇವತ್ತು ಓದುಗರು ಗ್ರಾಹಕರಾಗಿ ಬದಲಾಗಿ ದ್ದಾರೆ. ನ್ಯೂಸ್ ಪೇಪರ್ ಗಳು ಇವತ್ತು ವ್ಯೂವ್ಸ್ ಪೇಪರ್ ಗಳಾಗಿವೆ ಎಂದು ಹೇಳಿದರು.

ಜರ್ನಲಿಸಂ ಹಿಂದೆ ಹವ್ಯಾಸವಾಗಿತ್ತು.ಈಗ ವೃತ್ತಿಯಾಗಿದೆ ಆದರೆ ನಿಜವಾದ ವೃತ್ತಿ ಇನ್ನೂ ಆಗಿಲ್ಲ. ಇವತ್ತು ಜರ್ನಲಿಸಂ ಓದಿದವರೇ ಬರೆಯಬೇಕೆಂದೇನಿಲ್ಲ. ಪತ್ರಿಕೋದ್ಯಮದ ಮೌಲ್ಯಗಳನ್ನು ಗಾಳಿಗೆ ತೂರಿದವರನ್ನು ಹೊರಹಾಕುವ ವ್ಯವಸ್ಥೆ ಇಲ್ಲ ವಿಷಾದಿಸಿದರು.

ಮಹಿಳೆಯರಿಗೆ ಆದ್ಯತೆ

ಯುವತಿಯರು,ಮಹಿಳೆಯರಿಗೆ ಇವತ್ತು ಸುದ್ದಿಮನೆಗಳಲ್ಲಿ ಆದ್ಯತೆ ಇದೆ. ಆದರೆ ತಾವು ಬಲಿಷ್ಠೆ ಎಂಬುದನ್ನು ಅವರು ರುಜುವಾತು ಪಡೆಸಬೇಕು. ಪತ್ರಿಕೋದ್ಯಮ ಫ್ಯಾಷನ್ ಆಗಬಾರದು. ಪ್ಯಾಷನ್ ಆಗಬೇಕು. ಟಿವಿಗಳಲ್ಲಿ ಕಾಣಿಸಿಕೊಳ್ಳುವುದಕ್ಕಿಂತಲು ಹೆಚ್ಚಿನ ಜವಾಬ್ದಾರಿ ಪತ್ರಕರ್ತರಿಗಿದೆ ಎಂದೂ ಅವರು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಎಸ್.ಎನ್.ನಾಗರಾಜ ರೆಡ್ಡಿ,  ಪ್ರಾಂಶುಪಾಲರಾದ ವೈ.ಜಿ.ಕಮಲ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಜಯಸಿಂಹ ಮತ್ತಿತರರು ಹಾಜರಿದ್ದರು.