DISTRICT:
ಮಂಗಳೂರು: ದಕ್ಷಿಣ ಭಾರತದ ಪ್ರಸಿದ್ದ ನಾಗನ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಬಳಿ ಭಾರೀ ಗಾತ್ರದ ಕಾಳಿಂಗ ಸರ್ಪ ಪತ್ತೆಯಾಗಿದೆ.
ಸುಬ್ರಹ್ಮಣ್ಯ ಹತ್ತಿರ ಹರಿಹರ ಗ್ರಾಮದಲ್ಲಿ 10 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದೆ. ರಾಧಾಕೃಷ್ಣ ಅವರ ಮನೆಯಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಆಹಾರ ಅರಸಿ ನಾಡಿಗೆ ಬಂದ ಕಾಳಿಂಗ ಸರ್ಪ ರಾಧಾಕೃಷ್ಣ ಅವರ ಮನೆ ಸೇರಿತ್ತು.
ಪಾತ್ರೆ ತೊಳೆಯುವ ಸಿಂಕಿನಲ್ಲಿ ಮಲಗಿದ್ದ ಕಾಳಿಂಗ ಸರ್ಪನನ್ನು ನೋಡಿ ಮನೆಯವರು ಹೌಹಾರಿದ್ದಾರೆ. ಕೂಡಲೇ ಉರಗ ರಕ್ಷಕ ಸ್ನೇಕ್ ಪ್ರವೀಣ್ ಶೆಟ್ಟಿಗೆ ಫೋನ್ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಪ್ರವೀಣ್ ಶೆಟ್ಟಿ ಕಾಳಿಂಗ ಸರ್ಪವನ್ನು ಸೆರೆಹಿಡಿದಿದ್ದಾರೆ.