DISTRICT:
ಮೈಸೂರು ; ನಾಗರಹೊಳೆ ಅಭಯಾರಣ್ಯದ ಸುತ್ತಮುತ್ತ ಜನ ಜಾನುವಾರುಗಳಿಗೆ ಉಪಟಳ ನೀಡುತ್ತಿದ್ದ ಹುಲಿ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬೋನ್ ಅಳವಡಿಸಿದ್ದಾರೆ. ಹೆಚ್,ಡಿ,ಕೋಟೆ ತಾಲ್ಲೂಕಿನ ಅಂತರಸಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಅಂತರಸಂತೆ ಗ್ರಾಮದ ಗೋವಿಂದ ರಾಜು ಎಂಬುವರ ಹಸುವನ್ನ ಹುಲಿ ಬಲಿ ಪಡೆದಿತ್ತು. ಅಲ್ಲದೇ ಕುರಿ ಕಾಯುವವರಿಗೆ ಮತ್ತು ಗ್ರಾಮಸ್ಥರಿಗೆ ಕಾಣಿಸಿತ್ತು.
ಹುಲಿ ಚಲನವಲನಗಳ ಮೇಲೆ ನಿಗಾ ಇಡಲು ಅರಣ್ಯ ಇಲಾಖೆ ಸಿಬ್ಬಂದಿ ಕ್ಯಾಮರಾಗಳನ್ನು ಅಳವಡಿಸಿತ್ತು. ಅದರಲ್ಲಿ ಹುಲಿ ಓಡಾಡಿರುವುದು ಪತ್ತೆಯಾಗಿದೆ. ಹುಲಿ ಹಸುವನ್ನು ತಿನ್ನಲು ಬಂದು ಹೋಗಿರುವುದು ಕ್ಯಾಮರಾದಲ್ಲಿ ಸರೆಯಾಗಿದೆ. ಅದೇ ಈಗ ಜಾಗದಲ್ಲಿ ಅರಣ್ಯ ಇಲಾಖೇ ಬೋನ್ ಇರಿಸಿದೆ. ಕ್ರಮಕೈಗೊಂಡಿದೆ.
ಹುಲಿ ಬೋನಿಗೆ ಬೀಳದಿದ್ದರೆ, ಅದು ಇರುವ ಸ್ಥಳ ಪತ್ತೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸುತ್ತಮುತ್ತಲಿನ ಪ್ರದೇಶಗಳಲ್ಲಿ 20 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹುಲಿ ಸೆರೆಗೆ ಮೂರು ತಂಡಗಳನ್ನು ರಚಿಸಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಮೀನುಗಳಲ್ಲಿ ಹುಲಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಅಂತರಸಂತೆ, ನೂರಲಕುಪ್ಪೆ ಹಾಗೂ ಅಕ್ಕಪಕ್ಕದ ಗ್ರಾಮದ ರೈತರಿಗೆ ಜಮೀನುಗಳಿಗೆ ಹೋಗದಂತೆ ಹಾಗೂ ಜಾನುವಾರುಗಳನ್ನು ಹೊರಗೆ ಬಿಡದಂತೆ ಧ್ವನಿ ವರ್ಧಕದ ಮೂಲಕ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.