DISTRICT:
ಕೊಪ್ಪಳ : ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಹನುಮ ಜನ್ಮಸ್ಥಳ ಅಂಜನಾದ್ರಿ ಗೆ ಇಂದು ( ಡಿ .5) ಆಗಮಿಸಲಿರುವ ಹನುಮ ಮಾಲಾಧಾರಿಗಳು, ಗಂಗಾವತಿ ನಗರದಿಂದ ನಡೆಯಲಿರುವ ಸಂಕೀರ್ತನಾ ಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಗಂಗಾವತಿ ಹಾಗೂ ಅಂಜನಾದ್ರಿ ಬೆಟ್ಟದ ಸುತ್ತಮುತ್ತ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ . ಕೊಪ್ಪಳ ಎಸ್ಪಿ ಅರುಣಾಂಶುಗಿರಿ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಮಾಡಲಾಗಿದ್ದು , ಗಂಗಾವತಿ ಪಟ್ಟಣದಲ್ಲಿ 100 ಕ್ಕೂ ಹೆಚ್ಚು ಸಿಸಿಕ್ಯಾಮರಾ ಅಳವಡಿಕೆ ಮಾಡಿದ್ದಾರೆ .
ಐತಿಹಾಸಿಕ ಅಂಜನಾದ್ರಿಯಲ್ಲಿಂದು ಹನುಮ ಮಾಲೆ ವಿಸರ್ಜನೆ ಹಿನ್ನಲೆ. ಹನುಮ ಮಾಲಾಧಾರಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಇನ್ನು ಬರುವ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಅಪರಾಧ ಕೇಸ್ನಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಹರಿದು ಬರುತ್ತಿರುವ ಹನುಮ ಮಾಲಾಧಾರಿಗಳು. ಮಧ್ಯರಾತ್ರಿಯಿಂದಲೇ ಬರೋಬ್ಬರಿ 572 ಮೆಟ್ಟಿಲು ಬೆಟ್ಟ ಹತ್ತಿ ಮಾಲೆ ವಿಸರ್ಜನೆ ಮಾಡುತ್ತಿರುವ ಲಕ್ಷಾಂತರ ಹನುಮ ಭಕ್ತರು. ದೇಶದ ನಾನಾ ಮೂಲೆಗಳಿಂದ ಬಂದಿರುವ ಹನುಮ ಮಾಲಾಧಾರಿಗಳು.
ಇನ್ನು ನಿನ್ನೆ (ಡಿ.4) ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆ ನಡೆದಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಹನುಮ ಮಾಲಾಧಾರಿಗಳು, ಇನ್ನು ಈ ಸಂಕೀರ್ತನಾ ಯಾತ್ರೆ ಜಾಮಿಯಾ ಮಸೀದಿ ಎದುರು ತಲುಪಿದೆ. ಈ ವೇಳೆ ಓರ್ವ ಹನುಮ ಮಾಲಾಧಾರಿ ಜಾಮಿಯಾ ಮಸೀದಿ ಒಳಗೆ ನುಗ್ಗಲು ವಿಫಲ ಯತ್ನ ನಡೆಸಿದ್ದಾನೆ. ಹನುಮ ಮಾಲಾಧಾರಿ ಬ್ಯಾರಿಕೇಡ್ ಹಾರಿ ನುಗ್ಗಲು ಯತ್ನಿಸಿದ ವೇಳೆ ಪೊಲೀಸರು ತಡೆದಿದ್ದಾರೆ.