DISTRICT:
ದಾವಣಗೆರೆ: ನ್ಯಾಮತಿ ತಾಲೂಕಿನಲ್ಲಿ ಕಳೆದೊಂದು ವಾರದಿಂದ ಕಾಲ ಜೋರಾಗಿ ಸುರಿದ ಮಳೆ ಆರ್ಭಟ ಜೋರಾಗಿತ್ತು. ತುಂಗಾಭದ್ರಾ ನದಿ, ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ.
ತಾಲೂಕಿನ ಗಂಗನಕೋಟಿ ಗ್ರಾಮದ ಹಿರೇಹಳ್ಳ ತುಂಬಿ ತುಳುಕುತ್ತಿದೆ. ಈ ನಡುವೆ ಹಿರೇಹಳ್ಳ ದಾಟುತ್ತಿದ್ದ ಕಾರು ನೀರಿನ ರಭಸಕ್ಕೆ ಕೊಚ್ಚಿಗೊಂಡು ಹೋಗುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಕಾರು ಇನ್ನೇನೂ ನೀರಿನಲ್ಲಿ ಮುಳುಗುವ ಸ್ಥಿತಿ ತಲುಪಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಸುರಕ್ಷಿತವಾಗಿ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನ್ಯಾಮತಿ ತಾಲೂಕಿನಲ್ಲಿ ಕಳೆದೊಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಹಿರೇಹಳ್ಳ ಸೇತುವೆ ಮೇಲೆ ನೀರು ಹರಿಯುತ್ತಿದೆ. ಹೀಗಿರುವಾಗ ಸೇತುವೆ ದಾಟಲು ಕಾರಿನಲ್ಲಿ ಹೋದ ಕುಟುಂಬ ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಈ ಕಾರಿನಲ್ಲಿ ಇಬ್ಬರು ಇದ್ದು, ಚಾಲಕ ಕಾರಿನಿಂದ ಹೊರ ಬಂದು ನೀರಿನಲ್ಲಿ ನಿಂತಿದ್ದಾರೆ. ಆಗ ಗ್ರಾಮಸ್ಥರು ಹಗ್ಗ ನೀಡಿ ಅವರನ್ನು ಕಾಪಾಡಿದ್ದಾರೆ. ಒಟ್ಟಾರೆ ಗ್ರಾಮಸ್ಥರ ನೆರವಿನಿಂದ ಎರಡು ಜೀವಗಳು ಉಳಿದಿದೆ.
ತಾಲೂಕಿನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸವಳಂಗ 94.2 ಮಿ.ಮೀ, ಬೆಳಗುತ್ತಿ 100.6 ಮಿ.ಮೀ. ಗೋವಿನಕೋವಿ 80.2 ಮಿ.ಮೀ, ಮಳೆಯಾಗಿದೆ.