DISTRICT:
ವರದಿ: ಕಿರುಗುಂದ ರಫೀಕ್
ಚಿಕ್ಕಮಗಳೂರಿನಲ್ಲಿ ಒಟ್ಟು 1731 ಕೆರೆಗಳಲ್ಲಿ 609 ಕೆರೆ ಜಾಗಗಳು ಒತ್ತುವರಿಯಾಗಿವೆ. ಒಟ್ಟು 3523 ಎಕರೆ ಒತ್ತುವರಿ ಜಾಗದಲ್ಲಿ ಸೇರಿದ್ದು, ಅಧಿಕಾರಿಗಳು ಈವರೆಗೆ ಒತ್ತುವರಿ ತೆರವು ಕಾರ್ಯಾಚರಣೆ ಮಾಡಿ, ಎನ್.ಆರ್.ಪುರದ 17, ಕೊಪ್ಪದ 10, ಚಿಕ್ಕಮಗಳೂರಿನ 2, ತರೀಕೆರೆಯ 1 ಕೆರೆ ಸೇರಿ ಕೇವಲ 30 ಕೆರೆಗಳ ಒತ್ತುವರಿ ತೆರವು ಪ್ರಕ್ರಿಯೆ ನಡೆಸಿದ್ದಾರೆ.
ಚಿಕ್ಕಮಗಳೂರು: ಕಾಫೀನಾಡಲ್ಲಿ ಕೃಷಿಗೆ ಪೂರಕವಾದ, ಅಂತರ್ಜಲ ವೃದ್ಧಿಗೆ, ಪರಿಸರ- ಪ್ರಕೃತಿಗೆ ಜೀವದ ಬಟ್ಟಲುಗಳಾಗಿರುವ ಕೆರೆಗಳು ದಿನಗಳೆದಂತೆ ಕಣ್ಮರೆಯಾಗುತ್ತಿರುವುದು ಆತಂಕ ಹುಟ್ಟಿಸಿದೆ.
ಜಿಲ್ಲೆಯಲ್ಲಿ ನೂರಾರು ಕೆರೆಗಳನ್ನು ಭೂದಾಹಿಗಳು ಒತ್ತುವರಿ ಮಾಡಿರುವುದು ಪತ್ತೆಯಾಗಿದೆ. ಪ್ರಭಾವಿಗಳು, ರಾಜಕೀಯ ಮುಖಂಡರು, ಅಧಿಕಾರಿಗಳು ಈ ಕೆರೆಗಳ ಒತ್ತುವರಿ ಅಕ್ರಮ ನಡೆಸಿದ್ದಾರೆಂಬ ಆಪಾದನೆಗಳು ವ್ಯಕ್ತವಾಗಿವೆ.
ಎಲ್ಲ ತಾಲೂಕುಗಳೂ ಸೇರಿ ಒಟ್ಟು 1731 ಕೆರೆಗಳಲ್ಲಿ 609 ಕೆರೆ ಜಾಗಗಳು ಒತ್ತುವರಿಯಾಗಿವೆ. ಒಟ್ಟು 3523 ಎಕರೆ ಒತ್ತುವರಿ ಜಾಗದಲ್ಲಿ ಸೇರಿದ್ದು, ಅಧಿಕಾರಿಗಳು ಈವರೆಗೆ ಒತ್ತುವರಿ ತೆರವು ಕಾರ್ಯಾಚರಣೆ ಮಾಡಿ, ಎನ್.ಆರ್.ಪುರದ 17, ಕೊಪ್ಪದ 10, ಚಿಕ್ಕಮಗಳೂರಿನ 2, ತರೀಕೆರೆಯ 1 ಕೆರೆ ಸೇರಿ ಕೇವಲ 30 ಕೆರೆಗಳ ಒತ್ತುವರಿ ತೆರವು ಪ್ರಕ್ರಿಯೆ ನಡೆಸಿದ್ದಾರೆ.
ಕಳೆದ 2008ರಲ್ಲಿ ಸರ್ವೋಚ್ಛ ನ್ಯಾಯಾಲಯ ಕೆರೆಗಳ ಸಂರಕ್ಷಣೆಗೊಳಿಸಲು ಆದೇಶಿಸಿತ್ತು.
ಒತ್ತುವರಿಯಾದ ಕೆರೆಗಳು:
ಜಿಲ್ಲೆಯ 1731 ಕೆರೆಗಳ ಪೈಕಿ ಚಿಕ್ಕಮಗಳೂರಿನ 233 ಕೆರೆಗಳು, ಕಡೂರಿನ 109 ಕೆರೆಗಳು, ತರೀಕೆರೆಯ 104, ಎನ್ ಆರ್ ಪುರದ 58, ಮೂಡಿಗೆರೆಯ 53, ಅಜ್ಜಂಪುರದ 34, ಕೊಪ್ಪದ 10, ಶೃಂಗೇರಿಯ 8 ಕೆರೆಗಳು ಒತ್ತುವರಿಯಾದ ಪಟ್ಟಿಯಲ್ಲಿವೆ. ಇನ್ನು ಲೆಕ್ಕಕ್ಕೆ ನಿಲುಕದ ಅದೆಷ್ಟು ಕೆರೆಗಳು ಮಾಯವಾಗಿದೆಯೋ ಗೊತ್ತಿಲ್ಲ.
ಇನ್ನು ಕೆರೆಗಳ ಅಭಿವೃದ್ಧಿ ಹೆಸರಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕತೆಯೇ ಬೇರೆಯಿದೆ.