DISTRICT:
ಚಿಕ್ಕಮಗಳೂರು: ಬಿಜೆಪಿ ನಾಯಕರ ಸ್ವಭಾವ ಹಾಗೆ ಇದ್ದರೆ ಕಾಂಗ್ರೆಸ್ ನವರು ಖಂಡಿತ ಕರೆಯಲಿ. ನನ್ನ ಸ್ವಭಾವ ಕುಂಕುಮ ಕಂಡರೆ ಆಗದಿದ್ರೆ, ಕೇಸರಿ ನೋಡಿದ್ರೆ ಆಗದಿದ್ರೆ, ಮುಲ್ಲಾಗಳ ಮೇಲೆ ಪ್ರೀತಿ ಜಾಸ್ತಿ ಇದ್ರೆ ಖಂಡಿತ ಕರೆಯಬಹುದು ಎಂದು ಬಿಜೆಪಿ ನಾಯಕರ ಹೆಸರಿಗೆ ಮುಸ್ಲಿಂ ಹೆಸರನ್ನು ಹಾಕಿ ಟ್ವೀಟ್ ಮಾಡುತ್ತಿರುವ ವಿಚಾರಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ನನ್ನ ಮುಲ್ಲಾ ಅಂತ ಕರೆಯೋಕ್ಕಾಗಲ್ಲ, ಹಿಂದೂ ಹುಲಿ ಅಂತಾನೇ ಕರೆಯಬೇಕು. ನನ್ನ ಮುಲ್ಲಾ ಅಂತ ಕರೆದರೆ ಮುಲ್ಲಾಗಳು ಒಪ್ಪಿಕೊಳ್ಳಲ್ಲ. ಸ್ವಭಾವಕ್ಕೆ ತಕ್ಕಂತೆ ಬಿರುದುಗಳು ನಮಗೆ ಬರುತ್ತದೆ. ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದವನನ್ನು ಕನ್ನಡ ಪ್ರೇಮಿ ಅಂತ ಹೇಳಕ್ಕಾಗುತ್ತಾ.? ಹಾಗೆ ಹೇಳಿದರೆ ಅದಕ್ಕಿಂತ ಅಪಪ್ರಚಾರ ಬೇರೆ ಏನಿದೆ ಎಂದರು.
ಮುಲ್ಲಾ ಎನ್ನುವ ಹೆಸರು ಯಾರಿಗೆ ಕನೆಕ್ಟ್ ಆಗುತ್ತದೆ ಅಂದರೆ, ಶಾದಿ ಭಾಗ್ಯ, ದೇ ಆರ್ ಆಲ್ ಮೈ ಬ್ರದರ್ಸ್ ಎನ್ನುವವರಿಗೆ ಕನೆಕ್ಟ್ ಆಗುತ್ತದೆ. ಬೆಂಕಿ ಹಾಕಿದ್ದರೂ ಕೂಡ ಅಮಾಯಕರು ಎನ್ನುವವರಿಗೆ ಕನೆಕ್ಟ್ ಆಗುತ್ತದೆ. ಕೇಸರಿ, ಕುಂಕುಮವನ್ನು ದೂಡಿ ಟೋಪಿಯನ್ನು ಪ್ರೀತಿಯಿಂದ ಹಾಕಿಕೊಳ್ಳುವವರಿಗೆ ಕನೆಕ್ಟ್ ಆಗುತ್ತದೆ ವಾಗ್ದಾಳಿ ನಡೆಸಿದರು.