DISTRICT:
ಚಿಕ್ಕಬಳ್ಳಾಪುರ : ನಂದಿ ಬೆಟ್ಟದ ಪಕ್ಕದಲ್ಲಿ ಇರುವ ಬ್ರಹ್ಮ ಗಿರಿ ಬೆಟ್ಟಕ್ಕೆ ಟ್ರಕ್ಕಿಂಗ್ ಮಾಡಲು ಬಂದಿದ್ದ ಯುವಕನೊಬ್ಬ ಟ್ರೆಕ್ಕಿಂಗ್ ವೇಳೆ ಬೆಟ್ಟದ ಮೇಲಿಂದ ಜಾರಿ ಬಿದ್ದು ಅಪಾಯಕ್ಕೆ ಸಿಲುಕಿದ್ದು ಯುವಕನನ್ನು ವಾಯುಪಡೆಯ ಹೆಲಿಕ್ಯಾಪ್ಟರ್ ಬಳಸಿ ರಕ್ಷಣೆ ಮಾಡಲಾಗಿದೆ.
ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ಗೆ ತೆರಳಿದ್ದ ವೇಳೆ ದುರ್ಗಮ ಪ್ರದೇಶಕ್ಕೆ ಜಾರಿ ಬಿದ್ದು ಅಪಾಯಕ್ಕೆ ಸಿಲುಕಿದ್ದ ದೆಹಲಿ ಮೂಲದ ಯುವಕ ನಿಶಾಂತ್ (19 )ಸಕಾಲಿಕ ಕಾರ್ಯಾಚರಣೆ ನಡೆಸಿದ ವಾಯುಪಡೆ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಬಳಿಕ ಯುವಕನ್ನು ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ದೆಹಲಿ ಮೂಲದ ಯುವಕ ನಿಶಾಂಕ್ ಕೌಲ್ ಗೆಳೆಯರೊಂದಿಗೆ ಬ್ರಹ್ಮ ಗಿರಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಮಾಡಲು ಹೋಗಿದ್ದರು. ಯುವಕ ಬೆಟ್ಟದ ಕಡಿದಾದ ಭಾಗದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಪ್ರಪಾತದ ಕೊರಕಲಿನ ನಡುವೆ ಸಿಲುಕಿದ್ದ ಯುವಕನನ್ನು ಮೇಲೆತ್ತಲು ಸ್ಥಳೀಯರು ಹಾಗೂ ಸ್ನೇಹಿತರು ಹರಸಾಹಸಪಟ್ಟರು ಸಾಧ್ಯವಾಗಲಿಲ್ಲ.
ಬೀಳುತ್ತಿದ್ದ ವೇಳೆ ಆಧಾರ ಸಿಕ್ಕಿದ್ದರಿಂದ ನಿಶಾಂಕ್ ಅಲ್ಲೇ ಸಿಲುಕಿದ್ದ. ತಾನಿದ್ದ ಸ್ಥಳದಿಂದಲೇ ಮನೆಯವರಿಗೆ ಕಾಲ್ ಮಾಡಿ ತಿಳಿಸಿದ್ದ. ಅಲ್ಲದೆ ಲೊಕೇಶನ್ ಕೂಡ ಶೇರ್ ಮಾಡಿದ್ದ. ಹೀಗಾಗಿ ತಕ್ಷಣವೇ ನಿಕಾಂಕ್ರನ್ನ ಪತ್ತೆ ಹಚ್ಚಿ ರಕ್ಷಿಸಲು ಅನುಕೂಲವಾಗಿದೆ.
ಯುವಕ ಸಿಲುಕಿದ್ದ ಸ್ಥಳದ ಮೇಲಿಂದ ಕಮಾಂಡೋಗಳು ಹೆಲೆಕಾಪ್ಟರ್ನಿಂದ ಹಗ್ಗದ ಮೂಲಕ ಇಳಿದು ನಿಶಾಂಕ್ನನ್ನ ಹಿಡಿದು ಹೆಲಿಕಾಪ್ಟರ್ಗೆ ಸಾಗಿಸಿದ್ದಾರೆ. ಬಳಿಕ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು ಸದ್ಯ ನಿಶಾಂಕ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.