ಈ ಕ್ಷಣ :

ಗ್ರಾಮಲೆಕ್ಕಿಗನ ಕೈಯಲ್ಲಿ ಲಾಠಿ; ಸೊಪ್ಪು ಖರೀದಿಸಲು ಬಂದ ಮಹಿಳೆ ಮೇಲೆ ಹಲ್ಲೆ

Published 15 ಮಾರ್ಚ್ 2023, 21:47 IST
Last Updated 6 ಮೇ 2023, 12:45 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

DISTRICT: ಚಿಕ್ಕಮಗಳೂರು: ತರಕಾರಿ ಖರೀದಿಸಲು ಮಾರುಕಟ್ಟೆಗೆ ಹೋಗಿದ್ದ ಮಹಿಳೆಯ ಮೇಲೆ ಗಸ್ತು ತಂಡದಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮಲೆಕ್ಕಿಗನೋರ್ವ ಏಕಾಏಕಿ ಲಾಠಿಯಿಂದ ಹೊಡೆದು ಹಲ್ಲೆ ಮಾಡಿರುವ ಘಟನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಭಾನುವಾರ ಬೆಳಗ್ಗೆ ನಡೆದ ಘಟನೆ. ಶಭಾನ ಎಂಬ ಮಹಿಳೆ ಮೂಡಿಗೆರೆ ಪಟ್ಟಣದಲ್ಲಿ ಸೊಪ್ಪು ಖರೀದಿಸಲು ತೆರಳಿದ್ದರು. ಆಗ ಅಲ್ಲಿಗೆ ಬಂದ ಗ್ರಾಮಲೆಕ್ಕಿಗ ಗಿರೀಶ್‌ ಲಾಠಿಯಿಂದ ಮಹಿಳೆಗೆ ಬಲವಾಗಿ ಹೊಡೆದಿದ್ದಾರೆ. ಮಹಿಳೆಯ ಕೈಗೆ ಗಾಯವಾಗಿದೆ. ವರ್ತಕ ಪಿ.ಕೆ.ಹಂಝ ಎಂಬುವರವರಿಗೂ ಲಾಠಿಯೇಟು ಬಿದ್ದಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ವಿಡಿಯೋ ತುಣುಕು ಜಾಲತಾಣಗಳಲ್ಲಿ ಹರಿದಾಡಿದ್ದು, ಮಹಿಳೆಗೆ ಬಲವಾಗಿ ಹೊಡೆದಿರುವುದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಳೂರು ಗ್ರಾಮಲೆಕ್ಕಿಗ ಗಿರೀಶ್ ಮತ್ತು ಇತರ ನೌಕರರು ಸೋಮವಾರ ಪಟ್ಟಣದಲ್ಲಿ ಅಗತ್ಯ ವಸ್ತು ಖರೀದಿಗೆಂದು ಬಂದಿದ್ದವರ ಮತ್ತು ವರ್ತಕರ ಮೇಲೆ ಮನಬಂದಂತೆ ಲಾಟಿ ಬೀಸಿದ್ದಾರೆ. ಇಬ್ಬರೂ ಆಸ್ಪತ್ರೆಗೆ ದಾಖಲಾಗಿ ಪೋಲಿಸರಿಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ನೌಕರರನ್ನು ಅಮಾನತುಗೊಳಿಸಿ ತಹಸೀಲ್ದಾರ್ ಅವರನ್ನು ವರ್ಗಾವಣೆಗೊಳಿಸಬೇಕೆಂಬ ಒತ್ತಾಯ ವ್ಯಾಪಕವಾಗಿ ಕೇಳಿಬರುತ್ತಿದೆ. [caption id="attachment_472" align="alignnone" width="217"] ಎಫ್ಐಆರ್ ಪ್ರತಿ[/caption] ಪ್ರತಿದಿನ ಬೆಳಗ್ಗೆ 6ಕ್ಕೆ ಪೋಲೀಸರು ಬೀದಿಗಿಳಿಯುವ ಮೊದಲೇ ತಹಸೀಲ್ದಾರ್ ಹೆಚ್.ಎಂ.ರಮೇಶ್ ನಾಲ್ಕೈದು ಸಿಬ್ಬಂದಿಗಳೊಂದಿಗೆ ಪಟ್ಟಣದ ವಿವಿಧೆಡೆ ತಿರುಗಾಡುತ್ತಾ ವಾಹನಗಳನ್ನು ಅಡ್ಡಗಟ್ಟಿ ಜನರನ್ನು ಬೆದರಿಸುತ್ತಿದ್ದರು. ಅವರೊಂದಿಗೆ ಬರುತ್ತಿದ್ದ ಸಿಬ್ಬಂದಿ ಮತ್ತು ಜೀಪ್ ಚಾಲಕ ತಾವು ಪೋಲೀಸರಿಗಿಂತ ಕಡಿಮೆಯೇನಿಲ್ಲ ಎಂಬಂತೆ ಪ್ರತಿದಿನ ಲಾಠಿ ಹಿಡಿದು ಜನರ ಮೆಲೆ ಹಲ್ಲೆ ನಡೆಸಿ ದರ್ಪ ಮೆರೆಯುತ್ತಿದ್ದರು.ಇವರೆಲ್ಲ ಮುಫ್ತಿಯಲ್ಲಿರುವ ಪೋಲೀಸರೆಂದು ಜನ ಸುಮ್ಮನಾಗಿದ್ದರು. ಕಳೆದ ನಾಲ್ಕು ದಿನದಿಂದ ಅಂಗಡಿಗಳು ಸಂಪೂರ್ಣ ಬಂದ್‌ ಆದ ಬಳಿಕ ಪ್ರತೀ ಮನೆಯಲ್ಲಿ ದಿನಸಿ ತರಕಾರಿ ಖಾಲಿಯಾಗಿದೆ. ಖರೀದಿಗಾಗಿ ಸೋಮವಾರ ಜನ ಬೀದಿಗಿಳಿದಿದ್ದರು. ಭಾನುವಾರ ಜಿಲ್ಲಾಧಿಕಾರಿ ಅಂಗಡಿಗಳನ್ನು ಮೇ.28ರವರೆಗೂ ತೆರೆಯದಂತೆ ಆದೇಶ ನೀಡಿದ್ದಾರೆ. ಈ ಆದೇಶ ಪ್ರಚಾರಕ್ಕೆ ಬಾರದ ಕಾರಣ ವರ್ತಕರು ತಮ್ಮ ವ್ಯಾಪಾರ ಮಳಿಗೆಯ ಬಾಗಿಲು ತೆರೆದು ವ್ಯಾಪಾರದಲ್ಲಿ ತೊಡಗಿದ್ದಾಗ ತಹಸೀಲ್ದಾರ್ ಮತ್ತವರ ತಂಡ ಲಾಠಿ ಹಿಡಿದು ಜನರ ಮೇಲೆ ಹಲ್ಲೆ ನಡೆಸಿದರು. ತಹಸೀಲ್ದಾರ್ ಲಾಠಿ ಹಿಡಿದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಅವರ ಸಿಬ್ಬಂದಿ ಮೂರು ಬೈಕಿನಲ್ಲಿ ಪಟ್ಟಣದಾದ್ಯಂತ ತಿರುಗಾಡುತ್ತಾ ಸಿಕ್ಕಸಿಕ್ಕವರ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದ್ದಾರೆ. ಇವರು ಯಾರೆಂದು ತಿಳಿಯದ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಕೆಲವರು ಹಲ್ಲೆಯ ದೃಶ್ಯ ತಮ್ಮ ಮೊಬೈಲಿನಲ್ಲಿ ಸೆರೆಹಿಡಿದು ಜಾಲತಾಣದಲ್ಲಿ ವೈರಲ್ ಮಾಡಿದಾಗ ಲಾಠಿ ಹಿಡಿದು ಹಲ್ಲೆ ನಡೆಸಿದವರು ಪೋಲೀಸರಲ್ಲ, ಕಂದಾಯ ಇಲಾಖೆ ನೌಕರರೆಂದು ತಿಳಿದಾಗ ಜನರು ರೊಚ್ಚಿಗೆದ್ದಿದ್ದಾರೆ. ಜನ ಗುಂಪುಗೂಡಿ ನೌಕರರನ್ನು ಹಿಡಿಯಬೇಕೆನ್ನುವಷ್ಟರಲ್ಲಿ ಹಲ್ಲೆಕೋರ ನೌಕರರು ಪಲಾಯನ ಮಾಡಿದ್ದಾರೆ. ಗಂಭೀರಗಾಯಗೊಂಡ ಶಬಾನ ಭಾನು(45), ಪಿ.ಕೆ.ಹಂಝ ಎಂಬುವವರು ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. [video width="848" height="480" mp4="http://24x7livekannada.com/wp-content/uploads/2021/05/chi1.mp4"][/video]

ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45