ಈ ವರ್ಷದ ಜನಪ್ರಿಯ ನಟ-ನಟಿಯರ ಪಟ್ಟಿ ಬಿಡುಗಡೆ, ಯಶ್‌ಗೆ ಕೊನೆಯ ಸ್ಥಾನ

ಈ ವರ್ಷದ ಜನಪ್ರಿಯ ನಟ-ನಟಿಯರ ಪಟ್ಟಿ ಬಿಡುಗಡೆ, ಯಶ್‌ಗೆ ಕೊನೆಯ ಸ್ಥಾನ

ಬೆಂಗಳೂರು: ಸಿನಿಮಾ ರೇಟಿಂಗ್ ಮತ್ತು ನಟ-ನಟಿಯರ ಜನಪ್ರಿಯತೆ ಸಮೀಕ್ಷೆ ಮಾಡುವ ಐಎಂಡಿಬಿ, ವರ್ಷದ ಜನಪ್ರಿಯ ನಟ-ನಟಿಯರ ಪಟ್ಟಿ ಬಿಡುಗಡೆ ಮಾಡಿದೆ.

ಐಎಂಡಿಬಿ 'ಟಾಪ್ 10 ಮೋಸ್ಟ್ ಪಾಪ್ಯುಲರ್ ಇಂಡಿಯನ್ ಸ್ಟಾರ್ಸ್ 2022' ಹೆಸರಿನ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಲಾಗಿದೆ.

ನಟ ಧನುಷ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದರೆ, ಯಶ್ ಕೊನೆಯ ಸ್ಥಾನದಲ್ಲಿದ್ದಾರೆ. ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಹೆಸರು ಪಟ್ಟಿಯಲ್ಲಿ ಕಾಣಿಸಿಲ್ಲ.

ಈ ವರ್ಷದ ಜನಪ್ರಿಯ ನಟ-ನಟಿಯರ ಪಟ್ಟಿ ಇಲ್ಲಿದೆ-
1. ಧನುಷ್
2. ಆಲಿಯಾ ಭಟ್
3. ಐಶ್ವರ್ಯಾ ರೈ ಬಚ್ಚನ್
4. ರಾಮ್ ಚರಣ್ ತೇಜ
5. ಸಮಂತಾ ರುತ್ ಪ್ರಭು
6. ಹೃತಿಕ್ ರೋಷನ್
7. ಕಿಯಾರಾ ಅಡ್ವಾಣಿ
8. ಎನ್‌ಟಿ ರಾಮ ರಾವ್ ಜ್ಯೂ.
9. ಅಲ್ಲು ಅರ್ಜುನ್
10. ಯಶ್