DISTRICT:
ಹಾಸನ: ಶಾಸಕ ಎಂ ಪಿ ಕುಮಾರಸ್ವಾಮಿ ಅವರ ಕಾರು ದ್ವಿಚಕ್ರ ವಾಹನವೊಂದಕ್ಕೆ ಹಿಂಬದಿಯಿಂದ ಢಿಕ್ಕಿಹೊಡೆದು ಮಹಿಳೆ ಸಾವನ್ನಪ್ಪಿರುವ ದಾರುಣ ಘಟನೆ ಬೇಲೂರು ತಾಲೂಕಿನ ಹನುಮಂತನಗರದ ಬಳಿ ನಡೆದಿರುವುದು ತಿಳಿದುಬಂದಿದೆ.
ಬೈಕ್ ನಲ್ಲಿ ಕುಳಿತಿದ್ದ ಮಹಿಳೆ ಹೂವಮ್ಮ(55) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಘಟನೆ. ಆಕೆಯ ಪುತ್ರನಿಗೆ ಗಂಭೀರ ಗಾಯವಾಗಿದೆ. ಅಪಘಾತವಾದ ಸಂದರ್ಭದಲ್ಲಿ ಶಾಸಕರು ಕಾರ್ ನಲ್ಲಿ ಇರಲಿಲ್ಲ ಎನ್ನಲಾಗುತ್ತಿದೆ. ಚಾಲಕ ಪಾನಮತ್ತನಾಗಿದ್ದ ಎಂಬ ಆರೋಪ ಕೇಳಿಬಂದಿದೆ.
ಮುಂದೆ ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಹಿಂಬದಿಯಿಂದ ಢಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ. ಕಾರು ರಿಪೇರಿಗಾಗಿ ಬೆಂಗಳೂರಿಗೆ ಹೋಗುತ್ತಿರುವುದಾಗಿ ಚಾಲಕ ಹೇಳಿಕೊಂಡಿದ್ದು, ಬೇಲೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.