DISTRICT: ಮೈಸೂರು: ಈಗಲೇ ಸಿಎಂ ಯಾರಾಗಬೇಕು ಎಂದು ಮಾತಾಡುವುದು ಕಾಂಗ್ರೆಸ್ಸಿಗೆ ಹೆಚ್ಚು ಹಾನಿ ಮಾಡುತ್ತದೆ. ನಾಯಕರ ಮೆಚ್ಚಿಸಲು ಸಿಎಂ ವಿಚಾರ ಎತ್ತಬಾರದು ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪಕ್ಷಕ್ಕೆ ಬಹುಮತ ಬಂದಾಗ ಸಿಎಂ ಯಾರು ಎಂಬುದು ತೀರ್ಮಾನ ಆಗುತ್ತೆ. ಆಗ ನನಗೂ ಸಿಎಂ ಆಗುವ ಅವಕಾಶ ಸಿಗಬಹುದು. ಆದರೆ ಈಗಲೇ ಆ ಬಗ್ಗೆ ಮಾತನಾಡುವುದು ಪಕ್ಷದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದರು. ಇನ್ಮುಂದೆ ಯಾರು ಸಿಎಂ ವಿಚಾರ ಪ್ರಸ್ತಾಪ ಮಾಡಬಾರದು ಎಂದು ಹಿರಿಯ ನಾಯಕರು ಹೇಳಿದ್ದಾರೆ. ಅದನ್ನು ಮೀರಿಯೂ ಯಾರಾದರೂ ಮಾತಾಡಿದರೆ ಪಕ್ಷ ಅವರ ಮೇಲೆ ಕ್ರಮ ಕೈಗೊಳ್ಳುತ್ತೆ ಎಂದರು.