ನಟ ದುನಿಯಾ ವಿಜಯ್ ಗೆ ನೋಟೀಸ್ ಜಾರಿ

ನಟ ದುನಿಯಾ ವಿಜಯ್ ಗೆ ನೋಟೀಸ್ ಜಾರಿ

ಬೆಂಗಳೂರು: ನಟ ದುನಿಯಾ ವಿಜಯ್ ಹಾಗೂ ಪಾನಿಪುರಿ ಕಿಟ್ಟಿ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಠಾಣೆ ಪೊಲೀಸರು ದುನಿಯಾ ವಿಜಯ್ ಗೆ ನೋಟೀಸ್ ಜಾರಿ ಮಾಡಿದ್ದಾರೆ.

ಗಲಾಟೆ ಪ್ರಕರಣ ಸಂಬಂಧ ಹೇಳಿಕೆ ದಾಖಲಿಸಿಕೊಳ್ಳಲು ದೂರುದಾರ ನಟ ದುನಿಯಾ ವಿಜಯ್ ಗೆ ನೋಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

2018ರಲ್ಲಿ ನಡೆದಿದ್ದ ಗಲಾಟೆ ಪ್ರಕರಣ ರೀ ಓಪನ್ ಆಗಿದ್ದು, ಪಾನಿಪುರಿ ಕಿಟ್ಟಿ ವಿರುದ್ಧ ನಟ ದುನಿಯಾ ವಿಜಯ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಾನಿಪುರಿ ಕಿಟ್ಟಿಯನ್ನು ಠಾಣೆಗೆ ಕರೆದು ಹೇಳಿಕೆ ಪಡೆದಿರುವ ಪೊಲಿಸರು, ನಟ ದುನಿಯಾ ವಿಜಯ್ ಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ.

ನಟ ದುನಿಯಾ ವಿಜಯ್ ಸಿನಿಮಾ ಹೈದ್ರಾಬಾದ್ ನಲ್ಲಿ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.