DISTRICT: ಬಾಗಲಕೋಟೆ: ಆನ್ಲೈನ್ ಮೂಲಕ ನಡೆದ ರಾಷ್ಟ್ರಮಟ್ಟದ ವುಶು ಕ್ರೀಡಾಕೂಟದಲ್ಲಿ ಬಾಗಲಕೋಟೆಯ ಕ್ರೀಡಾಪಟುಗಳು 2ಬಂಗಾರ,2ಬೆಳ್ಳಿ,4ಕಂಚಿನ ಪದಕ ಪಡೆಯುವ ಮೂಲಕ ರಾಜ್ಯದ ಕೀರ್ತಿ ಹೆಚ್ಚಿಸಿದ್ದಾರೆ.. ಕೊರೊನಾ ಲಾಕ್ ಡೌನ್ ಇರುವುದರಿಂದ ಕ್ರೀಡಾಕೂಟಗಳು ಆನ್ಲೈನ್ ಮೂಲಕವೇ ನಡೆಯುತ್ತಿವೆ. ರಾಷ್ಟ್ರೀಯ ಟ್ರೆಡಿಷನಲ್ ವುಶು ಚಾಂಪಿಯನಶಿಪ್ ಸಹಯೋಗ ಭಾರತೀಯ ವುಶು ಸಂಸ್ಥೆ, ಚಂಡೀಗಡ ಯುನಿವರ್ಸಿಟಿ ಮತ್ತು ಪಂಜಾಬ್ ವುಶು ಸಂಸ್ಥೆ ಸಹಯೋಗದಲ್ಲಿ ಮೇ30ರಿಂದ ಜೂನ್ 4ವರೆಗೆ ಸ್ಪರ್ಧೆ ಆನ್ಲೈನ್ ಮೂಲಕವೇ ಜರುಗಿತು. ಕ್ರೀಡಾಪಟುಗಳು ತಮ್ಮ ಮನೆ ಮೇಲೆ, ಮನೆ ಮುಂದೆ ಆನ್ಲೈನ್ ಮೂಲಕ ವುಶು ಕ್ರೀಡಾಕೂಟದಲ್ಲಿ ಭಾಗಿಯಾಗಿ ಬಹುಮಾನ ಪಡೆದು ಸಾಧನೆ ಮಾಡಿದ್ದಾರೆ. ಕೋವಿಡ್ ವಿರುವದರಿಂದ ಸಾಮಾಜಿಕ ಅಂತರದೊಂದಿಗೆ ಕ್ರೀಡಾಪಟುಗಳು ತಮ್ಮ ಪ್ರತಿಭೆ ಮೂಲಕ ಸಾಧನೆಗೈದು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಕ್ರೀಡಾಕೂಟದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಬಾಗಲಕೋಟೆಯ ಮೇಘರಾಜ ಬಡಿಗೇರ, ವಿಷ್ಣು ವರ್ಮಾ, ಪವನ್ ಸಿಮಿಕೇರಿ ಸುಮಿತ್ ಘೋರ್ಪಡೆ, ಮೌನೇಶ್ ಬಡಿಗೇರ್ ,ಖುಷಿ ವರ್ಮಾ ವಿನಾಯಕ ಗರಸಂಗಿ, ಸಾನ್ವಿ ಜಂಗಿ ರಾಣಿಶ್ರೀ ನಾಗರೇಶ ,ಗಣೇಶ ನಾಗರೇಶ ,ವಿದ್ಯಾಧರಿ ಗರಸಂಗಿ ಸವಿತಾ ಹಳ್ಳಿ, ಮೆಹಕ ಜಾಬಿನ ನದಾಫ್, ಕರ್ನಾಟಕ ರಾಜ್ಯಕ್ಕೆ 2 ಬಂಗಾರ 2 ಬೇಳ್ಲಿ 4 ಕಂಚಿನ ಪದಕ ಮತ್ತು ಕರ್ನಾಟಕ ರಾಜ್ಯಕ್ಕೆ ಎರಡನೇ ಸಮಗ್ರ ಪ್ರಶಸ್ತಿ ಪಡೆದು ರಾಜ್ಯದ ಕೀರ್ತಿ ಪತಾಕೆ ಹಾರಿಸಿದ್ದಾರೆ. ರಾಜ್ಯಮಟ್ಟದ ವುಶು ಸಂಸ್ಥೆ ಬಾಗಲಕೋಟೆಯಲ್ಲಿದ್ದು, ಇಲ್ಲಿನ ಕ್ರೀಡಾಪಟುಗಳು ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಭಾಗಿ ತಮ್ಮ ಸಾಧನೆ ತೋರುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕೋವಿಡ್ ವಿರುವದರಿಂದ ಆನ್ಲೈನ್ ಮೂಲಕವೇ ಕ್ರೀಡಾ ಕೂಟ ನಡೆಯಿತು.ಕೆಲವೊಂದು ಆಸನಗಳನ್ನು ವೆಬ್ ನಾರ್ ಮೂಲಕ ನಿರ್ದೇಶನ ಅದರಂತೆ ಕ್ರೀಡಾಪಟುಗಳು ತೋರುವ ಚಾಕಚಕ್ಯತೆ ಮೇಲೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಕ್ರೀಡಾಪಟುಗಳ ಸಾಧನೆಗೆ ಕರ್ನಾಟಕ ರಾಜ್ಯ ವುಶು ಸಂಸ್ಥೆಯ ಅಧ್ಯಕ್ಷ,ಶಾಸಕ ಡಾ. ವೀರಣ್ಣ ಚರಂತಿಮಠ, ಪ್ರಧಾನ ಕಾರ್ಯದರ್ಶಿ ಅಶೋಕ ಸಜ್ಜನ, ಕುಮಾರಸ್ವಾಮಿ ಹಿರೇಮಠ (ಚಿತ್ತರಗಿ) ಅಶೋಕ ಮೊಕಾಶಿ ಬಾಗಲಕೋಟ ಜಿಲ್ಲಾ ಸಂಸ್ಥೆಯ ಅಧ್ಯಕ್ಷ ರಾಜು ನಾಯ್ಕರ ತರಬೇತಿದಾರ ರಾಜ್ಯ ಸಂಸ್ಥೆ ಖಜಾಂಚಿ ಸಂಗಮೇಶ ಲಾಯದಗುಂದಿ ಅಭಿನಂದಿಸಿದ್ದಾರೆ. [video width="1832" height="1080" mp4="http://24x7livekannada.com/wp-content/uploads/2021/06/tour.mp4"][/video] [video width="640" height="480" mp4="http://24x7livekannada.com/wp-content/uploads/2021/06/tour1.mp4"][/video]