DISTRICT:
ವಿಜಯಪುರ : ವಿಜಯಪುರ ನಗರದಲ್ಲಿ ತಡರಾತ್ರಿ ಬಹುತೇಕ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು ಜನತೆ ಬೆಚ್ಚಿ ಬಿದ್ದಿದ್ದಾರೆ.
ತಡರಾತ್ರಿ 11.45 ಕ್ಕೊಮ್ಮೆ ಹಾಗೂ 11.48 ಗಂಟೆಗೊಮ್ಮೆ ಭೂಮಿ ಕಂಪಿಸಿದ ಅನುಭವಾಗಿದ್ದು ಎರಡು ಬಾರಿ ಭೂಮಿ ಕಂಪಿಸಿದ ಹಿನ್ನಲೆಯಲ್ಲಿ ಜನತೆ ಭಯಗೊಂಡು ಮನೆಯಿಂದಾಚೆ ಬಂದು ರಸ್ತೆಗಳ ಮೇಲೆ ನಿಂತು ಅಕ್ಕ ಪಕ್ಕದ ಮನೆಯ ಜನರಿಗೂ ಎಚ್ಚರಿಸಿದ್ದಾರೆ.
ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣೆ ಕೇಂದ್ರ ಕೂಡ ಮಹಾರಾಷ್ಟ್ರದ ಕೊಲ್ಹಾಪುರ ಭೂಕಂಪನದ ಕೇಂದ್ರಬಿಂದುವಾಗಿದ್ದು, ರಿಕ್ಚರ್ ಮಾಪಕದಲ್ಲಿ 3.9 ತೀವ್ರತೆಯೆ ಭೂಕಂಪನ ದಾಖಲಾಗಿದೆ ಎಂದು ವಿಜಯಪುರ ಜಿಲ್ಲಾಡಳಿತ ತಿಳಿಸಿದೆ.