ಈ ಕ್ಷಣ :

ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಟ್ವಿಸ್ಟ್: ಇತರ ಪರೀಕ್ಷಾ ಕೇಂದ್ರಗಳಲ್ಲೂ ಅಕ್ರಮ

Published 16 ಮಾರ್ಚ್ 2023, 14:29 IST
Last Updated 6 ಮೇ 2023, 12:45 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

DISTRICT:

ಕಲಬುರಗಿ: ಪಿಎಸ್ಐ ಪರೀಕ್ಷೆ ಅಕ್ರಮಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಕೇವಲ ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರವಲ್ಲ ಇತರೆ ಪರೀಕ್ಷಾ ಕೇಂದ್ರಗಳಲ್ಲಿಯೂ ಅಕ್ರಮ ನಡೆದಿರುವದು ಬೆಳಕಿಗೆ ಬಂದಿದೆ.. ಇದಕ್ಕೆ ಪೂರಕವಾಗಿ ಕಲಬುರ್ಗಿಯ ಎಂ.ಎಸ್ ಇರಾಣಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಓರ್ವ ಅಭ್ಯರ್ಥಿ ಹಾಗೂ ಮದ್ಯವರ್ತಿಯನ್ನು ಬಂಧಿಸಲಾಗಿದೆ..

ಎಮ್.ಎಸ್.ಇರಾಣಿ ಡಿಗ್ರಿ ಕಾಲೇಜು ಪರೀಕ್ಷೆ ಕೇಂದ್ರದಲ್ಲಿ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಆರೋಪದಲ್ಲಿ ಅಭ್ಯರ್ಥಿ ಪ್ರಭು ಹಾಗು ಅಭ್ಯರ್ಥಿಯಿಂದ 50 ಲಕ್ಷ ಹಣ ಪಡೆದು ಅಕ್ರಮಕ್ಕೆ ಸಹಕರಿಸಿದ ಆರೋಪದಲ್ಲಿ ಚಂದ್ರಕಾಂತ್ ಕುಲಕರ್ಣಿ ಎಂಬಾತನನ್ನು ಸಿಐಡಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ಟೇಷನ ಬಜಾರ್ ಠಾಣೆಯಲ್ಲಿ ಪ್ರತ್ಯೇಕ‌ ಪ್ರಕರಣ ಕೂಡಾ ದಾಖಲಾಗಿದೆ..

ಚಂದ್ರಕಾಂತ್ ಕುಲಕರ್ಣಿ ಪಿಎಸ್‌ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್‌.ಡಿ ಪಾಟೀಲ್‌ನ ಆಡಿಟರ್ ಎಂದು ತಿಳಿದುಬಂದಿದೆ. ಆರ್.ಡಿ.ಪಾಟೀಲ್ ಸಹಕಾರದಿಂದ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮ ಎಸಗಿರುವ ಶಂಕೆ ವ್ಯಕ್ತವಾಗಿದೆ. ಅಕ್ರಮದಲ್ಲಿ‌ ಇನ್ನಷ್ಟು ಪರೀಕ್ಷಾ ಸಿಬ್ಬಂದಿ, ಪರೀಕ್ಷಾ ಕೇಂದ್ರದ ಸಿಬ್ಬಂದಿ ಪಾಲ್ಗೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಬಂದಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ..

ನಮ್ಮ ಮಗ ಪಿಎಸ್ಐ ಆಗ್ಲಿ, ನಮ್ಮ ತಮ್ಮ ಪಿಎಸ್ಐ ಆಗ್ಲಿ ಅಂತ ಸಾಲಸೂಲ ಮಾಡಿ ಲಕ್ಷ‌ - ಲಕ್ಷ‌ ಹಣ ನೀಡಿದವರು ಈಗ ಕೈ ಸುಟ್ಟುಕೊಂಡಂತಾಗಿದೆ.. ಸಾಲ ಮಾಡಿ ಕೊಟ್ಟಿರುವ ಹಣವೂ ಹೋಯ್ತು, ಮಗ ಕೂಡಾ ಜೈಲು ಸೇರಿದ ಅನ್ನೋಹಾಗಾಗಿದೆ.. ಎಮ್.ಎಸ್. ಇರಾಣಿ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಎಸಗಿದ ಆರೋಪದಲ್ಲಿ ಬಂಧಿತನಾದ ಅಭ್ಯರ್ಥಿಯ ತಂದೆ ಶರಣಪ್ಪ, ಚಂದ್ರಕಾಂತ ಕುಲಕರ್ಣಿಗೆ 50 ಲಕ್ಷ ರೂಪಾಯಿ ಕೊಟ್ಟಿದ್ದರಂತೆ, ಕಲಬುರಗಿಯಲ್ಲಿ ಚಿಕ್ಕಪುಟ್ಟ ಕೆಲಸ ಮಾಡಿಕೊಂಡ ಓಡಾಡುತ್ತಿರುವ ಶರಣಪ್ಪ ಸಾಲಸೂಲ‌ ಮಾಡಿ 50 ಲಕ್ಷ ರೂಪಾಯಿ ಹೊಂದಿಸಿಕೊಟ್ಟಿದ್ದರಂತೆ, ಈಗ 'ಅದು ಹೊಯ್ತು - ಇದು ಹೋಯ್ತು - ಇರೋದೆಲ್ಲಾ ಹೋಯ್ತು' ಅನ್ನೋಹಾಗೆ ಒಂದಡೆ  50 ಲಕ್ಷ ರೂಪಾಯಿ ಕೂಡಾ ಕಳೆದುಕೊಂಡು, ಇತ್ತ ಮಗ ಕೂಡಾ ಜೈಲು ಸೇರಿದಂಗೆ ಆಗಿದೆ...

ಶರಣಾಗದಿದ್ರೆ ಆತ್ಮಹತ್ಯೆ ಬೆದರಿಕೆ: ಪಿಎಸ್ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್‌, ನೀರಾವರಿ ಇಲಾಖೆಯ ಜೂನಿಯರ್ ಇಂಜಿನಿಯರ್ ಮಂಜುನಾಥ ಮೇಳಕುಂದಿ ಅಜ್ಞಾತ ಸ್ಥಳದಿಂದ 21 ದಿನಗಳ ನಂತರ ಸ್ವತಾ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗತಿಯಾಗಿದರ ಹಿಂದೆ ರೋಚಕ ಕತೆಯೊಂದು ಬಿಚ್ವಿಕೊಂಡಿದೆ..ಆರೋಪಿ ಮಂಜುನಾಥನ ತಂದೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಸೇವಾ ಅವಧಿಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ತಂದೆಗೆ, ಮಗ ಐಶಾರಮಿ‌ ಜೀವನ‌ ನಡಿಸೋಕೆ ಇಂತಹದೊಂದು ವಾಮ ವಾರ್ಗ ಅನುಸರಿಸಿದ್ದಾನೆ. ಸರ್ಕಾರಿ ಹುದ್ದೆ ನೇಮಕಾತಿಯಲ್ಲಿ ಅಕ್ರಮ ಎಸಗಿ ತೆಲೆ ಮರೆಸಿಕೊಂಡಿದ್ದಾನೆ ಅಂತ ತಿಳಿದು ಹೈರಾಣಾಗಿದ್ದಾರೆ. ಅಲ್ಲದೆ ಆರೋಪಿ ಮಂಜುನಾಥನ ಚಿಕ್ಕಪ್ಪನ ಮಗಳ ಮದುವೆ ಮೇ 8 ಕ್ಕೆ ಏರ್ಪಡಿಸಿದ್ದು, ಮದುವೆ ಸಂದರ್ಭದಲ್ಲಿ ನಿಮ್ಮ‌ ಅಪ್ಪ‌ ಅಮ್ಮ‌ ಸೇರಿ ನಿನ್ನ ಕುಟುಂಬಸ್ಥರನ್ನು ಕರೆದೊಯುವದಾಗಿ ಸಿಐಡಿ ಅಧಿಕಾರಿಗಳು ಎಚ್ಚರಿಸಿದರಂತೆ.. ಮರ್ಯಾದೆ ಹೋದ ಮೇಲೆ ನಾವು ಬದಕಲ್ಲ, ನೀನು ಬಂದು ಶರಣಾಗದಿದ್ರೆ ಆತ್ಮಹತ್ಯೆ ಮಾಡಿಕೊಳ್ತೆನೆ‌ ಅಂತ ಮಂಜುನಾಥನಿಗೆ ಆತನ ತಂದೆ ಖಡಕ್ ಎಚ್ಚರಿಕೆ ನೀಡಿದಾಗ ತೆಲೆ ಮರೆಸಿಕೊಂಡಿದ್ದ ಮಂಜುನಾಥ ಸಿಐಡಿ ಮುಂದೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ...

ಒಟ್ನಲ್ಲಿ ಪಿಎಸ್ಐ ಪರೀಕ್ಷೆ ಅಕ್ರಮ‌ಕ್ಕೆ ದಿನ ಕಳೆದಂತೆ ಹೊಸ ಟ್ವಿಸ್ಟ್‌ಗಳು ಸಿಗುತ್ತಿವೆ. ಅಕ್ರಮದ ಹಿಂದೆ ದೊಡ್ಡ ಕುಳಗಳ ಕೈವಾಡ ಇದೆ. ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರ ಮಾತ್ರವಲ್ಲ ಇತರೆ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿದೆ ಅನ್ನೋ‌ ಕಾಂಗ್ರೆಸ್ ಆರೋಪಕ್ಕೆ ಈಗ ಪೌಷ್ಠಿ ಸಿಕ್ಕಂತಾಗಿದೆ.. ಇನ್ನೂ ಯಾರ್ಯಾರ ಕೊರಳಿಗೆ ಅಕ್ರಮದ ಉರುಳು ಸುತ್ತಿಕೊಳ್ಳಲಿದೆ ಕಾಯ್ದು ನೋಡಬೇಕಿದೆ.


ಹೆಚ್ಚು ಓದಿದ ಸುದ್ದಿ

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ನಟ ದುನಿಯಾ ವಿಜಯ್ ಗೆ ನೋಟೀಸ್ ಜಾರಿ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಕಣಕ್ಕೆ : ಹೆಚ್.ಡಿ ಕುಮಾರಸ್ವಾಮಿ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45