DISTRICT:
ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಕೊಂಚ ಮಟ್ಟಿಗೆ ತಣ್ಣಗಾಗಿದ್ರು ಇಂದಿಗೂ ಕೆಲವೊಂದು ಕಡೆಗಳಲ್ಲಿ ಈ ಕುರಿತು ಚರ್ಚೆಗಳು ನಡೆಯುತ್ತಲೆ ಇದೆ. ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಶಾಲೆಗೆ ಬರಬಾರದು ಎಂದು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದೀಗ ರಾಯಚೂರಿನ ವಿದ್ಯಾರ್ಥಿಯೊಬ್ಬರು ಹಿಜಾಬ್ ಶಾಲು ಧರಿಸಿಯೇ 16 ಚಿನ್ನದ ಪದಕ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ.
ಬೆಳಗಾವಿಯಲ್ಲಿ ನಿನ್ನೆ(ಮಾ.10) ಅದ್ದೂರಿಯಾಗಿ ವಿಟಿಯು 21ನೇ ವಾರ್ಷಿಕ ಘಟಿಕೋತ್ಸವ ನಡೆಯಿತು. ಲೋಕಸಭೆ ಸಭಾಪತಿ ಓಂ ಬಿರ್ಲಾ ಅವರು ಮೂವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪ್ರಧಾನ ಮಾಡಿದರು. ಇದೇ ವೇಳೆ ಯುನಿವರ್ಸಿಟಿಗೆ ಟಾಪರ್ ಆದ ರಾಯಚೂರಿನ ವಿದ್ಯಾರ್ಥಿನಿ ಬುಷ್ರಾ ಮತೀನ್ ಹಿಜಾಬ್ ಧರಿಸಿಯೇ 16 ಚಿನ್ನದ ಪದಕ ಪಡೆದು ಎಲ್ಲರ ಗಮನ ಸೆಳೆದರು.
ಘಟಿಕೋತ್ಸವದಲ್ಲಿ ಮೊದಲಿಗೆ ಮೂವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪ್ರಧಾನ ಮಾಡಲಾಯಿತು. ಪದ್ಮ ಭೂಷಣ ಪುರಸ್ಕೃತ ಹಾಗೂ ಇನ್ಫೋಸಿಸ್ ಸಹ ಸಂಸ್ಥಾಪಕ ಸೇನಾಪತಿ ಕ್ರಿಶ್ ಗೋಪಾಲಕೃಷ್ಣನ್, ಪದ್ಮ ಭೂಷಣ ಪುರಸ್ಕೃತ ಹೈದರಾಬದ್ ನ ಭಾರತೀಯ ಬಯೋಟೆಕ್ ಅಧ್ಯಕ್ಷ ಡಾ.ಕೃಷ್ಣ ಅವರಿಗೆ ಗಣ್ಯರು ಪ್ರಶಸ್ತಿ ಪ್ರಧಾನ ಮಾಡಿದರು.
ಪದ್ಮಶ್ರೀ ಪುರಸ್ಕೃತ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಹೈ ಎನರ್ಜಿ ಭೌತಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೋ.ರೋಹಿಣೀ ಗೊಡಬೋಲೆ ಅವರಿಗೆ ಅವರ ಅನುಪಸ್ಥಿತಿಯಲ್ಲಿ ಡಾಕ್ಟರ್ ಆಫ್ ಸೈನ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಯಚೂರಿನ ಎಸ್ ಎಲ್ ಎನ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಬುಷ್ರಾ ಮತೀಶ್ 16 ಚಿನ್ನದ ಪದಕಗಳನ್ನ ತನ್ನದಾಗಿಸಿಕೊಂಡರೆ. ಬೆಂಗಳೂರಿನ ಬಿಎನ್ ಎಂ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಸ್ವಾತಿ ದಯಾನಂದ್ 7, ಬೆಂಗಳೂರಿನ ರಮ್ಯಾ ಟಿ 6, ಪ್ರಜ್ಞಾ ಎನ್ 4, ತೇಜಸ್ವಿನಿ ಆರ್ 4, ಅಶ್ವಿತಾ ಎನ್ 3, ಶಿವಮೊಗ್ಗದ ಪಲ್ಲವಿ ಪಿ 4. ದಾವಣಗೆರೆಗೆಯ ಸವಿತಾ ಎಚ್ ಟಿ 3 ಚಿನ್ನದ ಪದಕಗಳನ್ನ ಪಡೆದರು.