DISTRICT: ರಾಮನಗರ: ಇತ್ತೀಚೆಗೆ ಮ್ಯಾನ್ಹೋಲ್ ನಲ್ಲಿ ಇಳಿದು ಕೆಲಸನಿರ್ವಹಿಸುತ್ತ ಮೃತರಾದ ಮೂವರಲ್ಲಿ ಇಬ್ಬರಿಗೆ ರಾಮನಗರ ನಗರಸಭೆ ವತಿಯಿಂದ ತಲಾ 10ಲಕ್ಷ ರೂ ಪರಿಹಾರ ವಿತರಿಸಲಾಗಿತ್ತು. ರಮೇಶ್ ಎಂಬ ಮೃತ ವ್ಯಕ್ತಿಯ ಅವಲಂಬಿತರನ್ನು ಗುರುತಿಸಿ ಅವರಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 10 ಲಕ್ಷ ರೂ. ಚೆಕ್ ನ್ನು ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ ಅವರು ವಿತರಿಸಿದರು. ರಮೇಶ್ ಅವರ ಪತ್ನಿಗೆ 2.5 ಲಕ್ಷ ರೂ, ತಾಯಿಗೆ 2.5 ಲಕ್ಷ ರೂ ಹಾಗೂ ಅವರ ಮಗಳ ಹೆಸರಿನಲ್ಲಿ 5 ಲಕ್ಷ ನಿಶ್ಚಿತ ಠೇವಣಿ ಮಾಡಲಾಗಿದ್ದು, ಅವರು ಪ್ರಾಪ್ತ ವಯಸ್ಸಿಗೆ ಬಂದ ಮೇಲೆ ಪಡೆಯಬಹುದಾಗಿದೆ. ಇದೇ ಸಂದರ್ಭದಲ್ಲಿ ರಾಮನಗರ ನಗರಸಭೆ ಪೌರಾಯುಕ್ತ ನಂದಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಲಲಿತಾ ಅವರು ಉಪಸ್ಥಿತರಿದ್ದರು.