DISTRICT: ರಾಮನಗರ: ದತ್ತು ಪಡೆದ ಗ್ರಾಮಗಳ ಮೂಲಭೂತ ಸೌಕರ್ಯಗಳ ಜೊತೆಗೆ ಗ್ರಾಮದ ದಾನಿಗಳಿಂದ ಹಲವಾರು ರೀತಿಯ ಅಭಿವೃದ್ದಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಡಿವೈಎಸ್ಪಿ ಕೆ.ಎನ್. ರಮೇಶ್ ತಿಳಿಸಿದರು. ಚನ್ನಪಟ್ಟಣ ತಾಲೂಕಿನ ಹನುಮಾಪುರದೊಡ್ಡಿಯಲ್ಲಿ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಿಂದ ದತ್ತು ತಗೆದುಕೊಂಡಿರುವ ಗ್ರಾಮದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ,ಪ್ರತಿಯೊಬ್ಬರ ಸಹಕಾರ ವಿದ್ದರೇ ಯಾವುದೇ ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳಲು ಸಹಕಾರಿಯಾಗಿದೆ. ಗ್ರಾಮಕ್ಕೆ ಬೇಕಾಗುವ ಕೆಲಸಗಳ ಬಗ್ಗೆ ತಿಳಿಸಬೇಕೆಂದರು. ಈ ಸಂದರ್ಭದಲ್ಲಿ ಮಾತನಾಡಿದ ಠಾಣೆಯ ಪಿ.ಎಸ್.ಐ. ಸದಾನಂದ ಗ್ರಾಮದ ಅಭಿವೃದ್ದಿಗೆ ಠಾಣೆ ವ್ಯಾಪ್ತಿಯಲ್ಲಿ ಅವಶ್ಯಕ ವಾಗುವ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದಅವರು, ಗ್ರಾಮದ ಅಭಿವೃದ್ದಿಗೆ ಯುವಕರು ಮುಂದಾಗಬೇಕು ಎಂದರು.