ಈ ಕ್ಷಣ :

ಮನೆಯಂಗಳವನ್ನು ಪಕ್ಷಿಕಾಶಿ ಮಾಡಿಕೊಂಡ ಪರಿಸರ ಪ್ರೇಮಿ ಮರಸಪ್ಪ ರವಿ

Published 16 ಮಾರ್ಚ್ 2023, 12:42 IST
Last Updated 7 ಮೇ 2023, 01:26 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

DISTRICT:

ರಾಜೇಶ್ ಕೊಂಡಾಪುರ

ರಾಮನಗರ: ಆ ರಾಜಕೀಯ ಕ್ಷೇತ್ರದಲ್ಲಿ ಬ್ಯುಸಿಯಾಗಿರೋ ವ್ಯಕ್ತಿ. ಜೊತೆಗೆ ರಾಜ್ಯದ ಪಕ್ಷವೊಂದರ ಅಧ್ಯಕ್ಷರ ಮಾಧ್ಯಮ ವಕ್ತಾರ. ಆದರೇ ಇಂತಹ ಬ್ಯೂಸಿ ಸೆಡ್ಯೂಲ್ನಲ್ಲೂ ಪ್ರಾಣಿ-ಪಕ್ಷಿಗಳ ಬಗ್ಗೆ ಎಲ್ಲಿಲ್ಲದ ಮೋಹ!

ಹೌದು, ರಾಜಕಾರಣದಲ್ಲಿ ಇರುವ ವ್ಯಕ್ತಿಗಳು ಅದರಲ್ಲಿಯೂ ಅಧಿಕಾರಸ್ಥ ಪ್ರಮುಖ ರಾಜಕಾರಣಿಯೊಬ್ಬರ ಕಿಚನ್ ಕ್ಯಾಬಿನೇಟ್ ನಲ್ಲಿ ಸ್ಥಾನ ಸಿಕ್ಕಿ ಬಿಟ್ಟರಂತೂ ಅವರ ಕಾಲುಗಳೇ ನೆಲದ ಮೇಲೆ ನಿಲ್ಲುವುದು ಕಡಿಮೆಯೇ. ಅಂತಹದ್ದರಲ್ಲಿ ಈ ವ್ಯಕ್ತಿ ಸ್ವಲ್ಪ ಬಿಡುವು ಸಿಕ್ಕರೂ ಸಾಕು ಕ್ಯಾಮರಾ ಹೆಗಲಿಗೆ ನೇತು ಹಾಕಿಕೊಂಡು ಕಾಡು-ಮೇಡಿನ ಕಡೆ ಮುಖ ಮಾಡುತ್ತಾರೆ. ಅಲ್ಲದೇ ಬಿಡುವು ಸಿಕ್ಕಲಿ ಬಿಡಲಿ ತನ್ನ ಮನೆಯ ಅಂಗಳವನ್ನೇ ಪಕ್ಷಿಕಾಶಿ ಮಾಡಿಕೊಂಡು ನೂರಾರು ಪಕ್ಷಿಗಳಿಗೆ ಆಶ್ರಯ ನೀಡಿದ್ದಾರೆ. ಅವರು ಮತ್ಯಾರೂ ಅಲ್ಲ ಕನಕಪುರದ ಮಳಗಾಳಿನ ಮರಸಪ್ಪ ರವಿ.

ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಮೇಳೆಕೋಟೆ ಇವರ ಮರಸಪ್ಪ ರವಿ ಅವರ ಸ್ವಗ್ರಾಮ. ಪ್ರಸ್ತುತ ಇವರು ಕನಕಪುರ ಪಟ್ಟಣದ ಮಳಗಾಳುವಿನಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಾ, ರಾಜಕಾರಣದ ಜೊತೆಗೆ ರೋಟರಿ, ಲಯನ್ಸ್ ಸಂಸ್ಥೆಗಳಂತಹ ಸಮಾಜ ಮುಖಿ ಸಂಘಟನೆಗಳಲ್ಲಿ ತೊಡಗಿಸಿಕೊಂಡು, ಅಳಿವಿನಂಚಿನಲ್ಲಿರುವ ಪಕ್ಷಿಗಳ ಉಳಿವಿಗಾಗಿ ಶ್ರಮಿಸುತ್ತಿರುವ ಪ್ರೇಮಿ. ಪಕ್ಷಿಗಳಿಗಾಗಿಯೇ ಮನೆಯ ಎದುರು ನೂರಾರು ಗೂಡು ನಿರ್ಮಿಸಿ ಪಕ್ಷಿಗಳಿಗೆ ಆಶ್ರಯದಾತರಾಗಿದ್ದಾರೆ. ಜೊತಗೆ ಅವುಗಳಿಗೆ ಅಗತ್ಯವಿರುವ ಸಿರಿಧಾನ್ಯಗಳನ್ನು ಹಾಕಿ ಅವುಗಳ ಪಾಲನೆ ಪೋಷಣೆ ಮಾಡುತ್ತಾ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇವರು ಅಳಿವಿನಂಚಿನಲ್ಲಿರುವ ಗುಬ್ಬಚ್ಚಿಗಳಂತಹ ಪಕ್ಷಿಗಳ ಉಳಿವಿಗೆ ಶ್ರಮಿಸುತ್ತಿದ್ದಾರೆ.‌ ತಮ್ಮ ಪುಟ್ಟ ಮನೆಯ ಮುಂಭಾಗ ಬೊಂಬಿನಲ್ಲಿ ರಂಧ್ರಗಳನ್ನು ಕೊರೆದು ಗುಬ್ಬಚ್ಚಿಗಳು ನೆಲೆಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಅಲ್ಲದೇ ನಿತ್ಯ ಪಕ್ಷಿಗಳಿಗೆ ಮನೆಯ ಸುತ್ತಲಿನ ಲಭ್ಯ ಇರುವ ಅಲ್ಪ ಸ್ಥಳದಲ್ಲಿ ನಂದನವನವನ್ನಾಗಿಸಿಕೊಂಡು ಪಕ್ಷಿಗಳಿಗೆ ಅನುಕೂಲವಾಗಲೆಂದೇ ಮಾವು, ಸೀಬೆ, ದಾಳಿಂಬೆ, ಅಂಜೂರ, ಸಪೋಟಾ, ಬೆಣ್ಣೆ ಹಣ್ಣು ಸೇರಿದಂತೆ ಮೊದಲಾದ ಗಿಡಗಳನ್ನು ಬೆಳೆಸಿದ್ದಾರೆ. ಇವರ ಕಿರು ಉದ್ಯಾನದಲ್ಲಿ ನಿತ್ಯ ಅತಿಥಿಗಳಾಗಿ ಗುಬ್ಬಚ್ಚಿ, ಕಾಜಾಣ, ಕೋಗಿಲೆ, ಗಿಣಿ, ಅಪರೂಪದ ಸನ್ಬರ್ಡ್, ದರ್ಜೆಯ ಹಕ್ಕಿಗಳು ಬರುತ್ತವೆ. ಸುಂದರ ಕೈತೋಟವನ್ನಾಗಿ ಮನೆಯ ಅಂಗಳವನ್ನಾಗಿ ಮಾಡಿಕೊಂಡು, ನಿತ್ಯವೂ ಪಕ್ಷಿಗಳ ಕಲರವದೊಂದಿಗೆ ತಮ್ಮ ಕುಟುಂಬದೊಂದಿಗೆ ಖುಷಿ ಅನುಭವಿಸುತ್ತಿರುವುದರ ಜೊತೆಗೆ ತಮ್ಮ ಮನೆಗೆ ಬರುವ ಅತಿಥಿಗಳು, ಸ್ನೇಹಿತರು ಮತ್ತು ಸಂಬಂಧಿಗಳಿಗೆ ಪರಿಸರ, ಪ್ರಾಣಿ-ಪಕ್ಷಿಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಇದಿಷ್ಟೇ ಅಲ್ಲ, ತಾವು ಸಕ್ರಿಯರಾಗಿರುವ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಪರಿಸರ, ಪ್ರಾಣಿ-ಪಕ್ಷಿಗಳ ರಕ್ಷಣೆ ಬಗ್ಗೆ ಪುಟ್ಟದೊಂದು ಉಪನ್ಯಾಸ ಇದ್ದೇ ಇರುತ್ತದೆ. ಅಲ್ಲದೇ ತಾವು ಅಧ್ಯಕ್ಷರಾಗಿದ್ದ ಸಂಘಟನೆಗಳಲ್ಲಿ ಹತ್ತಾರು ವರ್ಷಗಳಿಂದ ಗಿಡಗಳನ್ನು ವಿತರಣೆ ಮಾಡುವುದಲ್ಲದೇ, ಅವುಗಳನ್ನು ತೆಗೆದುಕೊಂಡು ಹೋದ ಗಣ್ಯರುಮ ಸ್ನೇಹಿತರು ಮತ್ತು ಅತಿಥಿಗಳ ಮನೆಗಳಿಗೆ ಆಕಸ್ಮಿಕವಾಗಿ ಭೇಟಿಯಾದ ಸಂದರ್ಭದಲ್ಲಿ ತಾವು ಕಾರ್ಯಕ್ರಮದಲ್ಲಿ ನೀಡಿದ ಗಿಡಗಳ ಬಗ್ಗೆ ಮಾಹಿತಿ ಪಡೆದು ಅವುಗಳ ಬೆಳವಣಿಗೆಯನ್ನು ಸ್ವತಃ ನೋಡಿ, ಕಣ್ತುಂಬಿಕೊಳ್ಳುವ ಪರೀಕ್ಷ ಬುದ್ದಿ ಮರಸಪ್ಪ ರವಿಯವರದ್ದು.

ಹವ್ಯಾಸಿ ಛಾಯಾಗ್ರಾಹಕ:

ಮರಸಪ್ಪ ರವಿಯವರ ಹವ್ಯಾಸ ಇಷ್ಟಕ್ಕೆ ನಿಂತಿಲ್ಲ. ಸ್ನೇಹಿತರ ಜೊತೆಗೆ ಕಾಡುಮೇಡಿಗೆ ಟ್ರಕಿಂಗ್ ಗೆ ಹೋಗುವ ಇವರ ಹೆಗಲಲ್ಲಿ ಎರಡ್ಮೂರು ಕ್ಯಾಮೆರಗಳು ಹೆಗಲಿಗೇರುತ್ತವೆ. ಅಲ್ಲಿ ಸಿಗುವ ಪ್ರಾಣಿ-ಪಕ್ಷಿಗಳ ಸಾವಿರಾರು ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಚಿತ್ರಿಕರಿಸಿ, ಸಂಗ್ರಹಿಸಿ, ತಾವು ಕ್ಲಿಕ್ಕಿಸಿ, ಚಿತ್ರಿಕರಿಸಿದ ಪಕ್ಷಿಗಳ ಬಗ್ಗೆ ಮಾಹಿತಿ ಪಡೆದು ಅದನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ಹಂಚಿಕೊಳ್ಳುತ್ತಾರೆ, ಅಲ್ಲದೇ ಇವರು ತೆಗೆದ ಪಕ್ಷಿ-ಪ್ರಾಣಿಳ ಚಿತ್ರಗಳು ಸ್ಥಳೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45