DISTRICT: ಸರ್ಕಾರ ಎರಡೆ ಅಲೆ ಸಿದ್ದತೆಯಲ್ಲಿ ಸಂಪೂರ್ಣ ವಿಫಲವೇ ಸಾವುಗಳ ಹೆಚ್ಚಾಗಲು ಪ್ರಮುಖ ಕಾರಣ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದರು. ದೇವನಹಳ್ಳಿ ಪಟ್ಟಣದ ಗೋರಿಬಾಗಿಲು, ಹೊಸ ಬಸ್ ನಿಲ್ದಾಣದ ಬಡವರಿಗೆ ದೇವನಹಳ್ಳಿ ಬ್ಲಾಕ್ ಕಾಂಗ್ರೇಸ್ ಪಕ್ಷದಿಂದ ಊಟದ ಬಾಕ್ಸ್ ಹಾಗೂ ಪತ್ರಕರ್ತರಿಗೆ ದಿನಸಿಕಿಟ್ ಗಳನ್ನು ವಿತರಿಸಿದ ನಂತರ ಮಾತನಾಡಿದ ಅವರು ಬೆಂಗಳೂರಿನಲ್ಲಿ ಎರಡನೆ ಅಲೆ ಸಿದ್ದತೆಯನ್ನೆ ಮಾಡಿಕೊಳ್ಳದ ಕಾರಣದಿಂದ ಸ್ಮಶಾನದಲ್ಲಿ ಜಾಗವಿಲ್ಲದೆ ಜನ ಪರದಾಡುವ ಸ್ಥಿತಿ ನಿರ್ಮಾಣವಾಯಿತು ಎಂದರು. ಜನರ ಆರೋಗ್ಯವನ್ನು ಸಂಪೂರ್ಣ ಕಡೆಗಣಿಸಿದ ಪರಿಣಾಮ ಸಾವುಗಳ ಏರಿಕೆ ತಡೆಯಲಾಗದೆ ಮೌನವಹಿಸಿದ ಸರ್ಕಾರವಾಗಿದೆ.ಪ್ರಧಾನ ನರೇಂದ್ರ ಮೋದಿಯವರು ಮೂರು ತಿಂಗಳು ಮನೆಯಿಂದ ಹೊರ ಬರದೆ ತಟಸ್ಥರಾಗಿದ್ದಾರೆ.ಜನರ ಸಂಕಷ್ಟಕ್ಕೆ ಒಂದಿಷ್ಟು ಅನುಕಂಪ ತೊರದ ಸರ್ಕಾರವಾಗಿದೆ. ರೆಂಡಿಸಿಆರ್ ದಂಧೆಯಲ್ಲಿ ಸರ್ಕಾರ ಸಂಪೂರ್ಣ ಮಗ್ನವಾಗಿದ್ದು ಜನರ ಶಾಪ ಬಿಜೆಪಿ ಸರ್ಕಾರ ಮೇಲಿದೆ ಎಂದು ಹೆಳಿದರು. ಲಾಕ್ ಡೌನ್ ಸಂಕಷ್ಟ ಎದುರಿಸುತ್ತಿರುವ ಸಂತ್ರಸ್ಥರಿಗೆ ಸರ್ಕಾರ ಘೋಷಿಸಿರುವ ಪ್ಯಾಕೇಜ್ ಬಡವರಿಗೆ ಮುಟ್ಟುವಂತಾಗಲಿ.ಕೊರೊನ ಸಂದರ್ಭದಲ್ಲಿ ಪ್ರಾಣದ ಹಂಗುತೊರೆದು ದುಡಿಯುತ್ತಿರುವ ಮಾಧ್ಯಮದವರಿಗೆ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಒಂದು ತಿಂಗಳಿಗೆ ಆಗುವಷ್ಟು ದಿನಸಿಕಿಟ್ ವಿತರಿಸಲು ಮುಂದಾಗಿರುವುದು ಪ್ರಶಂಸನೀಯವೆಂದರು. ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ ಪೆಟ್ರೋಲ್ ಹಾಗೂ ಡಿಸೇಲ್,ಅಡಿಗೆ ಅನಿಲ ಬೆಲೆಗಳು ಗಗನಕ್ಕೆ ಮುಟ್ಟಿದೆ.ಷೇರು ರೂಪಾಯಿ ಮೌಲ್ಯ ಪಾತಾಳಕ್ಕೆ ಮುಟ್ಟಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಡವರ ಮೇಲೆ ಬೆಲೆ ಏರಿಕೆ ಬರೆ ಎಳೆಯುತಿದೆ.ಪ್ರಧಾನಿ ಮೋದಿಯವರು 20ಲಕ್ಷ ರೂಗಳು ಪ್ಯಾಕೇಜ್ ಯಾರಿಗೆ ಎಲ್ಲಿ ತೊಲುಪಿದೆ ಎಂಬುದು ಸ್ವಷ್ಟಪಡಿಸಿಕೊಳ್ಳಬೇಕು. ಸುಳ್ಳು ಭರವಸೆ ದೇಶದ ಜನತೆಗೆ ಅರ್ಥವಾಗಿದೆ.ಇನ್ನೂ ಮುಂದಾದರು ಜನಪರವಾದ ಕೆಲಸಗಳಿಗೆ ಒತ್ತು ನೀಡಬೇಕೆಂದು ತಿಳಿಹೇಳಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸಿ.ಶ್ರೀನಿವಾಸ್,ಮಾಜಿ ಶಾಸಕರಾದ ವೆಂಕಟಸ್ವಾಮಿ, ಮುನಿನರಸಿಂಹಯ್ಯ,ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರಸನ್ನಕುಮಾರ್ ರಾಮಚಂದ್ರಪ್ಪ, ಕೊದಂಡರಾಮ್, ಉಪಾಧ್ಯಕ್ಷ ಶಾಂತ ಕುಮಾರ್,ಹಿರಿಯ ಮುಖಂಡರಾದ ಜಗನ್ನಾಥ್,ಚಿನ್ನಪ್ಪ, ಅಣ್ಣೇಶ್ವರ ಚಂದ್ರಶೇಖರ್, ಸೋಮಣ್ಣ,ಯುತ್ ಕಾಂಗ್ರೇಸ್ ಅಧ್ಯಕ್ಷ ಸುಮಂತ್, ಲಕ್ಷ್ಮಣ್ ಗೌಡ,ಪುರಸಬೆ ಅಧ್ಯಕ್ಷೆ ರೇಖಾ ಸದಸ್ಯ ಚಂದ್ರಪ್ಪ,ಶ್ರೀಧರ್ ಸೇರಿದಂತೆ ಅನೇಕರಿದ್ದರು.