DISTRICT: ರಾಮನಗರ: ನಮ್ಮ ನಡುವೆ ಸಾಮಾನ್ಯರಲ್ಲಿ ಸಾಮಾನ್ಯರಂತಿದ್ದ ದಲಿತ ಕವಿ, ಆತ್ಮೀಯ ಸ್ನೇಹಿತರಾದ ಡಾ,ಸಿದ್ದಲಿಂಗಯ್ಯ ಅವರ ನಿಧನ ಅತ್ಯಂತ ದುಃಖಕರ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ವಿಷಾದ ವ್ಯಕ್ತಪಡಿಸಿದರು. ಚನ್ನಪಟ್ಟಣ ನಗರದ 5ನೇ ಅಡ್ಡರಸ್ತೆಯಲ್ಲಿನ ಭಾಜಪ ಕಚೇರಿಯಲ್ಲಿ ಏರ್ಪಡಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಪಾಲ್ಗೂಂಡು ಮಾತನಾಡಿ, ಸಿದ್ದಲಿಂಗಯ್ಯ ಹಾಗೂ ನಾನು ತುಂಬಾ ಆತ್ಮೀಯರಾಗಿದ್ದು, ರಾಜಕೀಯ ಹೊರತುಪಡಿಸಿ ನನ್ನ ಅವರ ಒಡನಾಟ ಸದಾ ಸ್ಮರಣೀಯ. ಅವರ ನಿಧನ ವೈಯಕ್ತಿಕವಾಗಿ ನನಗೆ ಬಹಳ ಬೇಸರ ಉಂಟುಮಾಡಿದೆ ಎಂದರು. ತಮ್ಮ ಸಾಹಿತ್ಯ, ಕವಿತೆ, ಬರಹಗಳ ಮುಖಾಂತರ ಸಮಾಜದಲ್ಲಿ ದನಿ ಇಲ್ಲದವರ ದನಿಯಾಗಿದ್ದ ಅವರ ಸಾವು ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದ್ದು ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದರು. ಇಗ್ಗಲೂರು ಜೂನಿಯರ್ ಕಾಲೇಜಿನ ಆಂಗ್ಲ ಪ್ರಾಧ್ಯಾಪಕ ರಾದ ಚಂದ್ರು ಸಾಕ್ಯವಂಶಿ ಸಿದ್ದಲಿಂಗಯ್ಯರವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸುವ ಕೆಲಸ ಮಾಡಿದ್ದು, ಅವರ ಅದರಿಂದಾಚೆಗೂ ಮೀರಿದವೆಂಬುದನ್ನು ಇಂದಿನ ಸಭೆ ಸಾಕ್ಷಿಕರಿಸಿದ್ದು, ದಮನಿತರ ದನಿಯಾಗಿ, ಎಲ್ಲರಿಗೂ ಸಮಾನತೆಯ ಸಂದೇಶ ಸಾರುತ್ತಿದ್ದ ಕೊಂಡಿಯೊಂದು ಇಂದು ನಮ್ಮಿಂದ ಕಳಚಿದ್ದು, ತೀರಾ ವಿಷಾದಕರ. ಸಿದ್ದಲಿಂಗಯ್ಯ ಅವರು ನಮ್ಮ ಜಿಲ್ಲೆಯವರು, ಅವರೊಟ್ಟಿಗೆ ಕೆಲ ಸಮಯ ಕಳೆದ ನಾವುಗಳು ಪುಣ್ಯವಂತರೆಂದು ಇದೇ ವೇಳೆ ನೆನೆದು ಬಾವುಕರಾದರು. ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ರಾಂಪುರ ಮಲವೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾಲ್ಲೂಕು ಅಧ್ಯಕ್ಷ ಜಯರಾಮು, ನಗರಾಧ್ಯಕ್ಷ ಶಿವಕುಮಾರ್, ಆನಂದಸ್ವಾಮಿ, ಎಂ.ಕೆ.ನಿಂಗಪ್ಪ, ಕುಳ್ಳಪ್ಪ, ಹೆಚ್.ಎಸ್.ಪ್ರೇಮ್ ಕುಮಾರ್, ಸದಾನಂದ,ಚಕ್ಕಲೂರು ಚೌಡಯ್ಯ ಮುಂತಾವರಿದ್ದರು.