DISTRICT:
ಹೆತ್ತವರ ಸಾವಿನ ನೋವಿನಲ್ಲೂ ಬುಧವಾರ ಮೂವರು ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಬಳಿಕ ಹೆತ್ತವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ.
ಶಿಗ್ಗಾವಿಯ ಜೆಎಂಜೆ ಫ್ರೌಢಶಾಲೆಯ ವಿದ್ಯಾರ್ಥಿ ಹನುಮರಹಳ್ಳಿ ಗ್ರಾಮದ ಯಶವಂತ ಉಮೇಶ ಸಂಶಿ ಅವರ ತಾಯಿ ಸರಸ್ವತಿ ಉಮೇಶ್ ಸಂಶಿ ಮಂಗಳವಾರ ನಿಧನರಾಗಿದ್ದಾರೆ. ತಾಯಿಯನ್ನ ಕಳೆದುಕೊಂಡ ನೋವಿನಲ್ಲಿದ್ದ ಉಮೇಶ್ ಗೆ ಶಿಕ್ಷಕರ ತಂಡ ಆತ್ಮಸ್ಥೈರ್ಯ ತುಂಬಿದ ಬಳಿಕ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದಾನೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ದೂದಿಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಮಧು ಚಂದ್ರಪ್ಪ ಅಡಗಂಟಿ ಎಂಬ ವಿದ್ಯಾರ್ಥಿನಿಯ ತಂದೆ ಚಂದ್ರಪ್ಪ ನಿಧನರಾಗಿದ್ದಾರೆ. ತಂದೆಯ ಸಾವಿನ ನೋವಿನಲ್ಲೂ ಪಟ್ಟಣದ ಸಂಗಮೇಶ್ವರ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ಮಧು ಚಂದ್ರಪ್ಪ ಪರೀಕ್ಷೆ ಬರೆದಿದ್ದಾರೆ.
ಗದಗ ಜಿಲ್ಲೆಯ ನರಗುಂದ ಪಟ್ಟಣದ ಕಲ್ಲಪ್ಪ ಮೆಣಸಿನಕಾಯಿ ಹೃದಯಾಘಾತದಿಂದ ನಿಧನಹೊಂದಿದ್ದಾರೆ. ತಂದೆಯ ಅಗಲಿಕೆಯ ನೋವಿನಲ್ಲೂ ಆತನ ಮಗಳು ಭುವನೇಶ್ವರಿ ಪರೀಕ್ಷೆ ಬರೆದಿದ್ದಾರೆ. ಹೆತ್ತವರನ್ನ ಕಳೆದುಕೊಂಡ ನೋವಲ್ಲೂ ಪರೀಕ್ಷೆ ಬರೆದಿರುವ ಮಕ್ಕಳ ಭವಿಷ್ಯ ಉಜ್ವಲವಾಗಲಿ ಅಲ್ವಾ?