DISTRICT: ತುಮಕೂರು: ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಆರೋಗ್ಯ ಸೇವೆ ದೊರಕಬೇಕು ಎಂಬ ಸಂಸ್ಥೆಯ ಉದ್ದೇಶವನ್ನು ಜನಸಮುದಾಯ ತಲುಪಿಸುವ ನಿಟ್ಟಿನಲ್ಲಿ ಮತ್ತು ಕರೋನ ಎರಡನೇ ಅಲೆಯಲ್ಲಿ ಕೊರಟಗೆರೆ ತಾಲ್ಲೂಕನ್ನು ಕರೋನಾ ಮುಕ್ತ ಮಾಡುವ ನಿಟ್ಟಿನಲ್ಲಿ ಕ್ಷೇತ್ರದ ಜನರ ಆರೋಗ್ಯ ರಕ್ಷಣೆಗೆ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 12 ವೈದ್ಯರ ತಂಡ ಇಂದಿನಿಂದ (ಜೂನ್-14 :ಸೋಮವಾರ)ಮತ್ತೆ 2ನೇ ಹಂತದ ಆರೋಗ್ಯ ತಪಾಸಣೆಯ ಕ್ಷೇಮಾಭಿಯಾನ ಆಂದೋಲನ ಮತ್ತು ವೈದ್ಯಕೀಯ ಕಿಟ್ ವಿತರಣೆ ಕಾಯಕಕ್ಕೆ ಇಳಿದಿದೆ. ಸಮುದಾಯ ವೈದ್ಯಕೀಯ ವಿಭಾಗದ ವೈದ್ಯರಾದ ಡಾ.ಅನುಪಮ ನೇತೃತ್ವದ 12 ಮಂದಿ ವೈದ್ಯರ ತಂಡವನ್ನು ಕೊರಟಗೆರೆ ಕ್ಷೇತ್ರಕ್ಕೆ ನಿಯೋಜಿಸಿರುವುದಾಗಿ ತಿಳಿಸಿರುವ ಕ್ಷೇತ್ರದ ಶಾಸಕರು ಹಾಗೂ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದಶರ್ಿ ಡಾ.ಜಿ.ಪರಮೇಶ್ವರ ಅವರು ಜನತೆ ಆರೋಗ್ಯ ರಕ್ಷಣೆ ಮಾಡುವುದು ತಮ್ಮ ಮೊದಲ ಆದ್ಯತೆ ಎಂದಿದ್ದಾರೆ. ಕಾಲೇಜಿನ ವೈದ್ಯರ ಜೊತೆಗೆ ಸ್ಥಳೀಯ ಕಂದಾಯ,ಆರೋಗ್ಯ ಹಾಗೂ ಪಂಚಾಯತ್ ಇಲಾಖೆಯೊಂದಿಗೆ ಹಮ್ಮಿಕೊಂಡಿರುವ 'ವೈದ್ಯರ ನಡೆ -ಹಳ್ಳಿಯ ಕಡೆಗೆ ಮತ್ತು 'ವೈದ್ಯಕೀಯ ಕಿಟ್' ವಿತರಣೆಯನ್ನು ಸೋಮವಾರದಂದು ಓಬಳಾಪುರ ಗ್ರಾಮ ಪಂಚಾಯಿತಿಯಿಂದ ಮತ್ತೆ ಮುಂದುವರಿಸಲಾಯಿತು. ಕೋರ ಹೋಬಳಿಯ ಓಬಳಾಪುರ, ಬೆಳದರ, ದೇವಲಾಪುರ ಮತ್ತು ಕೆಸ್ತೂರು ಗ್ರಾಮ ಪಂಚಾಯಿತಿಯ 15 ಹಳ್ಳಿಗಳ ಸೋಮವಾರದಂದು ತಪಾಸಣೆ ನಡೆಸಿ 120 ಮಂದಿಗೆ ವೈದ್ಯಕೀಯ ಕಿಟ್ ವಿತರಿಸಿ, ಸಮಾಲೋಚನೆ ನಡೆಸಿತು. ಸಮನ್ವಯಕ್ಕೆ ವೈದ್ಯಕೀಯ ಸಿಬ್ಬಂದಿ ನೇಮಕ: ಸೋಂಕಿತರಿಗೆ ಬೆಡ್, ಆಕ್ಸಿಜನ್, ಆಂಬ್ಯುಲೆನ್ಸ್, ಔಷಧೋಪಚಾರ ಹಾಗೂ ವೈದ್ಯರ ನೆರವು ಸೇರಿದಂತೆ ಅಗತ್ಯ ಮಾಹಿತಿಗಳನ್ನು ಒದಗಿಸುವುದಕ್ಕೆ ಹಾಗೂ ತಾಲ್ಲೂಕಿನ ಕರೋನ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿ ಗುಣಮುಖರಾಗುವಂತೆ ಮಾಡುವತ್ತ ಗಮನ ಹರಿಸಲು ಜನ ಮತ್ತು ಆಸ್ಪತ್ರೆಯ ನಡುವೆ ಸಂಪರ್ಕಕ್ಕಾಗಿ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಸಿಬ್ಬಂದಿ ನಾಗಮ್ಮ ಅವರನ್ನು ನೇಮಕ ಮಾಡಿರುವ ಡಾ.ಜಿ.ಪರಮೇಶ್ವರ್ ಅವರು ಇಡೀ ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲಿ ಸಮಾಲೋಚನೆ-ಜಾಗೃತಿ ಕೆಲಸ ಸಂಪೂರ್ಣಗೊಳ್ಳುವ ತನಕ ಆಂದೋಲನ ಮುಂದುವರಿಸುವಂತೆ ಸೂಚಿಸಿದ್ದಾರೆ. ಕರೋನ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ನೆರವಾಗಲೆಂದು ತಾಲ್ಲೂಕು ಆಡಳಿತಕ್ಕೆ ಉಚಿತವಾಗಿ ನೀಡಿರುವ ಆಕ್ಸಿಜನ್ಸಹಿತ ಆಂಬ್ಯಲೆನ್ಸ್ನ ನೆರವು ಪಡೆದುಕೊಂಡು ಆದಷ್ಟು ಬೇಗ ಸೋಂಕಿತರನ್ನು ಸ್ಥಳೀಯ ಇಲ್ಲವೇ ಸಿದ್ದಾರ್ಥ ಆಸ್ಪತ್ರೆಗೆ ಸೇರಿಸಲು ನಾಗಮ್ಮ- 99452 31885 ಅವರನ್ನು ಸಂಪಕರ್ಿಸಲು ಕೋರಲಾಗಿದೆ. ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಮುದಾಯ ವೈದ್ಯಕೀಯ ವಿಭಾಗದ ವೈದ್ಯ ಡಾ.ಅನುಪಮ ನೇತೃತ್ವದ 12 ಮಂದಿ ವೈದ್ಯರು, ವೈದಕೀಯ ಸಮನ್ವಯಕಾರರಾದ ನಾಗಮ್ಮ, ಎನ್ಸಿಸಿ ಅಧಿಕಾರಿ ಲೆಫ್ಟಿನೆಂಟ್ ಡಾ. ಜಯಪ್ರಕಾಶ್, ಕಂದಾಯ, ಪ್ರಾಥಮಿಕ ಆರೋಗ್ಯ ಸಿಬ್ಬಂದಿ, ಗ್ರಾ.ಪಂ, ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಆಶಾ ಕಾರ್ಯಕತರ್ೆಯರು ಈ ಆಂದೋಲನದಲ್ಲಿ ಪಾಲ್ಗೊಳ್ಳಲಿದ್ದಾರೆ.