ಈ ಕ್ಷಣ :

ಭಟ್ಕಳ: ವೀಸಾ ಇಲ್ಲದ ಪಾಕಿಸ್ತಾನಿ ಮಹಿಳೆ ಬಂಧನ

Published 15 ಮಾರ್ಚ್ 2023, 21:47 IST
Last Updated 7 ಮೇ 2023, 00:03 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

DISTRICT: ಕಾರವಾರ : ಅನಧಿಕೃತವಾಗಿ ಎಂಟು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ವಾಸವಾಗಿದ್ದ ಪಾಕಿಸ್ತಾನಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಖತೀಜಾ ಮೆಹರಿನ್ ಎನ್ನುವ ಪಾಕಿಸ್ತಾನದ ರಾಷ್ಟ್ರೀಯತೆ ಹೊಂದಿರುವ ಮಹಿಳೆಯು ಭಟ್ಕಳ ತಾಲೂಕಿನ ನವಾಯತ ಕಾಲೋನಿ ಮನೆಯೊಂದರಲ್ಲಿ ಅಕ್ರಮವಾಗಿ ವಾಸ್ತವ್ಯ ಮಾಡುತ್ತಿರುವ ಬಗ್ಗೆ ಗುಪ್ತಚರ ಮಾಹಿತಿಯನ್ನಾಧರಿಸಿ ಭಟ್ಕಳ ನಗರ ಠಾಣಾ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಈಕೆ ಪಾಕಿಸ್ತಾನದ ರಾಷ್ಟ್ರೀಯತೆಯನ್ನು ಹೊಂದಿದ್ದು,ಸುಮಾರು 8 ವರ್ಷಗಳ ಹಿಂದೆ ಭಟ್ಕಳದ ನವಾಯತ ಕಾಲೋನಿಯ ಜಾವೀದ್ ಮೊಹಿದ್ದೀನ್ ರುಕ್ನುದ್ದೀನ್ ಎಂಬಾತನನ್ನು ದುಬೈನಲ್ಲಿ ವಿವಾಹವಾಗಿದ್ದಳು. 2014 ರಲ್ಲಿ 3 ತಿಂಗಳ ವಿಸಿಟಿಂಗ್ ವೀಸಾದ ಮೇಲೆ ಭಾರತಕ್ಕೆ ಬಂದಿದ್ದಳು. ಬಳಿಕ ವಾಪಸ್ಸಾಗಿ 2015 ರಲ್ಲಿ ಕಳ್ಳ ಮಾರ್ಗದಲ್ಲಿ ಭಾರತಕ್ಕೆ ನುಸುಳಿ ಬಂದು ತನ್ನ ಗಂಡನ ಮನೆಯಾದ ಭಟ್ಕಳದ ನವಾಯತ ಕಾಲೋನಿಯಲ್ಲಿ ತನ್ನ 3 ಮಕ್ಕಳೊಂದಿಗೆ ಅಕ್ರಮವಾಗಿ ವಾಸವಾಗಿದ್ದಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ. ಭಟ್ಕಳದಲ್ಲಿ ಈಕೆಯು ಸುಳ್ಳು ದಾಖಲೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿ ರೇಶನ್ ಕಾರ್ಡ್,ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್,ಪಾನ್ ಕಾರ್ಡ್,ಚುನಾವಣಾ ಗುರುತಿನ ಚೀಟಿ ಪಡೆದಕೊಂಡಿದ್ದಾಳೆ. ಪೊಲೀಸರು ಈಕೆಯನ್ನು ಬಂಧಿಸುವ ಸಂದರ್ಭದಲ್ಲಿ ಇವೆಲ್ಲ ದಾಖಲೆಗಳನ್ನು ಕೂಡ ವಶಕ್ಕೆ ಪಡೆದಿರುವುದಾಗಿ ಅವರು ತಿಳಿಸಿದ್ದಾರೆ. ಈಕೆ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೆಲವು ತಿಂಗಳುಗಳಿಂದ ಸ್ಥಳೀಯ ಪೊಲೀಸರು ಇತರ ತನಿಖಾ ಸಂಸ್ಥೆಯ ಸಹಕಾರದೊಂದಿಗೆ ಪತ್ತೆಗೆ ಸತತವಾಗಿ ಪ್ರಯತ್ನಿಸಿ, ಅಕ್ರಮವಾಗಿ ವಾಸವಾಗಿದ್ದ ಈಕೆಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಈಕೆಯ ಮೇಲೆ ವಿದೇಶಿ ಕಾಯಿದೆ ಉಲ್ಲಂಘನೆ ಮತ್ತು ಇತರೆ ಐಪಿಸಿ ಪ್ರಕರಣಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈಕೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಎಸ್.ಪಿ.ಶಿವಪ್ರಕಾಶ ದೇವರಾಜು ಅವರು ತಿಳಿಸಿದ್ದಾರೆ.

ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45