DISTRICT: ಕಾರವಾರ : ತಹಶೀಲ್ದಾರ ಶೈಲೇಶ ಪರಮಾನಂದ ನೇತೃತ್ವದ ತಂಡ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಅನಧಿಕೃತ ಮೂರು ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿದೆ. ದಾಂಡೇಲಿ ನಗರದ ಪ್ರವಾಸಿ ಮಂದಿರ ರಸ್ತೆಯ ಸಾಂಬ್ರೇಕರ ಕ್ಲಿನಿಕ್,ಚೌಧರಿ ಗೇಟ್ ಹತ್ತಿರದ ರೆಹಮಾನ ಕ್ಲಿನಿಕ್,ಕುಳಗಿ ರಸ್ತೆ ಬಳಿಯ ಹೆಗಡೆ ಕ್ಲಿನಿಕ್ ದಾಳಿಗೊಳಗಾದ ಕ್ಲಿನಿಕ್ ಗಳಾಗಿವೆ. ದಾಳಿ ನಡೆದ ಕ್ಲಿನಿಕ್ ಗಳಿಗೆ ತಹಸೀಲ್ದಾರ ನೇತೃತ್ವದ ತಂಡ ಬೀಗ ಜಡಿದಿದೆ.ಔಷಧಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೊರೋನಾ ಸೋಂಕಿನ ಸಂದರ್ಭದಲ್ಲಿ ಈ ಕ್ಲಿನಿಕ್ ನವರು ಜ್ವರ,ನೆಗಡಿ ಹಾಗೂ ಕೆಮ್ಮು ಇದ್ದವರಿಗೆ ಕೋವಿಡ್ ಪರೀಕ್ಷೆಯ ಬಗ್ಗೆ ತಿಳಿಸದೇ ತಮ್ಮದೇ ಔಷಧಿ,ಚುಚ್ಚುಮದ್ದು ನೀಡುತ್ತಿದ್ದರೆಂಬ ಆರೋಪ ಕೇಳಿ ಬಂದಿತ್ತು. ತಾಲೂಕು ಆರೋಗ್ಯಾಧಿಕಾರಿ ಡಾ.ಭೀಮಣ್ಣ ಶಿರೂರ, ದಾಂಡೇಲಿಯ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ ಪ್ರಸಾದ,ಪಿ.ಎಸ್.ಐ.ಯಲ್ಲಪ್ಪ ಎಸ್.ಮುಂತಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.