DISTRICT:
ಬೆಂಗಳೂರು: ಹಲವು ಕೇಸ್ ಗಳಲ್ಲಿ ಸಿಲುಕಿರುವ ಜನಾರ್ದನ ರೆಡ್ಡಿ 14 ವರ್ಷಗಳ ಕಾಲ ವನವಾಸವನ್ನೇ ಅನುಭವಿಸಿದರು. ಆದರೆ ಈಗ ರಾಜಕೀಯದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದು, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಯೇ ಮಾಡುತ್ತೀನಿ ಎಂಬ ಪಣ ತೊಟ್ಟಿದ್ದಾರೆ.
ಬಿಜೆಪಿಯಿಂದ ಟಿಕೆಟ್ ಗಾಗಿ ತಾಳ್ಮೆಯಿಂದ ಕಾದಿದ್ದಾರೆ. ಆದ್ರೆ ಟಿಕೆಟ್ ಸಿಗದೆ ಇದ್ದಾಗ ರೊಚ್ಚಿಗೆದ್ದ ಜನಾರ್ದನ ರೆಡ್ಡಿ, ಒಂಟಿಯಾಗಿಯೇ ಹೋರಾಟ ಮಾಡಲು ಸಜ್ಜಾಗಿದ್ದರು. ಆಪ್ತ ಮೂಲಗಳ ಪ್ರಕಾರ, ರೆಡ್ಡಿ ಅವರು ಸ್ವತಂತ್ರವಾಗಿಯೇ ಪಕ್ಷ ಕಟ್ಟಿ ನಿಲ್ಲುತ್ತಾರೆ ಎಂಬ ಮಾತು ಇತ್ತು. ಆದ್ರೆ ಇದೀಗ ಮಾಜಿ ಸಿಎಂ ಯಡಿಯೂರಪ್ಪ ಬೇರೆಯದ್ದೆ ವಿಚಾರ ಹೇಳುತ್ತಿದ್ದಾರೆ.
ಜನಾರ್ದನ ರೆಡ್ಡಿ ಅವರ ಬಗ್ಗೆ ಮಾತನಾಡಿದ ಬಿಎಸ್ವೈ, ಜನಾರ್ದನ ರೆಡ್ಡಿ ಅವರು ಎಲ್ಲಿಯೂ ಹೋಗುವುದಿಲ್ಲ. ಅವರು ಬಿಜೆಪಿಯಲ್ಲಿಯೇ ಇರುತ್ತಾರೆ. ಅವರನ್ನು ನೆಗ್ಲೆಕ್ಟ್ ಮಾಡುವ ಪ್ರಶ್ನೆಯೇ ಇಲ್ಲ. ಅವರ ಮೇಲೆ ಕೆಲವು ಪ್ರಕರಣಗಳು ಇದ್ದಾವೆ. ಅದೆಲ್ಲ ಕ್ಲಿಯರ್ ಆಗಬೇಕು. ಆಮೇಲೆ ಅವರನ್ನು ಪಕ್ಷಕ್ಕೆ ಕರೆದುಕೊಳ್ಳುತ್ತೇವೆ ಎಂದಿದ್ದಾರೆ.
ಇನ್ನು ಬಳ್ಳಾರಿಗೆ ಹೋಗುವುದಕ್ಕೆ ಜನಾರ್ದನ ರೆಡ್ಡಿಗೆ ಇನ್ನು ಅನುಮತಿ ಸಿಕ್ಕಿಲ್ಲ. ಈ ಕಾರಣದಿಂದ ರೆಡ್ಡಿ ಅವರು ಗಂಗಾವತಿಯಲ್ಲಿ ಮನೆ ಮಾಡಿದ್ದು, ಅಲ್ಲಿಂದಾನೇ ರಾಜಕೀಯ ವೃತ್ತಿ ಆರಂಭಿಸಲು ಯೋಜನೆ ರೂಪಿಸಿದ್ದಾರೆ. ಈ ಬಗ್ಗೆ ಮಾತನಾಡಿದ್ದ ಬಿಎಸ್ವೈ, ಅವರು ಗಂಗಾವತಿಯಲ್ಲಿ ಮನೆ ಮಾಡಿರುವುದರಿಂದ ಈ ಗೊಂದಲ ಶುರುವಾಗಿದೆ. ಆದರೆ ಅವರು ಎಲ್ಲೂ ಹೋಗುವುದಿಲ್ಲ ನಮ್ಮ ಜೊತೆಗೆ ಇರಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.