ಈ ಕ್ಷಣ :

ಯಾದಗಿರಿ: ಹತ್ತಿಕುಣಿ ಜಲಾಶಯ ಭರ್ತಿಗೆ ಕ್ಷಣಗಣನೆ; ರೈತರಲ್ಲಿ ಸಂತಸ

Published 16 ಮಾರ್ಚ್ 2023, 12:21 IST
Last Updated 6 ಮೇ 2023, 12:45 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

DISTRICT:

ಯಾದಗಿರಿ : ಈ ವರ್ಷ ಮುಂಗಾರು ಮಳೆ ಉತ್ತಮ ಸುರಿದಿರುವದರಿಂದ ಹಸಿರು ಬೆಟ್ಟಗಳ ಮಧ್ಯೆ ಇರುವ ತಾಲೂಕಿನ ಹತ್ತಿಕುಣಿ ಜಲಾಶಯ ಭರ್ತಿಯಾಗುತ್ತಿದ್ದು, ಅಧಿಕಾರಿಗಳು ನೀರು ಬಿಡಲು ಕ್ಷಣಗಣನೆ ನಿರೀಕ್ಷೆಯಲ್ಲಿದ್ದಾರೆ. ಇದು ರೈತರಲ್ಲಿ ಸಂತಸ ಮೂಡಿದೆ.

ಈ ಭಾಗದ ರೈತರ ಜೀವನಾಡಿಯಾಗಿರುವ ಜಲಾಶಯ ಬೇಗನೆ ಭರ್ತಿಯಾಗಿರುವುದರಿಂದ ಹತ್ತಿಕುಣಿ, ಯಡ್ಡಳ್ಳಿ, ಬಂದಳ್ಳಿ, ಹೊನಗೇರಾ, ಕಟಗಿಶಹಾಪೂರ, ದಸರಾಬಾದ್ ಗ್ರಾಮಗಳ ಒಟ್ಟು 5300 ಎಕರೆ ಜಮೀನು ನೀರಾವರಿ ಕ್ಷೇತ್ರವಾಗುತ್ತದೆ. ರೈತರು ಭತ್ತ, ಶೇಂಗಾ, ಹತ್ತಿ, ಜೋಳ, ಸಜ್ಜೆ, ಇನ್ನಿತರ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗುತ್ತದೆ. ಅವರು ಈಗಾಗಲೇ ಕೃಷಿ ಚಟುವಟಿಕೆಗಳ ತಯಾರಿಯಲ್ಲಿ ತೊಡಗಿದ್ದಾರೆ.
ಜಲಾಶಯ ವಿಶಾಲವಾಗಿದ್ದು ಮೇಲ್ಭಾಗದ ಮೋಟ್ನಳ್ಳಿ, ಕೋಟಗೇರಾ, ಕೆರೆಗಳು ಈಗಾಗಲೇ ತುಂಬಿರುವದರಿಂದ ಹೆಚ್ಚು ನೀರು ನಿರಂತರ ಜಲಾಶಯಕ್ಕೆ ಹರಿದು ಬರುತ್ತಿದೆ. ಇನ್ನೂ ಹೆಚ್ಚು ನೀರು ಹರಿದು ಬಂದರೆ ಜಲಾಶಯದ ಗೇಟ್‌ಗಳನ್ನು ತೆರೆಯಲು ನೀರಾವರಿ ಇಂಜಿನೀಯರ್ ಸಿದ್ಧಾರೂಢ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳದಲ್ಲಿ ಉಪಸ್ಥಿತರಿದ್ದಾರೆ.

ಜಲಾಶಯ ಭರ್ತಿಯಾಗಿದೆ ಎಂಬ ಸುದ್ಧಿ ತಿಳಿಯುತ್ತಿದ್ದಂತೆ ಹತ್ತಿಕುಣಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಯುವಕರು ಹಾಗೂ ರೈತರು ಜಲಾಶಯದತ್ತ ಬೆಳಗ್ಗೆಯಿಂದಲೇ ಆಗಮಿಸಿ ಜಲಾಶಯ ವೀಕ್ಷಿಸುತ್ತಿದ್ದಾರೆ. ಈಗಾಗಲೇ ಅಲ್ಲಿನ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಗುರುಮಿಠಕಲ್ ಮತಕ್ಷೇತ್ರದ ನಾಗನಗೌಡ ಕಂದಕೂರು ಅವರು ಪ್ರವಾಸೋದ್ಯಮ ಇಲಾಖೆಯಿಂದ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಉದ್ಯಾನವನ, ಮಕ್ಕಳು ಆಟವಾಡಲು ಸೂಕ್ತ ವಾತಾವರಣ ನಿರ್ಮಾಣ ಮಾಡಿರುವುದರಿಂದ ಜನರು ಜಲಾಶಯ, ನಿಸರ್ಗದ ಸೌಂದರ್ಯವನ್ನು ಸವಿದು ತೆರಳುತ್ತಿದ್ದಾರೆ.

ಪ್ರತಿವರ್ಷ ಹತ್ತಿಕುಣಿ ಜಲಾಶಯ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಭರ್ತಿಯಾಗುತ್ತಿತ್ತು, ಆದರೆ ಈ ವರ್ಷ ಬೇಗನೆ ಭರ್ತಿಯಾಗಿರುವದರಿಂದ ರೈತರು ಮುಂಗಾರು ಹಾಗೂ ಹಿಂಗಾರು ಬೆಳೆಯನ್ನು ಬೆಳೆಯಲು ಸಹಾಯಕವಾಗಲಿದೆ. ರೈತರು ಜಲಾಶಯ ನೀರನ್ನು ಪೋಲಾಗದಂತೆ ಎಚ್ಚರಿಕೆ ವಹಿಸಿ ಸಮಾಧಾನದಿಂದ ಉಪಯೋಗಿಸಿಕೊಳ್ಳಬೇಕು ಅನ್ನೋದು ಯುವ ರೈತ ಮಂಜುನಾಥ ಸಾಹುಕಾರ್ ಮನವಿ.

ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45