Yash: ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ರಾಕಿಂಗ್ ಸ್ಟಾರ್ ಸಖತ್ ಡಾನ್ಸ್; ವಿಡಿಯೋ ವೈರಲ್

Yash: ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ರಾಕಿಂಗ್ ಸ್ಟಾರ್ ಸಖತ್ ಡಾನ್ಸ್; ವಿಡಿಯೋ ವೈರಲ್

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ರಾಕಿಂಗ್ ಸ್ಟಾರ್ ಸಖತ್ ಡಾನ್ಸ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದೆ. 

ರಾಕಿಂಗ್ ಸ್ಟಾರ್ ಯಶ್ ಬ್ಲಾಕ್‌ಬಸ್ಟರ್ ಕೆಜಿಎಫ್ 2 ಬಳಿಕ ಖ್ಯಾತ ಮತ್ತಷ್ಟು ಹೆಚ್ಚಾಗಿದೆ. ದೇಶ-ವಿದೇಶಗಳಲ್ಲೂ ಯಶ್ ಹೆಸರು ರಾರಾಜಿಸುತ್ತಿದೆ. ಸಿನಿಮಾರಂಗ ಮಾತ್ರವಲ್ಲದೇ ಬೇರೆ ಬೇರೆ ಕ್ಷೇತ್ರದ ಗಣ್ಯರು ಸಹ ರಾಕಿ ಭಾಯ್‌ಯನ್ನು ಇಷ್ಟಪಡುತ್ತಾರೆ, ಭೇಟಿಮಾಡಿ ಸಂತೋಷ ಪಡುತ್ತಾರೆ. ಯಶ್ ಕ್ರಿಕೆಟ್ ಕ್ಷೇತ್ರದ ಅನೇಕರ ಜೊತೆ ಉತ್ತಮ ಸ್ನೇಹ ಹೊಂದಿದ್ದಾರೆ. ಇತ್ತೀಚಿಗಷ್ಟೆ ಯಶ್ ಟೀಂ ಇಂಡಿಯಾದ ಅನೇಕ ಆಟಗಾರರನ್ನು ಭೇಟಿಯಾಗಿದ್ದರು. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಶೇಷ ಎಂದರೆ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಅವರ ಮದುವೆ ಸಂಭ್ರಮದಲ್ಲಿ ಕಾಣಿಸಿಕೊಂಡಿದ್ದರು.    

ಈ ವರ್ಷ ಫೆಬ್ರವರಿಯಲ್ಲಿ ಹಾರ್ದಿಕ್​ ಪಾಂಡ್ಯ, ನತಾಶಾ ಸ್ಟಾಂಕೊವಿಕ್​​ ಜೊತೆ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ಆದರು. ಉದಯಪುರದಲ್ಲಿ ನಡೆದ  ಅದ್ದೂರಿ ವಿವಾಹ  ಸಮಾರಂಭಕ್ಕೆ ಅನೇಕ ಗಣ್ಯರು ಭಾಗಿ ಆಗಿದ್ದರು. ಕ್ರಿಕೆಟ್ ಮತ್ತು ಸಿನಿಮಾ ಗಣ್ಯರು ಸಹ ಹಾರ್ದಿಕ್ ಪಾಂಡ್ಯ ಮದುವೆ ಸಮಂಭ್ರಮದಲ್ಲಿ ಭಾಗಿಯಾಗಿದ್ದರು. ರಾಕಿಂಗ್ ಸ್ಟಾರ್ ಭಾಗಿಯಾಗಿದ್ದ ವಿಡಿಯೋಗಳು ಈಗ ವೈರಲ್ ಆಗಿದೆ. ಯಶ್ ಭಾಗಿಯಾಗಿದ್ದು ಅಷ್ಟೆಯಲ್ಲದೇ ಹಾರ್ದಿಕ್​ ಪಾಂಡ್ಯ  ಜೊತೆ ಸಖತ್ತಾಗಿ ಡಾನ್ಸ್ ಮಾಡಿದ್ದರು. ಪಾಂಡ್ಯ ಜೊತೆ ಡಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.