ENTERTAINMENT:
ಗದಗ: ಹಿಜಾಬ್ ಕುರಿತು ಇಂದು ಹೈಕೋರ್ಟ್ ತೀರ್ಪು ನೀಡಿದ ವಿಚಾರವಾಗಿ ನಟಿ ತಾರಾ ಪ್ರತಿಕ್ರಿಯೆ ನೀಡಿದ್ದಾರೆ. ಶಾಲೆಯಲ್ಲಿ ಸಮವಸ್ತ್ರವೇ ಎಲ್ಲವನ್ನು ಸಮನಾಗಿ ಕಾಣುತ್ತದೆ. ಹೀಗಾಗಿ ಇವತ್ತಿನ ತೀರ್ಪು ನ್ಯಾಯಯುತವಾಗಿದೆ ಎಂದು ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಬೇಕಾದರೆ ಜಾತಿ, ಧರ್ಮ ಆಚರಣೆ ಮಾಡಲಿ. ಆದರೆ ಅದು ಶಾಲೆಯಲ್ಲಿ ಇರಬಾರದು. ಶಾಲೆಯಲ್ಲಿ ಸಮವಸ್ತ್ರ ಅಂದರೆ ಬಡವ, ಶ್ರೀಮಂತ, ಜಾತಿ ಮತ ಬೇಧ ಏನೂ ಇಲ್ಲದೆ ಕೂತು ಪಾಠ ಕಲಿಯುವ ಒಂದು ದೇವಾಲಯವಾಗಿದೆ. ಹೀಗಿರುವಾಗ ದೇವಾಲಯದಲ್ಲಿ ಜಾತಿ- ಧರ್ಮ ಪಾಲಿಸಬಾರದು.