ENTERTAINMENT:
ಸ್ಯಾಂಡಲ್ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಸುಮಾರು 2 ತಿಂಗಳು ಕಳೆದಿದೆ. ಆದರೆ ಇನ್ನು ಅವರ ನೆನಪು ಮಾತ್ರ ಹಾಗೆ ಉಳಿದಿದೆ.
ಕೆಲವರು ಅಪ್ಪು ನೆನಪಿಗಾಗಿ ಇನ್ನು ನುಡಿ ನಮನ ಕಾರ್ಯಕ್ರಮ ಮಾಡುತ್ತಲೇ ಇದ್ದಾರೆ. ಅಭಿಮಾನಿಗಳು ತಮ್ಮ ಮನೆಯ ಅಂಗಳದಲ್ಲಿ ಪುನೀತ್ ರಾಜ್ ಕುಮಾರ್ ಕಂಚಿನ ಪುತ್ಥಳಿ ನಿರ್ಮಾಣ ಮಾಡಿ ಪ್ರತಿನಿತ್ಯ ಪೂಜೆ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೆ ಮೊನ್ನೆ ತಾನೆ ಬೆಂಗಳೂರಿನಲ್ಲಿ ಕ್ರಿಸ್ ಮಸ್ ಗೆ ಕೇಕ್ ಶೋ ಏರ್ಪಡಿಸಿತ್ತು. ಅದರಲ್ಲಿ ಪುನೀತ್ ರಾಜ್ ಕುಮಾರ್ ಕೇಕ್ ನಲ್ಲಿ ಪುತ್ಥಳಿ ನಿರ್ಮಾಣ ಮಾಡಲಾಗಿತ್ತು. ಇದೀಗ ಇಲ್ಲೊಂದು ಗ್ರಾಮದ ಅಭಿಮಾನಿಗಳು ಪುನೀತ್ ಸಮಾಧಿ ದರ್ಶನಕ್ಕಾಗಿ ಸೈಕಲ್ ಯಾತ್ರೆ ಆರಂಭಿಸಿದ್ದಾರೆ.
ವಿಜಯನಗರದಿಂದ ಬೆಂಗಳೂರಿಗೆ ಸುಮಾರು 280 ಕಿಮೀ ಅಂತರವಿದೆ. ಅದನ್ನು ಲೆಕ್ಕಿಸದೆ ಅಭಿಮಾನಿಗಳು ಅಪ್ಪು ಸಮಾಧಿ ನೋಡಲು ಅಷ್ಟು ದೂರದಿಂದ ಸೈಕಲ್ ಯಾತ್ರೆ ಮಾಡುತ್ತಿದ್ದಾರೆ. ಹೊಸಪೇಟೆಯ 13 ಜನ ಯುವಕರ ತಂಡದಿಂದ ಈ ಯಾತ್ರೆ ಶುರುವಾಗಿದೆ.