ENTERTAINMENT:
ನಿರೂಪಕಿ ಅನುಶ್ರೀ ಯಾರಿಗೆ ತಾನೇ ಗೊತ್ತಿಲ್ಲ. ತಮ್ಮ ಮಾತಿನ ಮೋಡಿಯಿಂದಲೇ ಇಡೀ ಕರುನಾಡಿನ ಮನೆ ಮಗಳಾಗಿರೋ ಅನುಶ್ರೀ ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದಾ ನುಗು ನಗುತ್ತಲೇ ಪ್ರತಿಯೊಬ್ಬರ ಮನಸ್ಸು ಗೆಲ್ಲೋ ಅನುಶ್ರೀ ಇದೀಗ ತಮ್ಮ ಮನೆಯ ಸದಸ್ಯನಂತಿದ್ದ ಮುದ್ದಿನ ನಾಯಿ ಮರಿಯ ಅಗಲಿಕೆಯ ನೋವಿನಲ್ಲಿದ್ದಾರೆ.
ಅನುಶ್ರೀ ಅವರ ಮುದ್ದಿನ ನಾಯಿಮರಿ ಚಿನ್ನುವಿನ ಅಗಲಿಕೆಯ ನೋವಿನ ಪೋಸ್ಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಾಯಿ ಮರಿಯನ್ನು ತಬ್ಬಿಕೊಂಡು, ಅದಕ್ಕೆ ಮುತ್ತನಿಡುತ್ತಿರುವ ಪೋಸ್ಟ್ ಒಂದನ್ನ ಶೇರ್ ಮಾಡಿರುವ ಅನುಶ್ರೀ ದೇವರ ಬೆರಳುಗಳು ಆತನನ್ನ ಸ್ಪರ್ಶಿಸಿವೆ. ಆತನೀಗ ನಿದ್ರಿಸಿದ್ದಾನೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕ್ಷಮಿಸಿ ಅವನ ಅಗಲಿಕೆ ಬಗ್ಗೆ ಹೇಳಿಲ್ಲ, ಕೆಲವೊಮ್ಮೆ ನೋವನ್ನು ಕೂಡ ಮುಚ್ಚಿಡುವಷ್ಟು ಸ್ವಾಮಿತ್ವ ನಮ್ಮನ್ನು ಆವರಿಸುತ್ತದೆ ಎಂದು ಎಮೋಶನಲ್ ಆಗಿ ಬರೆದುಕೊಂಡಿದ್ದಾರೆ.
ಸದಾ ನಗು ನಗುತ್ತಾ ಕಾರ್ಯಕ್ರಮಗಳನ್ನ ನಿರೂಪಣೆ ಮಾಡುವ ಅನುಶ್ರೀ ಸಾಕಷ್ಟು ಭಾರಿ ಸ್ಟೇಜ್ ಮೇಲೆಯೇ ಎಮೋಷನಲ್ ಆಗಿದ್ದು ಇದೆ. ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಅನುಶ್ರೀ ಅಪ್ಪು ಸತ್ತಾಗ ವೇದಿಕೆ ಮೇಲೆ ಕಣ್ಣೀರು ಸುರಿಸಿದ್ದರು.