ಈ ಕ್ಷಣ :

ಜಾಕ್ವೆಲಿನ್, ನೋರಾ ಬಳಿಕ ಮತ್ತೆ ಮೂವರು ಖ್ಯಾತ ನಟಿಯರಿಗೆ ಗಾಳ ಹಾಕಿದ್ದ ವಂಚಕ ಸುಕೇಶ್: ನಟಿಯರನ್ನ ಬಲೆಗೆ ಬೀಳಿಸಲು ಏನೆಲ್ಲಾ ಆಮಿಷ ಒಡ್ಡಿದ್ದ ಗೊತ್ತಾ?

Published 16 ಮಾರ್ಚ್ 2023, 13:17 IST
Last Updated 7 ಮೇ 2023, 01:54 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

ENTERTAINMENT:

ದಿನ ಕಳೆದಂತೆ ವಂಚಕ ಸುಕೇಶ್ ಚಂದ್ರಶೇಖರ್​ನ ಒಂದೊಂದೆ ವಂಚನೆ ಪ್ರಕರಣಗಳು ಹೊರಗೆ ಬರ್ತಿದೆ. ಈ ಹಿಂದೆ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ನೋರಾ ಫತೇಹಿಯನ್ನ ಟಾರ್ಗೆಟ್ ಮಾಡಿದ್ದ ವಂಚಕ ಬಳಿಕ ಸಾರಾ ಅಲಿ ಖಾನ್, ಜಾಹ್ನವಿ ಕಪೂರ್ ಹಾಗೂ ಭೂಮಿ ಪಡ್ನೇಕರ್​ಗೆ ಬಲೆ ಬೀಸಿರೋದು ತನಿಖೆಯಿಂದ ಬಹಿರಂಗವಾಗಿದೆ. ಖ್ಯಾತ ನಟಿಯರಿಗೆ ಉಡುಗೊರೆ ನೀಡಲು ವಂಚನೆ ಮಾಡಿದ್ದ ಹಣವನ್ನ ಸುಕೇಶ್ ಬಳಸಿಕೊಂಡಿದ್ದ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಸುಕೇಶ್ ಚಂದ್ರಶೇಖರ್ ರಾನ್​ಬಾಕ್ಸಿ ಸಂಸ್ಥೆಯ ಮಾಲೀಕನ ಪತ್ನಿ ಅದಿತಿ ಸಿಂಗ್​ರಿಂದ 215 ಕೋಟಿ ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಅದಿತಿ ಸಿಂಗ್ ಅವರ ಪತಿಯನ್ನು ಜೈಲಿನಿಂದ ಹೊರ ತರಲು ಸಹಾಯ ಮಾಡುವ ನೆಪದಲ್ಲಿ ನಾನಾ ವಿಧದ ಹೆಸರು ಹೇಳಿಕೊಂಡು ಅದಿತಿ ಸಿಂಗ್​ರಿಂದ ಹಣ ಪಡೆದುಕೊಂಡಿದ್ದ.

ಬಾಲಿವುಡ್ ನಟಿಯರನ್ನೇ ಟಾರ್ಗೆಟ್ ಮಾಡ್ತಿದ್ದ ಆರೋಪಿ ನಟಿ ಸಾರಾ ಅಲಿ ಖಾನ್​ರನ್ನ ಬಲೆಗೆ ಬೀಳಿಸಲು ನಾನಾ ವಿಧದಲ್ಲಿ ಪ್ರಯತ್ನಿಸಿದ್ದ. 2021ರ ಮೇ 21ರಂದು ಸಾರಾಗೆ ಸೂರಜ್ ರೆಡ್ಡಿ ಎಂದು ತನ್ನನ್ನ ಪರಿಚಯಿಸಿಕೊಳ್ಳುತ್ತ ಸುಕೇಶ್ ಮೆಜೇಸ್ ಮಾಡಿದ್ದ. ಬಳಿಕ ಸ್ನೇಹದ ಸಂಕೇತವಾಗಿ ಕಾರು ಗಿಫ್ಟ್​ ನೀಡುವುದಾಗಿ ತಿಳಿಸಿದ್ದ. ಆದರೆ ಇದಕ್ಕೆ ಸಾರ ಸಮ್ಮತಿ ನೀಡಿರಲಿಲ್ಲ. ಏನಾದರೂ ಗಿಫ್ಟ್ ಸ್ವಿಕರಿಸಲೇಬೇಕು ಎಂಬ ಸೂರಜ್ ಒತ್ತಾಯ ತಾಳಲಾರದೆ ಕೇವಲ ಒಂದು ಚಾಕಲೇಟ್ ಬಾಕ್ಸ್ ಕೇಳಿದ್ದರು ಸಾರಾ.

ಉಡುಗೊರೆ ರೂಪದಲ್ಲಿ ಚಾಕಲೇಟ್ ಬಾಕ್ಸ್ ಕಳಿಸಿದ್ದ ಸುಕೇಶ್ ಅದರಲ್ಲಿ ಫ್ರಾಂಕ್ ಮುಲ್ಲರ್ ಕಂಪೆನಿಯ ಲಕ್ಷಾಂತರ ರೂಪಾಯಿ ಮೌಲ್ಯದ ವಾಚ್ ಒಂದನ್ನ ಇಟ್ಟಿದ್ದ. ಸುಕೇಶ್ ಬಂಧನದ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ ಸಾರಾ ಅವರನ್ನ ಈ ವಿಚಾರದಲ್ಲಿ ವಿಚಾರಣೆ ನಡೆಸಿತ್ತು.

ನಟಿ ಜಾಹ್ನವಿ ಕಪೂರ್​ರನ್ನ ಟಾರ್ಗೆಟ್ ಮಾಡಿದ್ದ ವಂಚಕ ಸುಕೇಶ್ ಪತ್ನಿ ಲೀನಾ ಮರಿಯಾ ಪಾಲ್ ಮೂಲಕ 18 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದ. ಲೀನಾ ಮರಿಯಾ ಪೌಲ್ ಅವರು ನೇಲ್ ಆರ್ಟಿಸ್ಟ್ರಿ ಎಂಬ ಸಲೂನ್​ನ ಮಾಲಕಿ ಎಂದು ಹೇಳಿಕೊಂಡು ಜಾಹ್ನವಿ ಅವರನ್ನ ಸಂಪರ್ಕಿಸಿದ್ದರು. ಜೊತೆಗೆ 2021ರ ಜುಲೈ 19ರಂದು ಬೆಂಗಳೂರಿನಲ್ಲಿ ಸಲೂನ್ ಉದ್ಘಾಟನೆ ಮಾಡಲು ಆಹ್ವಾನಿಸಿದ್ದರು. ಸಲೂನ್ ಉದ್ಘಾಟಿಸಿದ ಜಾಹ್ನವಿ ಅದಕ್ಕೆ ವೃತ್ತಿಪರ ಶುಲ್ಕವಾಗಿ 18.92 ಲಕ್ಷ ರೂಗಳನ್ನು ಪಡೆದಿದ್ದರು. ಇದರ ಜೊತೆಗೆ ಜಾಹ್ನವಿಗೆ ಸಾಕಷ್ಟು ಉಡುಗೊರೆಯನ್ನೂ ನೀಡಲಾಗಿತ್ತು.

ಸುಕೇಶ್ ತನ್ನ ಸಹಾಯಕಿ ಪಿಂಕಿ ಇರಾನಿ ಮೂಲಕ ಬಿಟೌನ್​ ನಟಿ ಭೂಮಿ ಪಟ್ನೇಕರ್​ರನ್ನ ಸಂಪರ್ಕಿಸಿದ್ದ. ಜೊತೆಗೆ ಸ್ನೇಹದ ಹೆಸರಿನಲ್ಲಿ ಕಾರನ್ನ ಉಡುಗೊರೆ ನೀಡುವುದಾಗಿ ತಿಳಿಸಿದ್ದ. ಆದರೆ ಸುಕೇಶ್​ನಿಂದ ಯಾವುದೇ ಉಡುಗೊರೆ ಪಡೆದಿಲ್ಲ ಎಂದು ಭೂಮಿ ವಿಚಾರಣೆ ವೇಳೆ ತಿಳಿಸಿದ್ದಾರೆ.

ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45