ENTERTAINMENT: ನಟಿ ಜಾಹ್ನವಿ ಕಪೂರ್ ಇತ್ತೀಚೆಗೆ ಏನು ಮಾಡುತ್ತಿದ್ದಾರೆ? ಅವರು ಪೇಂಟಿಂಗ್ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಇತ್ತೀಚಿನ ಪೇಂಟಿಂಗ್ಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ. ಚಿತ್ರವೊಂದನ್ನು ಪೋಸ್ಟ್ ಮಾಡುವುದರ ಜೊತೆಗೆ, ನನ್ನನ್ನು ಪೇಂಟರ್ ಎಂದು ಕರೆದರೆ? ಎಂಬ ಪ್ರಶ್ನೆಯೂ ಇದೆ. ಅದಕ್ಕೆ ಹಲವರು ಹಲವು ಬಗೆಯಲ್ಲು ಪ್ರತಿಕ್ರಿಯಿಸಿದ್ದಾರೆ. ದಿಯಾ ಮಿರ್ಜಾ ಹೇಳಿರುವುದು ಹೀಗೆ: "ಮಗಳಂತೆ ತಾಯಿಯಂತೆ. ಚಿತ್ರಕಲೆ ಮುಂದುವರಿಸಿ." ಜಾನ್ವಿಯ ರೂಹಿ ಸಹನಟ ವರುಣ್ ಶರ್ಮಾ ಹೀಗೆ ಬರೆದಿದ್ದಾರೆ: "ವಾಹ್! ನೀವು ನನಗೆ ಯಾವುದನ್ನು ಉಡುಗೊರೆಯಾಗಿ ನೀಡುತ್ತಿದ್ದೀರಿ?" ಅಭಿಮಾನಿಯೊಬ್ಬರು ಹೀಗೆ ಬರೆದಿದ್ದಾರೆ: "ವಾಹ್." ಮತ್ತೊಬ್ಬ ಅಭಿಮಾನಿ, "ಖಂಡಿತವಾಗಿಯೂ ನೀವು ಪೇಂಟರ್". ಇತರ ಅಭಿಮಾನಿಗಳಿಂದಂತೂ ಹಾರ್ಟ್ ಎಮೋಜಿಗಳ ಮಹಾಪೂರವೇ ಹರಿದುಬಂದಿದೆ.