ENTERTAINMENT: ನವದೆಹಲಿ: 5ಜಿ ನೆಟ್‌ವರ್ಕ್ ಬೇಡ ಎಂದು ನಟಿ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ್ದು, 20 ಲಕ್ಷ ರೂ. ದಂಡ ವಿಧಿಸಿದೆ. ದೇಶದಲ್ಲಿ 5ಜಿ ವೈರ್‌ಲೆಸ್ ನೆಟ್‌ವರ್ಕ್ ಸ್ಥಾಪಿಸುವುದರ ವಿರುದ್ಧ ಜೂಹಿ ಚಾವ್ಲಾ ಸೋಮವಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವಿಕಿರಣಗಳು ಮನುಷ್ಯರು, ಪ್ರಾಣಿಗಳು, ಗಿಡ ಮರಗಳಿಗೆ ಮೇಲೆ ಪರಿಣಾಮ ಉಂಟುಮಾಡುತ್ತವೆ ಎಂದು ಅವರು ಹೇಳಿದ್ದರು. ಬುಧವಾರ ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅರ್ಜಿ ದೋಷಯುಕ್ತವಾಗಿದೆ ಮತ್ತು ಮಾಧ್ಯಮ ಪ್ರಚಾರಕ್ಕಾಗಿ ಮಾಡಲಾಗಿದೆ. ಜೂಹಿ ಹಾಗೂ ಮತ್ತಿತರರ ಫಿರ್ಯಾದಿದಾರರಿಗೆ ತಾವು ಮಾಡುತ್ತಿರುವ ಆರೋಪದ ಬಗ್ಗೆ ಯಾವುದೇ ಜ್ಞಾನವಿಲ್ಲ. ಯಾವುದೇ ಪರಿಶೀಲನೆ ಇಲ್ಲದೆ ದಾವೆ ಹೂಡಲಾಗಿದೆ ಎಂದು ಹೇಳಿ, ಆದೇಶ ಕಾಯ್ದಿರಿಸಿತ್ತು. ಇಂದು ಈ ಟರ್ಜಿಯನ್ನು ವಜಾಗೊಳಿಸಿದ್ದು, 20 ಲಕ್ಷ ರೂ. ದಂಡ ವಿಧಿಸಲಾಗಿದೆ. .