ENTERTAINMENT:
ಪೂರ್ಣ ವಿ-ರಾಮ
ನ್ಯಾಷನಲ್ ನಟ ಯಶ್ ಕರಿಯರ್ ಗೆ ದೊಡ್ಡ ಟರ್ನಿಂಗ್ ಪಾಯಿಂಟ್ ಅಂದರೆ ಅದು ಕಿರಾತಕ ಚಿತ್ರ. ಚಿತ್ರ ರೀಮೇಕೇ ಆಗಿದ್ದರೂ ಅದನ್ನು ನಿರ್ದೇಶಕ ಪ್ರದೀಪ್ ರಾಜ್ ನೀಟಾಗಿ ಕನ್ನಡೀಕರಿಸಿದ್ದರು. ಮಂಡ್ಯ ಶೈಲಿಯ ಬಾರ್ಲಾ ಹೋಗ್ಲಾ ಲಾಂಗ್ವೇಜ್ ಬಳಸಿ, ಆ ಚಿತ್ರವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದರು.
ಅದೇ ಕಿರಾತಕನಿಗೆ ಹತ್ತು ವರ್ಷ!
ಯಶ್ ಸಿನೆಮಾ ಜರ್ನಿಯಲ್ಲಿ ಕೆಜಿಎಫ್ ಹೇಗೋ ಹಾಗೆಯೇ ಆ ದಿನಗಳಲ್ಲಿ ಕಿರಾತಕ. ಮೈಸೂರು ಮಂಡ್ಯ ಭಾಗದಲ್ಲಿ ಶತದಿನೋತ್ಸವ ಕಂಡ ಚಿತ್ರ. ಈಗೇನು ಕೆಜಿಎಫ್ ಚಿತ್ರ ನ್ಯಾಷನಲ್ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ, ಅದು ಬಿಡುಗಡೆ ಆಗುವುದಕ್ಕಿಂತ ಮುಂಚೆ ಯಶ್ ಕಿರಾತಕ 2 ಚಿತ್ರ ಅನೌನ್ಸ್ ಮಾಡಿ ಹತ್ತು ದಿನ ಶೂಟ್ ಕೂಡ ಮಾಡಿದ್ದರು. ರ್ಯಾಂಬೋ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಅದರ ಸಾರಥ್ಯ ವಹಿಸಿದ್ದರು.
ಕೆಜಿಎಫ್ ಬಂದ್ಮೇಲೆ ಕಿರಾತಕ೨ ಕಿಲ್ಲಾದ!?
ಯಾವಾಗ ಈ ಕಡೆ ಕೆಜಿಎಫ್ ಚಿತ್ರ ದೇಶಾದ್ಯಂತ ಸದ್ದು ಮಾಡಿತೋ ಯಶ್ ತಲೆಯಲ್ಲಿ ಬೇರೆ ಕ್ಯಾಲ್ಕುಲೇಷನ್ ಓಡತೊಡಗಿತು. ಅದೇ ಲೆಕ್ಕಾಚಾರದ ಮೇಲೆ ಕಿರಾತಕ ೨ ಚಿತ್ರವನ್ನ ಯಶ್ ಅವರೇ ನಿಲ್ಲಿಸಲು ಹೇಳಿಬಿಟ್ಟರು. ಕೆಜಿಎಫ್ ೨ ಸಿನೆಮಾದ ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೆ ಕಿರಾತಕ ೨ ಅಷ್ಟು ಮಜಾ ಕೊಡುವುದು ಡೌಟು ಎಂಬ ನಿರ್ಧಾರದ ಆಧಾರದ ಮೇಲೆ ಕಿರಾತಕನನ್ನ ಅಲ್ಲೇ ನಿಲ್ಲುವಂತೆ ಮಾಡಿದರು ಯಶ್.
ಅದೇನೇ ಇದ್ದರೂ ಹತ್ತು ವರುಷದ ಹಿಂದೆ ಬಿಡುಗಡೆಯಾದ ಕಿರಾತಕ ಚಿತ್ರದಿಂದ ಯಶ್ next level ನಟ ಎಂದು ಗುರುತಿಸಿಕೊಂಡರು ಎನ್ನುವುದಂತೂ ಸತ್ಯ.