ENTERTAINMENT:
ಲಾಹೋರ್: ಪಾಕಿಸ್ತಾನಿ ರೂಪದರ್ಶಿ ನಯಾಬ್ ನದೀಮ್ ಕೊಲೆಯಾಗಿದೆ. ಶನಿವಾರವೇ ಈ ಕೊಲೆ ನಡೆದಿದ್ದು, ಭಾನುವಾರ ಇದು ಗಮನಕ್ಕೆ ಬಂದಿದೆ.
ಅವರು ವಾಸವಾಗಿದ್ದ ಲಾಹೋರ್ನ ಡಿಫೆನ್ಸ್ ಅಕಾಡೆಮಿ ಬಳಿಯ ಅಪಾರ್ಟ್ಮೆಂಟ್ನಲ್ಲಿ 29 ವರ್ಷದ ನಯಾಬ್ ಮೃತದೇಹ ಬೆತ್ತಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವಿವಾಹಿತೆಯಾಗಿದ್ದ, ಒಬ್ಬರೇ ಪ್ರತ್ಯೇಕವಾಗಿ ವಾಸವಾಗಿದ್ದ ಆಕೆ ಫೋನ್ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಆಕೆಯ ಮಲಸಹೋದರ ಅಲ್ಲಿಗೆ ಹೋದಾಗ ನೆಲದ ಮೇಲೆ ಅವರ ದೇಹ ಬಿದ್ದಿದ್ದು ಬೆಳಕಿಗೆ ಬಂದಿದೆ.
ಕತ್ತು ಹಿಸುಕಿ ಅವರನ್ನು ಸಾಯಿಸಲಾಗಿದೆಯೆಂದು ಪೊಲೀಸರು ಹೇಳಿದ್ದು, ಸಾಯುವುದಕ್ಕೆ ಮೊದಲು ಆಕೆಗೆ ಹಿಂಸೆ ನೀಡಲಾಗಿತ್ತೆಂದು ದೃಢಪಡಿಸುವಂಥ ಕೆಲವು ಗುರುತುಗಳು ದೇಹದ ಭಾಗಗಳು ಮತ್ತು ಕತ್ತಿನ ಮೇಲೆ ಪತ್ತೆಯಾಗಿವೆ ಎಂದು ವರದಿಯಾಗಿದೆ.
ಮಲಸಹೋದರನ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ಧಾಖಲಿಸಿದ್ದಾರೆ.
ಇದೇ ಪ್ರದೇಶದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಪಾಕಿಸ್ತಾನಿ ಮೂಲದ ಬ್ರಿಟಿಷ್ ಮಹಿಳೆ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮಾಯಾ ಎಂಬ 25 ವರ್ಷದ ಆಕೆಯನ್ನು ಅಲ್ಲಿಗೆ ಬಂದಿದ್ದ ಎರಡು ತಿಂಗಳಲ್ಲೇ ತಲೆಗೆ ಗುಂಡಿಕ್ಕಿ ಸಾಯಿಸಲಾಗಿತ್ತು.