ENTERTAINMENT: ಆ ದೊಡ್ಡ ಚಿತ್ರ ನಿರ್ಮಾಪಕ ಹೀರೋ ಜೊತೆ ಮಲಗುವಂತೆ ನನಗೆ ಹೇಳಿದ್ದ ಎಂದು ಬಹಿರಂಗಪಡಿಸುಬ ಮೂಲಕ ನಟಿ ಕಿಶ್ವೆರ ಮರ್ಚೆಂಟ್ ಚಿತ್ರರಂಗದಲ್ಲಿ ನಟಿಯರು ಎದುರಾದ ಕಾಸ್ಟಿಂಗ್ ಕೌಚ್ ಸನ್ನಿವೇಶವನ್ನು ನೆನಪಿಸಿಕೊಂಡಿದ್ದಾರೆ. ಗಾಯಕ ಸುಯ್ಯಶ್ ರೈ ಅವರ ಪತ್ನಿಯಾಗಿರುವ ಕಿಶ್ವೆರ್, ಪ್ರಸ್ತುತ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಂದರ್ಶನವೊಂದರಲ್ಲಿ ತಮ್ಮ ಕಹಿ ಅನುಭವವನ್ನು ನೆನಪಿಸಿಕೊಂಡಿರುವ ಅವರು, ಅವಕಾಶಪಡೆದುಕೊಳ್ಳಲು ಹೀರೋ ಜೊತೆ ಮಲಗುವಂತೆ ನಿರ್ಮಾಪಕ ಹೇಳಿದ್ದನೆಂಬ ವಿಚಾರ ಹೊರಹಾಕಿದ್ದಾರೆ. ಯಾವಾಗಲೂ ತಾಯಿಯ ಜೊತೆಯಲ್ಲೇ ಹೋಗುತ್ತಿದ್ದ ತಾನು ಅದೊಂದು ಸಲ ಒಬ್ಬಳೇ ಹೋಗಿದ್ದೆ. ಆಗ ಇಂಥ ಸನ್ನಿವೇಶವನ್ನು ಎದುರಿಸಬೇಕಾಯಿತು. ನಾನದನ್ನು ನಯವಾಗಿಯೇ ತಿರಸ್ಕರಿಸಿದೆ ಎಂದು ಹೇಳಿದ್ದಾರೆ. ಇಂಥದ್ದು ತುಂಬಾ ನಡೆಯುತ್ತದೆ ಎಂದು ಹೇಳಲಾರೆನಾದರೂ ಉದ್ಯಮದಲ್ಲಿ ಇದು ಸಾಮಾನ್ಯ ಎಂಬುದಂತೂ ನಿಜ ಎಂದಿದ್ದಾರೆ. ಆ ನಿರ್ಮಾಪಕ ಮತ್ತು ಆ ಹೀರೋ ಇಬ್ಬರು ದೊಡ್ಡ ಹೆಸರುಳ್ಳವರಾಗಿದ್ದರು ಎಂದೂ ಅವರು ಹೇಳಿದ್ದಾರೆ.