ENTERTAINMENT:
ರಾಯಚೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನ ಹೊಂದಿ ನಾಲ್ಕು ತಿಂಗಳು ಕಳೆದಿದ್ರು ಇಂದಿಗೂ ಅಪ್ಪು ಮೇಲಿನ ಅಭಿಮಾನ ಕಿಂಚಿತ್ತು ಕಮ್ಮಿಯಾಗಿಲ್ಲ. ಇಂದಿಗೂ ಲಕ್ಷಾಂತರ ಅಭಿಮಾನಿಗಳು ಪುನೀತ್ ಹೆಸರಿನಲ್ಲಿ ದಿನ ಕಳೆಯುತ್ತಿದ್ದಾರೆ. ಇದೀಗ ಪುನೀತ್ ಹೆಸರನ್ನ ಅಂಗನವಾಡಿ ಕೇಂದ್ರಕ್ಕೆ ಇಡುವ ಮೂಲಕ ಅಭಿಮಾನಿಗಳು ಅಭಿಮಾನ ಮೆರೆದಿದ್ದಾರೆ.
ಪುನೀತ್ ನೆನಪನ್ನ ಹಸಿರಾಗಿಡಲು ಅಭಿಮಾನಿಗಳು ನಾನಾ ರೀತಿಯ ಕೆಲಸಗಳನ್ನ ಮಾಡ್ತಿದ್ದಾರೆ. ಈಗಾಗ್ಲೆ ಅಪ್ಪು ಹೆಸರನ್ನ ರಸ್ತೆ, ಪಾರ್ಕ್ ಸೇರಿದಂತೆ ಸಾಕಷ್ಟು ಕಡೆಗಳಿಗೆ ನಾಮಕರಣ ಮಾಡಲಾಗಿದ. ಇದೀಗ ರಾಯಚೂರಿನಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಪುನೀತ್ ರಾಜ್ ಕುಮಾರ್ ಎಂದು ನಾಮಕರಣ ಮಾಡಿದ್ದಾರೆ.
ಮಾರ್ಚ್ 17ರಂದು ಪುನೀತ್ ಹುಟ್ಟುಹಬ್ಬವಿದೆ. ಈ ಹಿನ್ನೆಲೆಯಲ್ಲಿ ರಾಯಚೂರಿನ ಅಭಿಮಾನಿಗಳು ಇಲ್ಲಿನ ಅಂಗನವಾಡಿ ಕೇಂದ್ರ ಹಾಗೂ ರಸ್ತೆಗೆ ಪುನೀತ್ ಹೆಸರಿಟ್ಟು ಗೌರವ ಸೂಚಿಸಿದ್ದಾರೆ.
ಇತ್ತೀಚೆಗಷ್ಟೇ ಅಂಗನವಾಡಿ ಕೇಂದ್ರದ ಹೊಸ ಕಟ್ಟಡದ ಉದ್ಘಾಟನೆಯಾಗಿದ್ದು, ಇಲ್ಲಿನ ಅಭಿಮಾನಿಗಳ ಕಾರ್ಯವನ್ನ ನಟ ಶಿವರಾಜ್ ಕುಮಾರ್ ಮೆಚ್ಚಿಕೊಂಡಿದ್ದಾರೆ.