ENTERTAINMENT:
ಪುನೀತ್ ರಾಜ್ಕುಮಾರ್ ನಿಧನರಾಗಿ ನಾಲ್ಕು ತಿಂಗಳು ಕಳೆದಿದೆ. ಆದರೆ ಇಂದಿಗೂ ಅಪ್ಪು ನೆನಪು ಪ್ರತಿಯೊಬ್ಬರ ಮನಸ್ಸಲ್ಲು ಹರಿರಾಗಿದೆ. ಸಿನಿಮಾ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಕೋಟ್ಯಂತರ ಜನರ ಮನ ಗೆದ್ದಿದ್ದ ಪುನೀತ್ ಅರವನ್ನ ಅಭಿಮಾನಿಗಳು ನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಸ್ಮರಿಸುತ್ತಲೇ ಇರುತ್ತಾರೆ. ಈಗಾಗ್ಲೆ ಅನೇಕ ರಸ್ತೆ, ವೃತ್ತ, ಪಾರ್ಕ್ ಸೇರಿದಂತೆ ಸಾಕಷ್ಟು ಸಾರ್ವಜನಿಕ ಸ್ಥಳಗಳಿಗೆ ಪುನೀತ್ ಹೆಸರು ಇಡಲಾಗಿದೆ. ಸೀಮಂತ, ಮದುವೆ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಅಪ್ಪು ಫೋಟೋ ಇಟ್ಟು ಕಾರ್ಯಕ್ರಮ ಮಾಡಿದ್ದು ಇದೆ. ಇದೀಗ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಪುನೀತ್ ರಾಜ್ಕುಮಾರ್ ಅವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ‘ಪವರ್ ಸ್ಟಾರ್’ ಪುನೀತ್ ಅಭಿಮಾನಿಗಳು ಈ ಕಾರ್ಯ ಮಾಡಿದ್ದು, ಸಾವಿರಾರು ಜನ ಸೇರಿ ಹಬ್ಬದಂತೆ ಈ ಕ್ಷಣವನ್ನು ಸಂಭ್ರಮಿಸಿದ್ದಾರೆ. ಬಣ್ಣ ಬಣ್ಣದ ಲೈಟಿಂಗ್ಸ್ ಹಾಕಿ, ಪುನೀತ್ ಅವರ ಅನೇಕ ಪೋಸ್ಟರ್ಗಳನ್ನು ಅಂಟಿಸಿ ಖುಷಿಪಟ್ಟಿದ್ದಾರೆ. ಇನ್ನೂ ಪುನೀತ್ ನಟನೆಯ ಕೊನೆಯ ಹಾಗೂ ಬಹುನಿರೀಕ್ಷಿತ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಇದೇ ಮಾರ್ಚ್ 17ರಂದು ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾ ರಿಲೀಸ್ ಆಗಲಿದೆ.