ENTERTAINMENT:
ಚಿತ್ರಮಂದಿರ ತೆರೆಯಲು ಸರಕಾರವೇನೋ ಅನುಮತಿ ನೀಡಿದೆ. ಆದರೆ ಚಿತ್ರಮಂದಿರದ ಮಾಲೀಕರು ಥಿಯೇಟರ್ ತೆರೆಯಲು ಆಸಕ್ತಿ ತೋರತ್ತಿಲ್ಲ. ಮತ್ತೊಂದೆಡೆ ರಾಜ್ಯದ ಸುಮಾರು 60ಕ್ಕೂ ಹೆಚ್ಚು ಚಿತ್ರಮಂದಿರಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ. ಮಾಲ್ ಗಳಲ್ಲೂ ಕೂಡ ಥಿಯೇಟರ್ ತೆರೆದಿಲ್ಲ.
ಚಿತ್ರಮಂದಿರಗಳ ನೀರಿನ ತೆರಿಗೆ, ವಿದ್ಯುತ್ ತೆರಿಗೆಯಿಂದ ವಿನಾಯಿತಿ ನೀಡಿ ಎಂದು ಚಿತ್ರಮಂದಿರ ಮಾಲೀಕರು ಸರಕಾರಕ್ಕೆ ಮನವಿ ಮಾಡಿದ್ದರು. ಆದರೆ ಅದು ಇನ್ನೂ ಈಡೇರಿಲ್ಲ. ಕೇವಲ ಭರವಸೆಗಷ್ಟೇ ಸೀಮಿತವಾಗಿದೆ.
ಕೊರೋನಾ ಭಯ ಮರೆತು ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರಬಹುದು ಎಂಬ ಆಶಾಭಾವದಿಂದ ರಿವೈಂಡ್, ಕೃಷ್ಣ ಟಾಕೀಸ್, ಬಡವ ರಾಸ್ಕಲ್ ಚಿತ್ರಗಳು ರೀ ರಿಲೀಸ್ ಆಗಿವೆ. ಆದರೆ ಪ್ರೇಕ್ಷಕರು ಮಾತ್ರ ಚಿತ್ರಮಂದಿರಗಳತ್ತ ಸುಳಿಯುತ್ತಿಲ್ಲ.
ಈ ತಿಂಗಳು ಹೊಸ ಸಿನಿಮಾಗಳು ಯಾವು ತೆರೆಗೆ ಬರುತ್ತಿಲ್ಲ. ಆಗಸ್ಟ್ ನಲ್ಲಿ ಸಿನಿಮಾ ಸಂಭ್ರಮ ಆರಂಭವಾಗಬಹುದು ಎಂಬ ನಿರೀಕ್ಷೆ ಇದೆ. ದುನಿಯಾ ವಿಜಿ ನಟಿಸಿ ನಿರ್ದೇಶಿಸಿರುವ ಸಲಗ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಸೆಪ್ಟೆಂಬರ್ 10 ಗಣೇಶ ಚತುರ್ಥಿಯಂದು ಭಜರಂಗಿ 2 ರಿಲೀಸ್ ಆಗಲಿದೆ.
ಉಳಿದ ಚಿತ್ರಗಳ ಬಿಡುಗಡೆಯ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದೆ. ಆದರೆ ಈ ಅನಿಶ್ಚಿತತೆಯ ಸ್ಥಿತಿಯಲ್ಲಿ ಚಿತ್ರ ಬಿಡುಗಡೆ ದಿನಾಂಕ ಘೋಷಿಸುವುದು ಕಷ್ಟಕರವಾಗಿದೆ. ಮುಂದೆ ಮೂರನೇ ಅಲೆ ಬರುವ ಭಯವೂ ನಿರ್ದೇಶಕ, ನಿರ್ಮಾಪಕರನ್ನು ಕಾಡುತ್ತಿದೆ.
ಇದೆಲ್ಲವನ್ನು ಗಮನಸಿ, ನವ ನಿರ್ದೇಶಕ ನಿರ್ಮಾಪಕರು ಒಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡಲು ಮುಂದಾಗಿದ್ದಾರೆ.