ENTERTAINMENT:
ನಿರ್ದೇಶನ ಎಂದರೇನು, ಯಾವ ರೀತಿಯ ಕಥೆಯನ್ನು ಆಯ್ಕೆ ಮಾಡಿಕೊಳ್ಳಬೇಕು, ಸಿನಿಮಾ ಚಿತ್ರೀಕರಣ ಮಾಡಲು ಚಿತ್ರಕಥೆ ರಚಿಸಿದ ಮೇಲೆ ಅದನ್ನು ಹೇಗೆ ಶಾಟ್ಗಳನ್ನಾಗಿ ವಿಭಾಗಿಸಿಕೊಳ್ಳುವುದು, ಮೊದಲಿಗೆ ಶಾಟ್ ಎಂದರೇನು, ಟೇಕ್ ಎಂದರೇನು, ಶೂಟಿಂಗ್ ಚಾರ್ಟ್ ಎಂದರೇನು, ಕ್ಲಾಪ್ಬೋರ್ಡ್ ಯಾಕೆ ಬೇಕು, ಎಡಿಟಿಂಗ್ ರಿಪೋರ್ಟ್ ಎಂದರೇನು, ಕಂಟ್ಯೂನಿಟಿ ಎಂದರೇನು, ನಾಗರ ಎಂದರೇನು, ಸಂಕಲನ ಎಂದರೇನು, ಆವಿಡ್ ಎಂದರೇನು, ಟಿಲಿಸಿನಿ ಎಂದರೇನು-ಅದು ಇಂದು ಏಕಿಲ್ಲ?, ಡಬ್ಬಿಂಗ್ ಹೇಗೆ ಮಾಡಲಾಗುತ್ತದೆ, ರೀರೆಕಾರ್ಡಿಂಗ್ ಎಫೆಕ್ಟ್-ಮಿಕ್ಸಿಂಗ್ ಎಂದರೇನು, ಕಟ್ ಲೀಸ್ಟ್ ಎಂದರೇನು, ಅದು ರೀಲ್ ಸಮಯದಲ್ಲಿ ಎಷ್ಟು ಮುಖ್ಯವಾಗಿತ್ತು, ಸೆನ್ಸಾರ್ ಸ್ಕ್ರಿಪ್ಟ್ ಹೇಗೆ ಬರೆಯುವುದು, ಸೆನ್ಸಾರ್ ಹೇಗೆ ಮಾಡಿಸುವುದು, 100ಽ ಟ್ಯಾಕ್ಸ್ ಫ್ರಿ ಹೇಗೆ ಮಾಡಿಸುವುದು, ಹೇಗೆ ಚಿತ್ರ ಬಿಡುಗಡೆ ಮಾಡುವುದು, ಪ್ರೆಸ್ ಮೀಟ್ ಎಂದರೇನು, ಪೋಸ್ಟರ್ ಎಲ್ಲಿ ಮಾಡಿಸುವುದು, ಥಿಯೇಟರ್ ಬಾಡಿಗೆ ಎಷ್ಟು.. ಹೀಗೆ ನೂರಾರು ವಿಷಯಗಳನ್ನು ಈ ಪುಸ್ತಕದ ಮುಂದಿನ ಅಧ್ಯಾಯಗಳಲ್ಲಿ ಚರ್ಚಿಸಲಿದ್ದೇವೆ.
ಇಂದು ತಂತ್ರಜ್ಷಾನ ನಾಗಾಲೋಟದಲ್ಲಿ ಓಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೆ. ಈಗ ಸಿನಿಮಾ ಮಾಡುವುದು ಹಿಂದಿನಷ್ಟು ಕಷ್ಟವಲ್ಲ. ಹಲವಾರು ರೀತಿಯ ಡಿಜಿಟಲ್ ಕ್ಯಾಮರಾಗಳು ಇಂದು ಪ್ರತಿಯೊಬ್ಬರಿಗೂ ಸುಲಭ ಬಾಡಿಗೆಯಲ್ಲಿ ಲಭ್ಯವಾಗುತ್ತವೆ. ಅವುಗಳಲ್ಲಿ ಕ್ರಿಯೆಟಿವಿಟಿ ಇರುವ ವ್ಯಕ್ತಿ ತನ್ನ ಪ್ರತಿಭೆಯನ್ನು ತೋರಿಸಬಹುದು. ಆದರೆ ಅವನಿಗೆ ಬೇಕಾಗಿರುವುದು ಸಿನಿಮಾ ನಿರ್ದೇಶಿಸಲು ಬೇಕಾದ ಪ್ರಾಥಮಿಕ ಜ್ಷಾನ. ಕಥೆಯ ಆಯ್ಕೆಯಿಂದ ಹಿಡಿದು ಚಿತ್ರಕಥೆ, ಸಂಭಾಷಣೆ, ಷಾಟ್ ಕಾಂಪೋಸ್ ಮಾಡುವಲ್ಲಿ ತನ್ನ ಸೃಜನಶೀಲತೆಯನ್ನು ತೋರುವ ಜ್ಷಾನ ಬೇಕಾಗಿದೆ. ಬೇರಾವುದೋ ವಿಷಯದಲ್ಲಿ ಅವನು ಅತ್ಯಂತ ಪರಿಣಿತಿ ಹೊಂದಿದವನಾಗಿದ್ದರೂ (ಉದಾಹರಣಗೆಗೆ ಡಾಕ್ಟರ್ ಆಗಿರಬಹುದು, ಲಾಯರ್ ಆಗಿರಬಹುದು, ಐಎಎಸ್ ಆಫೀಸರ್ ಆಗಿರಬಹುದು) ಸಿನಿಮಾ ನಿರ್ದೇಶನ ಇವೆಲ್ಲವುಗಳಿಗಿಂತ ತೀರ ಭಿನ್ನವಾದ ಒಂದು ಕಲೆ. ಅದನ್ನು ಕ್ರಮಬದ್ಧವಾಗಿ ಕಲಿತು ಸಿನಿಮಾ ನಿರ್ದೇಶಿಸಿದಾಗ ಮಾತ್ರ ಇಲ್ಲಿ ಯಶಸ್ಸು ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ನಿರ್ದೇಶನದ ಬಗ್ಗೆ ಪರಿಪೂರ್ಣತೆ ಪಡೆಯಲು ನಿರ್ದೇಶನದ ಕ್ರಮಬದ್ಧ ಕಲಿಕೆ ಅನಿವಾರ್ಯ.
ಮುಂದಿನ ಸಂಚಿಕೆಯಲ್ಲಿ: ನಿರ್ದೇಶನ ಎಂದರೇನು?
ಓಂಪ್ರಕಾಶ್ ನಾಯಕ್, BMG24x7ಲೈವ್ಕನ್ನಡ