ಈ ಕ್ಷಣ :

ದರ್ಶನ್ ಹೆಸರಲ್ಲಿ ಡುಪ್ಲಿಕೇಟ್ ಪೋಸ್ಟ್!!!

Published 15 ಮಾರ್ಚ್ 2023, 22:38 IST
Last Updated 6 ಮೇ 2023, 20:51 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

ENTERTAINMENT: ಇದೇ ಇಪ್ಪತ್ತನೇ ತಾರೀಕು ವರ್ಡ್ಸ್ ಫಾದರ್ಸ್ ಡೇ. ತಂದೆಯ ಸವಿನೆನಪಲ್ಲಿ ತುಂಬಾ ಸೆಲೆಬ್ರಿಟಿಗಳು ತಮ್ಮ ಜನುಮದಾತರ ಫೋಟೋ ಜೊತೆಗೆ ಒಂದಷ್ಟು ಬರಹ ಮುಖೇನ ತಮ್ಮ ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ. ಆದರೆ ಇಲ್ಲೊಬ್ಬ ಆಸಾಮಿ ನಾಯಕ ನಟ ದರ್ಶನ್ ಹೆಸರಲ್ಲಿ ಸುದೀಪ್ ಅವರ ಹೆಸರು ಬಳಸಿ, ಟ್ವೀಟ್ ಮಾಡುವ ಮೂಲಕ ಅವರಿಬ್ಬರ ನಡುವೆ ಹಳಸಿಕೊಂಡಿರುವ ಸ್ನೇಹಕ್ಕೆ, ಮುನಿಸಿಕೊಂಡಿರುವ ಕೋಪಕ್ಕೆ ತುಪ್ಪ ಸುರಿದಿದ್ದಾನೆ! ದರ್ಶನ್ ತೂಗುದೀಪ ಹೆಸರಲ್ಲಿ ಟ್ವೀಟ್! “ಅಪ್ಪನ ದಿನಾಚರಣೆ ಶುಭಾಶಯ. ಕಿಚ್ಚ ಸುದೀಪ ನಿನ್ನ ಭಿಕ್ಷೆಯಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ನಿಮ್ಮ ಈ ಭಿಕ್ಷೆಗೆ ಎಂದೆಂದಿಗೂ ಚಿರಋಣಿಯಾಗಿರಲು ಇಚ್ಛಿಸುತ್ತೇನೆ!” ಈ ರೀತಿಯಲ್ಲಿ ಪೋಸ್ಟ್ ಒಂದನ್ನು ಹಾಕಿರುವ ಡುಪ್ಲಿಕೇಟ್ ಖಾತೆದಾರ, ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ನಡುವೆ ಬಿರುಕು ಮೂಡಿಸುವ ಉದ್ದೇಶದಿಂದಲೇ ಹಾಗೆ ಪೋಸ್ಟ್ ಮಾಡಿದ್ದಾನೆ ಎನ್ನುವುದು ಮೇಲ್ನೋಟಕ್ಕೆ ಅಷ್ಟೇ ಅಲ್ಲ. ಒಳನೋಟಕ್ಕೂ ಗೊತ್ತಾಗಿಬಿಡುತ್ತದೆ. ದರ್ಶನ್ ಹಾಗೂ ಸುದೀಪ್ ನಡುವೆ ಕಿತ್ತಾಟ ಇಲ್ಲದೇ ಇದ್ದರೂ, ಮೌನವಾಗಿಯೇ ಇಬ್ಬರೂ ದೂರ ದೂರವೇ ಇದ್ದರೂ ಅವರ ಅಭಿಮಾನಿಗಳ ಕಿತ್ತಾಟ ಕೂಗಾಟ (ಸೋಷಿಯಲ್ ಮೀಡಿಯಾದಲ್ಲಿ) ಇದ್ದೇ ಇದೆ. ಅದನ್ನು ಗೊತ್ತುಮಾಡಿಕೊಂಡಿರುವ ಫೇಕ್ ಖಾತೆದಾರ ಇದೀಗ ಇಂಥದೊಂದು ಪೋಸ್ಟ್ ಹಾಕುವ ಮೂಲಕ ಇಬ್ಬರ ಅಭಿಮಾನಿಗಳನ್ನೂ ಕೆಣಕಿದ್ದಾನೆ. ಕೆಣಕಿ ಸುಮ್ಮನಾಗಿ ಎಲ್ಲೋ ಕೂತು ಚಂದ ನೋಡುತ್ತಿದ್ದಾನೆ! ಅಭಿಮಾನಿಗಳ ಮಧ್ಯೆ ಆಗಲಿಂದಲೂ ಒಳಜಗಳ! ಸುದೀಪ್ ಹಾಗೂ ದರ್ಶನ್ ತುಂಬಾ ಚೆನ್ನಾಗಿಯೇ ಇದ್ದರು. ಒಟ್ಟಿಗೇ ಕ್ರಿಕೆಟ್ ಆಡುತ್ತಿದ್ದರು. ಒಟ್ಟಿಗೇ ಸಿನೆಮಾ ಮಾಡಬೇಕು ಎನ್ನುವ ಹಂತದಲ್ಲಿ ಫ್ರೆಂಡ್ಸ್ ಆಗಿದ್ದರು. ಆದರೆ ಅದೊಂದು ಫೈನ್ ಮಾರ್ನಿಂಗ್ ಇಬ್ಬರ ನಡುವೆಯೂ ಕಲಹ ಶುರುವಾಗಿ ಒಬ್ಬರಿಗೊಬ್ಬರು 63ರಂತಿದ್ದವರು 36 ಆಗಿಬಿಟ್ಟರು. ಆ ಮುಖ ಈ ಮುಖ ಮಾಡಿಕೊಂಡು ದೂರವಾಗಿಬಿಟ್ಟರು. ಅಲ್ಲಿಂದ ಅವರಿಬ್ಬರ ಫ್ಯಾನ್ಸ್ ಮಧ್ಯೆ ಹತ್ತಿಕೊಂಡ ಬೆಂಕಿ ಇವತ್ತಿಗೂ ಆರಿಲ್ಲ. ಈ ಮಧ್ಯೆ ಕೆಲವರು ನಕಲಿ ಖಾತೆಯ ಮೂಲಕ ಇವರು ಅವರಿಗೆ ಏನೋ ಹೇಳಿದಂತೆ, ಅವರು ಇವರಿಗೆ ಏನೋ ಕಾಂಮೆಂಟ್ ಮಾಡಿದಂತೇ ಆಟ ಆಡುತ್ತಿದ್ದಾರೆ. ಮಜಾ ತೆಗೆದುಕೊಳ್ಳುತ್ತಿದ್ದಾರೆ. ಇಂಥವರ ವಿರುದ್ಧ ಸೈಬರ್ ಕ್ರೈಮ್ ನವರೂ ಒಂದು ಕಣ್ಣು ಇಟ್ಟರೆ ಒಳ್ಳೆಯದು!

ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45