ಈ ಕ್ಷಣ :

ತಣ್ಣನೆಯ ಕ್ರೌರ್ಯದಲ್ಲಿ ಬೇಯುವ 'ಹಸೀನಾ'!

Published 16 ಮಾರ್ಚ್ 2023, 14:19 IST
Last Updated 6 ಮೇ 2023, 20:51 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

ENTERTAINMENT:

ಹಸೀನಾ: ಚಿತ್ರ ವಿಮರ್ಶೆ
ಹಸೀನಾ ಚಿತ್ರ ನೋಡಿದ ನಂತರವೂ ಅವರ ಕಣ್ಣುಗಳಲ್ಲಿ ನೀರು ಬರಲಿಲ್ಲವೆಂದರೆ ಅವರು ಗೆದ್ದಂತೆ! ಇದು ನನ್ನ ಪಂದ್ಯ!! ಹೌದು, 2004ರಲ್ಲಿ ಬಿಡುಗಡೆಯಾದ ಈ ಚಿತ್ರ ಗಿರೀಶ್ ಕಾಸರವಳ್ಳಿಯವರ ದಿ ಬೆಸ್ಟ್ ಸಿನಿಮಾ ಅನ್ನಬಹುದು. ಕಾಸರವಳ್ಳಿ ನಿರ್ದೇಶನ, ತಾರಾ ಅಭಿನಯದ ಈ ಚಿತ್ರದ ಹಸೀನಾ ಪಾತ್ರಕ್ಕಾಗಿ ತಾರಾಗೆ ರಾಷ್ಟ್ರೀಯ ಪ್ರಶಸ್ತಿ ಬಂದಿರುವುದಕ್ಕೆ ಅಚ್ಚರಿ ಪಡಬೇಕಿಲ್ಲ. ಒಂದೊಮ್ಮೆ ಬರದಿದ್ದರೆ ಅಚ್ಚರಿ ಪಡಬೇಕಿತ್ತು.
ಇಡೀ ಚಿತ್ರದಲ್ಲಿ ತಾರಾ ಎಲ್ಲಿದ್ದಾರೆ ಎಂದು ಹುಡುಕಿದರೂ ಸಿಗುವುದಿಲ್ಲ. ಏಕೆಂದರೆ ಹಸೀನಾ ಚಿತ್ರದಲ್ಲಿ ನಿಮಗೆ ಕಾಣಸಿಗುವುದು ಒಬ್ಬ ಅಸಹಾಯಕ ಮುಸ್ಲಿಂ ಹೆಣ್ಣುಮಗಳು ಹಸೀನಾ ಮಾತ್ರ! ಗಂಡು ಮಗುವನ್ನು ಹೆರಲಿಲ್ಲ, ಸಾಲಾಗಿ ಮೂರು ಹೆಣ್ಣನ್ನೇ ಹೆತ್ತಿದ್ದಾಳೆ ಎಂದು ಅವಳ ಬದುಕು ನರಕವಾಗಿಸುವ ಅವಳ ಗಂಡ ಯಾಕೂಬನ ಕ್ರೌರ್ಯ ನಮ್ಮ ರಕ್ತವನ್ನು ತಣ್ಣಗಾಗಿಸುತ್ತದೆ. ಚಿತ್ರದುದ್ದಕ್ಕೂ ಹಸೀನಾ ತನ್ನನ್ನು ತನ್ನ ಮಕ್ಕಳನ್ನು ಸಾಕದೆ ಬಿಟ್ಟು ಹೋದ ಪತಿಯಿಂದ ನ್ಯಾಯ ಕೇಳಲು ಮಸೀದಿಯ ಮುಂದೆ ಅನ್ನ ನೀರು ಬಿಟ್ಟು ಕುಳಿತು ಮುತಾವಲಿಯಿಂದ ನ್ಯಾಯ ನಿರೀಕ್ಷೆ ಮಾಡುವುದು, ಅದಕ್ಕೆ ಮುತಾವಲಿ ತೋರುವ ನಿರ್ಲಕ್ಷ್ಯ, ಅಲ್ಲಿ ಕಂಡುಬರುವ ಒಳರಾಜಕೀಯ ಮುಸ್ಲಿಂ ಸಮಾಜದ ಮತ್ತೊಂದು ಮುಖವನ್ನು ಅನಾವರಣಗೊಳಿಸುತ್ತದೆ.
ಮೂರು ಹೆಣ್ಣುಮಕ್ಕಳಲ್ಲಿ ದೊಡ್ಡಹುಡುಗಿ ಮುನ್ನಿ ಕುರುಡಿ. ಆದರೆ ಅವಳ ಜೀವನ ಪ್ರೀತಿ, ಓದಿನ ಪ್ರೀತಿಗೆ ತಾಯಿ ಹಸೀನಾ ಜೀವಸೆಲೆಯಾಗುತ್ತಾಳೆ. ಮಗಳ ಕಣ್ಣಿನ ಶಸ್ತ್ರಚಿಕಿತ್ಸೆಗೆ ಬಿಟ್ಟುಹೋಗುತ್ತಿರುವ ಗಂಡನಿಂದ ಮೆಹರ್ ಹಣವನ್ನು ಪಡೆಯಲು ಚಿತ್ರದುದ್ದಕ್ಕೂ ಹೋರಾಡುವ ಹಸೀನಾ ಕಡೆಯಲ್ಲಿ ಅದನ್ನು ಪಡೆಯಲು ನಿರಾಕರಿಸುತ್ತಾಳೆ. ಅದಕ್ಕೆ ಕಾರಣ ಅವಳು ಯಾವ ತನ್ನ ಕುರುಡಿ ಮಗಳು ಮುನ್ನಿಯ ಶಸ್ತ್ರಚಿಕಿತ್ಸೆಗಾಗಿ ಅದನ್ನು ಕೇಳಿದ್ದಳೋ, ಅದಕ್ಕಾಗಿ ಹೋರಾಡಿದ್ದಳೋ ಅವಳನ್ನೇ ಗಂಡ ಯಾಕೂಬ ಮಸೀದಿಯ ಮುಂದೆ ಹಸೀನಾಳ ಮೇಲೆ ಹಲ್ಲೆ ಮಾಡುವಾಗ ಯಾಕೂಬ ತುಳಿದು ಕೊಂದು ಬಿಟ್ಟಿರುತ್ತಾನೆ.
ಚಿತ್ರದುದ್ದಕ್ಕೂ ಹಸೀನಾ ಅನುಭವಿಸುವ ತಣ್ಣನೆಯ ಕ್ರೌರ್ಯವನ್ನು ನಿರ್ದೇಶಕರು ಎಲ್ಲಿಯೂ ವೈಭವೀಕರಿಸಿಲ್ಲ. ಹಸೀನಾಳನ್ನು ಗಂಡ ಹೊಡೆಯುವಾಗಲೂ ಸಹ ಮಕ್ಕಳ ಮುಖದ ಭಾವನೆಯ ಮೂಲಕ, ಅಳುವಿನ ಶಬ್ದದ ಮೂಲಕ ತೋರಿಸುತ್ತಾರೆಯೇ ಹೊರತು ಅದನ್ನು ಪ್ರದರ್ಶನದ ಸರಕಾಗಿಸುವುದಿಲ್ಲ. ಇದೇ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಅದ್ಭುತ ಕಲೆಗಾರಿಕೆಯೆನ್ನಬಹುದು. ಚಿತ್ರದಲ್ಲಿ ನಮ್ಮನ್ನು ತಟ್ಟುವ ಮತ್ತೊಂದು ಮಾನವೀಯ ಪಾತ್ರವೆಂದರೆ ಕುರುಡು ಶಾಲೆಯ ಮೇಸ್ಟರು. ಮುನ್ನಿಗಾಗಿ ತುಡಿಯುವ, ಮರುಗುವ ಈ ಹೃದಯವಂತ ಮೇಸ್ಟರು ನಮ್ಮ ಹೃದಯವನ್ನೂ ತಟ್ಟುತ್ತಾರೆ.
ಇಡೀ ಚಿತ್ರವನ್ನು ಆವರಿಸಿಕೊಂಡಿರುವ ಯಾಕೂಬನ ಪಾತ್ರ ಕೂಡ ತನ್ನ ಕ್ರೌರ್ಯದಿಂದ ನಮ್ಮನ್ನು ಸೆಳೆಯುತ್ತದೆ. ನ್ಯಾಯ ಕೊಡಿಸುವುದಕ್ಕಿಂತ ತನ್ನ ಮುತಾಲಿಕ್ ಪೀಠವನ್ನು ಉಳಿಸಿಕೊಳ್ಳಲು ಹೆಣಗುವ ಮುತಾಲಿಕ್ ಪಾತ್ರವೂ ಸಹ ತನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಿದೆ. ಇನ್ನು ಹಸೀನಾ ಪಾತ್ರ ಮಾಡಿರುವ ತಾರಾ ಪರಕಾಯ ಪ್ರವೇಶ ಮಾಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಅದಕ್ಕೆ ತಾನೆ ಆ ಪಾತ್ರಕ್ಕಾಗಿ ತಾರ ರಾಷ್ಟ್ರಪ್ರಶಸ್ತಿ ಪಡೆದಿರುವುದು! 18 ವರ್ಷಗಳ ಹಿಂದಿನ ಈ ಚಿತ್ರವನ್ನು ಇಂದಿನ ಯುವಜನಾಂಗ ನೋಡಿರದೆ ಇರುವ ಸಾಧ್ಯತೆಯಿದೆ. ಇಂದು ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯವನ್ನು, ಅವರ ಮೇಲಿನ ಕ್ರೌರ್ಯವನ್ನು ತೋರಿಸುವ ಸಿನಿಮಾ ಆಗಿ ಇಡೀ ದೇಶದ ಜನರನ್ನು ಸೆಳೆದಿರುವ ದಿ ಕಾಶ್ಮೀರಿ ಫೈಲ್ಸ್ ನೋಡಿರುವವರು, ಒಬ್ಬ ಹೆಂಗಸಿನ ಮೇಲೆ ನಡೆಯುವ ಕ್ರೌರ್ಯವನ್ನು ಹಸಿಯಾಗಿ ತೋರಿಸದೆ ಹೇಗೆ ಕಲಾತ್ಮಕವಾಗಿ ತೋರಿಸಬಹುದು ಎಂಬುದಕ್ಕೆ ಹಸೀನಾ ಸಹ ಒಮ್ಮೆ ನೋಡಿದರೆ ಒಳ್ಳೆಯದು ಎಂದು ನನ್ನ ಭಾವನೆ.
ಓಂಪ್ರಕಾಶ್ ನಾಯಕ್, BMG24x7ಲೈವ್ಕನ್ನಡ

ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45