ಖ್ಯಾತ ರಿಯಾಲಿಟಿ ಪ್ರೋಗ್ರಾಂ ಕಪಿಲ್ ಶರ್ಮಾ ಶೋ ಕ್ಲೋಸ್!

ಖ್ಯಾತ ರಿಯಾಲಿಟಿ ಪ್ರೋಗ್ರಾಂ ಕಪಿಲ್ ಶರ್ಮಾ ಶೋ ಕ್ಲೋಸ್!

ಭಾರತದ ಟಿವಿ ಜಗತ್ತಿನಲ್ಲಿ ಸದಾ ನಂಬರ್ ಒನ್ ಸ್ಥಾನದಲ್ಲಿದ್ದ ರಿಯಾಲಿಟಿ ಶೋ, ದಿ ಕಪಿಲ್ ಶರ್ಮಾ ಶೋ ಯಶಸ್ಸಿನ ಉತ್ತುಂಗದಲ್ಲಿದ್ದ ರಿಯಾಲಿಟಿ ಶೋ. ಇದೀಗ ಇದಕ್ಕಿದ್ದ ಹಾಗೆ ಪ್ರಸಾರ ನಿಲ್ಲಿಸುತ್ತಿದೆ.

ಕಪಿಲ್ ಶರ್ಮಾ ನಡೆಸಿಕೊಡುತ್ತಿದ್ದ ಖ್ಯಾತ ರಿಯಾಲಿಟಿ ಶೋ ದಿ ಕಪಿಲ್ ಶರ್ಮಾ ಶೋ ಇನ್ನು ಮುಂದೆ ನಿಮ್ಮ ಟಿವಿ ಪರದೆ ಮೇಲೆ ಕಾಣಿಸಿಕೊಳ್ಳೋದಿಲ್ಲ. ಆ ಜಾಗಕ್ಕೆ ಲಾಫ್ಟರ್ ಚಾಲೆಂಜ್ ಹೆಸರಿನ ಮತ್ತೊಂದು ಹಾಸ್ಯ ಕಾರ್ಯಕ್ರಮ ಪ್ರಸಾರವಾಗಲಿದೆ.

'ಕಾಮಿಡಿ ನೈಟ್ಸ್ ವಿಥ್ ಕಪಿಲ್' ಹೆಸರಿನಲ್ಲಿ ಆರಂಭವಾದ ಕಾರ್ಯಕ್ರಮ ಬಳಿಕ ಕೆಲವೊಂದು ಕಾರಣದಿಂದ ಸೋನಿಗೆ ವರ್ಗಾವಣೆಯಾಯ್ತು. ಚಾನಲ್ ನ ಬದಲಾವಣೆಯಾದ್ರು ಟಿಆರ್ ಪಿ ಪಟ್ಟಿಯಲ್ಲಿ ಮೊದಲ ಸ್ಥಾನವನ್ನೇ ಕಪಿಲ್ ಶರ್ಮಾ ಶೋ ಪಡೆದುಕೊಂಡಿತ್ತು.

ಆದರೆ ಇತ್ತೀಚೆಗೆ ಕಪಿಲ್ ಶರ್ಮಾ ಶೋ ಮೊದಲಿನ ರೀತಿ ಇಲ್ಲ ಎಂದು ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದರು. ಜೊತೆಗೆ ಕಪಿಲ್ ಶರ್ಮಾರ ಆರೋಗ್ಯವು ಹದಗೆಟ್ಟಿದ್ದು, ಕೆಲವೊಂದಷ್ಟು ವಿವಾದವೂ ಅವರ ಮೇಲೆ ಕೇಳಿ ಬಂದಿತ್ತು.

ಕಪಿಲ್ ಶರ್ಮಾ ಜೊತೆ ಹಲವು ವರ್ಷಗಳಿಂದ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದ ಕಲಾವಿದರ ಮೇಲೆ ಜಗಳ ಮಾಡಿಕೊಂಡಿದ್ರು. ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ಸುನಿಲ್ ಗ್ರೋವರ್ ಇನ್ನೂ ಕೆಲವೊಂದಷ್ಟು ಮಂದಿ ಕಪಿಲ್ ಶರ್ಮಾರಿಂದ ದೂರವಾಗಿದ್ದರು. ಈ ಎಲ್ಲಾ ಕಾರಣಗಳಿಂದ ಕಪಿಲ್ ಶರ್ಮಾ ಶೋ ಕಳೆಗುಂದೋಕೆ ಶುರುವಾಯ್ತು. ಹೀಗಾಗಿ ಕಪಿಲ್ ಶರ್ಮ ಶೋ ಕೊನೆಯಾಗುತ್ತಿದ್ದು ಆ ಜಾಗದಲ್ಲಿ ಲಾಫ್ಟರ್ ಚಾಲೆಂಜ್ ಕಾರ್ಯಕ್ರಮ ಪ್ರಸಾರವಾಗಲಿದೆ.