ENTERTAINMENT: ಮೆಟ್ರೋ ಗೋಲ್ಡ್‍ವಿನ್ ಮೇಯರ್ ಸಂಸ್ಥೆಯಿಂದ ಜೇಮ್ಸ್ ಬಾಂಡ್ ಚಲನಚಿತ್ರಗಳನ್ನು ಆನ್‍ಲೈನ್ ದೈತ್ಯಸಂಸ್ಥೆ ಅಮೆಜಾನ್ ಖರೀದಿಸಿದೆ. ಜೇಮ್ಸ್‍ಬಾಂಡ್, ಲೀಗಲ್ಲಿ ಬ್ಲಾಂಡ್ ಹಾಗೂ ಶಾರ್ಕ್ ಟ್ಯಾಂಕ್‍ಗಳ ನಿರ್ಮಾಪಕ ಎಂಜಿಎಂಗೆ ಅಮೆಜಾನ್ ನೀಡಿದ ಮೊತ್ತ 8.45 ಶತಕೋಟಿ ಡಾಲರ್! ಇದಕ್ಕೆ ಮುನ್ನ ಅಮೆಜಾನ್ ಸರಕು ಸಂಸ್ಥೆ ಹೋಲ್ ಫುಡ್‍ನ್ನು 14 ಶತಕೋಟಿ ಡಾಲರ್‍ಗೆ ಖರೀದಿಸಿತ್ತು. ಅಮೆಜಾನ್ ಸಂಸ್ಥೆ ನೆಟ್‍ಫ್ಲಿಕ್ಸ್ ಹಾಗೂ ಡಿಸ್ನಿ+ ನಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದೆ. ಎಟಿ ಆಂಡ್ ಟಿ ಹಾಗೂ ಡಿಸ್ಕವರಿ ಚಾನೆಲ್‍ಗಳು ಎಚ್‍ಜಿಟಿವಿ, ಸಿಎನ್‍ಎನ್ ಹಾಗೂ ಎಚ್‍ಬಿಒ ಜೊತೆ ಒಟ್ಟಾಗಿವೆ. ಈ ಸ್ಪರ್ಧೆಯನ್ನು ಎದುರಿಸಲು ಅಮೆಜಾನ್ ಮಾಧ್ಯಮ ಸಂಸ್ಥೆಗಳ ಖರೀದಿಗೆ ಮುಂದಾಗಿದೆ. 1924ರಲ್ಲಿ ಆರಂಭವಾದ ಎಂಜಿಎಂ, ಹಾಲಿವುಡ್‍ನ ಅತ್ಯಂತ ಹಳೆಯ ಸ್ಟುಡಿಯೋಗಳಲ್ಲಿ ಒಂದು. ಮೂಕಿ ಚಿತ್ರಗಳ ಕಾಲದಿಂದಲೇ ಸಿನೆಮಾ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಸಂಸ್ಥೆಯ ಜೇಮ್ಸ್‍ಬಾಂಡ್ ಚಿತ್ರ "ನೋ ಟೈಮ್ ಟು ಡೈ' ಇನ್ನಷ್ಟೇ ಬಿಡುಗಡೆ ಆಗಬೇಕಿದೆ.