ಈ ಕ್ಷಣ :

ಆಧುನಿಕ ಯುಗದಲ್ಲಿ ರಂಗಭೂಮಿಗೆ ಪ್ರಾಶ್ಯಸ್ತ್ಯವಿದೆಯೇ?

Published 16 ಮಾರ್ಚ್ 2023, 14:18 IST
Last Updated 6 ಮೇ 2023, 20:51 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

ENTERTAINMENT:

ಇತ್ತೀಚಿನ ತಂತ್ರಜ್ಞಾನದಿಂದ ರಂಗಭೂಮಿ ಅನ್ನುವುದು ಬೆರಳಿಕೆಯಷ್ಟು ಅಸ್ಥಿತ್ವದಲ್ಲಿ ಇದೆ. ಆದರೆ ಅದೆಷ್ಟೆ ಜನರು ರಂಗಭೂಮಿಯಿಂದ ದೂರ ಉಳಿದಿಲ್ಲ. ಇಂದಿಗೂ ಕೂಡ ರಂಗಾಸಕ್ತರು ಇದ್ದಾರೆ. ದಿನದಿಂದ ದಿನಕ್ಕೆ ರಂಗಭೂಮಿ ಹೊಸದಾಗಿ ರೂಪಗೊಳ್ಳುತ್ತಾ ಹೋಗುತ್ತದೆ. ಇನ್ನು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೇಗ್ಗೋಡು ನೀನಾಸಂ ಮತ್ತು ಅರಮನೆ ನಗರಿ ಮೈಸೂರಿನಲ್ಲಿ ರಂಗಾಯಣ ಎಂಬ ನಾಟಕ ಶಾಲಾ ಮಂದಿರ ಇಂದಿಗೂ ಅಸ್ಥಿತ್ವದಲ್ಲಿ ಇದೆ. ಇದರಿಂದ ಅದೆಷ್ಟೋ ಕಲಾವಿದರು ಹೊರಹೊಮ್ಮಿದ್ದಾರೆ.

ಒಂದಾನೊಂದು ಕಾಲದಲ್ಲಿ ನಾಟಕ ಅಂದರೆ ಸಾಕು ಜನರು ತಾ ಮುಂದೆ ನಾ ಮುಂದೆ ಎಂದು ಮುಂದೆ ಕೂರಕ್ಕೆ ಮುಗಿಬೀಳುತ್ತಿದ್ದರು. ಅದು ಎಂತಹ ಸಮಯದಲ್ಲಿ ಅಂದರೆ ಅದು ಮಾಗಿಯ ತಿಂಗಳ ರಾತ್ರಿ. ಮೈ ಕೊರೆಯುವ ಚಳಿ. ಮನೆಯೊಳಗೆ ಕಂಬಳಿ ಹೊದ್ದು ಮಲಗಿದರೆ ಸಾಕು ಅನಿಸಿಬಿಡುತ್ತದೆ. ಆದರೂ ಅಲ್ಲೊಂದಷ್ಟು ಮಂದಿ ಸ್ವೆಟರ್‌, ಜಾಪೆಯೊಂದಿಗೆ ಬಂದಿದ್ದರು. ಯಾವುದೇ ವಯಸ್ಸಿನ ಹಂಗಿರಲಿಲ್ಲ. ಮಕ್ಕಳಿಂದ ಹಿಡಿದು ಯುವಕರು, ಮಹಿಳೆಯರು, ಹಿರಿಯ ನಾಗರಿಕರು ರಾತ್ರಿಪೂರ ಕಣ್ಣು ಮುಚ್ಚದೆ ನಾಟಕ ಕಣ್ತುಂಬಿಕೊಂಡರು. ಅಂದು ಆ ನಾಟಕದಲ್ಲಿ ಅಭಿನಯಿಸಿದ್ದ ಎಲ್ಲಾ ರಂಗಭೂಮಿ ಕಲಾವಿದರಿಗೆ ರಂಗಾಸಕ್ತರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟಿ ಪೋತ್ಸಾಹ ನೀಡಿದರು. ಹಾಗೇ ರಾತ್ರಿಯೆಲ್ಲ ನಿದ್ರೆ ಮಾಡದೆ ರಂಗಾಸಕ್ತರು ನೋಡಿದ ನಾಟಕದ ಹೆಸರು ಮಲೆಗಳಲ್ಲಿ ಮದುಮಗಳು.

ಹೌದು. ರಂಗಭೂಮಿಯ ನಿಜವಾದ ಶಕ್ತಿ ಅಂದರೆ ಇದು. ಸಿನಿಮಾ, ಆನ್‌ಲೈನ್‌, ವೆಬ್‌ ಮೀಡಿಯಾ, ಇ ಪೇಪರ್‌… ಇವೆಲ್ಲದರ ನಡುವೆಯೂ ರಂಗಭೂಮಿ ಕುಂದಿಲ್ಲ ಎಂಬುದಕ್ಕೆ ಮಲೆಗಳಲ್ಲಿ ಮದುಮಗಳು ಎಂಬ ನಾಟಕವೆ ಸಾಕ್ಷಿ. ವರ್ಷಗಳು ಉರುಳಿದಂತೆ ರಂಗಭೂಮಿ ನಶಿಸಿ ಹೋಗುತ್ತದೆ, ನಾಟಕ ನೋಡಲು ಜನ ಬರುವುದಿಲ್ಲ ಎಂಬ ಗೊಣಗಾಟದ ಮಧ್ಯೆಯೇ ರಂಗಭೂಮಿ ಹೊಸಹೊಸ ರೂಪಾಂತರದೊಂದಿಗೆ ಬೆಳೆಯುತ್ತಿದೆ.ಟಿವಿ ಮಾಧ್ಯಮ ಬಂದಾಗ ನಾಟಕಗಳನ್ನು ಯಾರು ನೋಡುತ್ತಾರೆ ಎಂದು ಅನೇಕರು ಜರಿದಿದ್ದರು.

ಇನ್ನು ಸಿನಿಮಾರಂಗ ಕಾಲಿಟ್ಟಾಗಲ್ಲಂತೂ ರಂಗಭೂಮಿ ಕತೆ ಮುಗಿದೇ ಹೋಯಿತು ಎಂದು ಹಲವು ಮಂದಿ ವಾದ ಮಂಡಿಸಿದ್ದರು. ಆದರೆ, ರಂಗಭೂಮಿ ನಿಂತ ನೀರಾಗಲೇ ಇಲ್ಲ. ಸಮೃದ್ಧವಾಗಿ ಹಬ್ಬುತ್ತಾ ಸಮಾಜ ಕಟ್ಟುತ್ತಲೇ ಹೋಯಿತು. ಇವತ್ತಿಗೂ ರಾಜಧಾನಿ ಬೆಂಗಳೂರಿನಿಂದ ಹಿಡಿದು ಸಾಂಸ್ಕೃತಿಕ ನಗರಿ ಮೈಸೂರು, ಧಾರವಾಡ, ಶಿವಮೊಗ್ಗ, ಹುಬ್ಬಳ್ಳಿಯಂತಹ ಮಹಾನಗರಿಗಳಲ್ಲಿ ಹವ್ಯಾಸಿ ರಂಗತಂಡಗಳು ತಲೆ ಎತ್ತುತ್ತಲೇ ಇವೆ. ವೃತ್ತಿ ರಂಗಭೂಮಿಯಿಂದ ಹಿಡಿದು ರಂಗಾಯಣದಂತಹ ಸ್ವಾಯತ್ತ ಸರಕಾರಿ ಸಂಸ್ಥೆಗಳು ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಿವೆ.

ನೂರಾರು ಪ್ರಯೋಗ

ರಂಗಭುಮಿಯನ್ನು ಹೊರಗೆ ತಂದಿದ್ದೆ ಗ್ರೀಕ್ ಮೂಲದವರು. ನಂತರ ಎಲ್ಲ ಕಡೆ ಹಬ್ಬತ್ತ ಹೋಯಿತು.
ಬೀದಿ ನಾಟಕಗಳು, ಕಂಪನಿ ನಾಟಕಗಳು, ಪೌರಾಣಿಕ ನಾಟಕಗಳನ್ನು ಜನ ಇಷ್ಟುಪಟ್ಟು ಇವತ್ತಿಗೂ ನೋಡುತ್ತಾರೆ. ಸಾಮಾಜಿಕ ನಾಟಕಗಳು, ಸಮಕಾಲೀನ ತಲ್ಲಣಗಳಿಗೂ ರಂಗಭೂಮಿ ಸ್ಪಂದಿಸುವ ಗುಣವಿಶೇಷ ಹೊಂದಿದೆ. ಮಕ್ಕಳ ನಾಟಕಗಳಿಂದ ಹಿಡಿದು ಮಹಿಳಾ ಪರ ಧ್ವನಿ ಎತ್ತುವ ನಾಟಕಗಳಿಗೆ ಕೊರತೆ ಏನೇನಿಲ್ಲ. ಕನ್ನಡ ರಂಗಭೂಮಿಯಲ್ಲಿ ನಿರಂತರ ಪ್ರಯೋಗಗಳು ನಡೆಯುತ್ತಲೇ ಇವೆ. ಸಾಕಷ್ಟು ಕಾದಂಬರಿ, ಕತೆಗಳು ನಾಟಕ ರೂಪ ಪಡೆದುಕೊಳ್ಳುತ್ತಿವೆ. ಇದಕ್ಕೆ ಉತ್ತಮ ಉದಾಹರಣೆ ಕುವೆಂಪು ಅವರ ರಚನೆಯ ಮಲೆಗಳಲ್ಲಿ ಮದುಮಗಳು, ಇದು 9 ಗಂಟೆ ಕಾಲ ನಡೆದ ದೀರ್ಘ ನಾಟಕ. 80ಕ್ಕೂ ಹೆಚ್ಚು ಪ್ರದರ್ಶನವನ್ನು ಮೈಸೂರು ಮತ್ತು ಬೆಂಗಳೂರಿನಲ್ಲಿ ಕಂಡಿದೆ. ಇನ್ನು ಕುವೆಂಪು ಅವರ 'ಶ್ರೀರಾಮಾಯಣ ದರ್ಶನಂ' ಕೂಡ 5 ಗಂಟೆಯ ನಾಟಕ. ಮಂಡ್ಯದಲ್ಲಿ ನಡೆದ ಅಹೋರಾತ್ರಿ ದ್ರಾವಿಡ ನಾಟಕ ಪ್ರಯೋಗ ಮರೆಯಲು ಸಾಧ್ಯವಿಲ್ಲ.

ಸಮಕಾಲೀಕ ಬದಲಾವಣೆಗೆ ತಕ್ಕಂತೆ ಇಂದು ನಾಟಕಗಳು ತಯಾರಾಗುತ್ತಿವೆ. ರಂಗಭೂಮಿ ರಚನಾತ್ಮಕ ಮಾದರಿಯಲ್ಲ. ಅದು ಸೃಜನಶೀಲ ಮಾಧ್ಯಮ. ಕೋಟಗಾನಹಳ್ಳಿ ರಾಮಯ್ಯ ಅವರ 'ಮತ್ತೆ ಏಕಲವ್ಯ', ಕೆ.ವೈ. ನಾರಾಯಣಸ್ವಾಮಿ ಅವರ ಅನಭಿಜ್ಞ ಶಾಕುಂತಲ ನಾಟಕಗಳು ಹೊಸಮೈಲಿಗಲ್ಲನ್ನೇ ಸ್ಥಾಪಿಸಿದವು. ಮಂಗಳಮುಖಿ ರೇವತಿ ಅವರ ಬದುಕನ್ನು ಆಧರಿಸಿದ ಬದುಕು ಬಯಲು ನಾಟಕವನ್ನು ನಮ್ಮ ಸಮಾಜ ಸ್ವೀಕರಿಸಿತು. ಸಲಿಂಗಕಾಮದಿಂದ ಹಿಡಿದು ತೃತೀಯಲಿಂಗಿಗಳ ಸಮುದಾಯ ತಲ್ಲಣಗಳಿಗೂ ರಂಗಭೂಮಿ ಕನ್ನಡಿ ಹಿಡಿದಿದೆ. ಬದುಕಿನ ಪಾಠ ಹೇಳುತ್ತಲೇ ಜೀವನಪ್ರೀತಿ ಉಣಬಡಿಸುತ್ತಿದೆ.


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45