ಕ್ಯಾನ್ಸರ್ ನಿಂದ ನಿಧನ ಹೊಂದಿದ ಖ್ಯಾತ ಗಾಯಕ: ಸಂತಾಪ ಸೂಚಿಸಿದ ಯುವಿ

ಕ್ಯಾನ್ಸರ್ ನಿಂದ ನಿಧನ ಹೊಂದಿದ ಖ್ಯಾತ ಗಾಯಕ: ಸಂತಾಪ ಸೂಚಿಸಿದ ಯುವಿ

ಬ್ರಿಟಿಷ್-ಐರಿಶ್ ಬ್ಯಾಂಡ್ ದಿ ವಾಂಟೆಡ್ ನ ಸದಸ್ಯನಾಗಿದ್ದ 33 ವರ್ಷದ ಖ್ಯಾತ ಗಾಯಕ ಟಾಪ್ ಪಾರ್ಕರ್ ನಿಧನರಾಗಿದ್ದಾರೆ. ಮೆದುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಟಾಪ್ ಪಾರ್ಕರ್ ವಿಶ್ವಾದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರು. ಟಾಪ್ ಪಾರ್ಕರ್ ನಿಧನದ ಸುದ್ದಿಯನ್ನು ದಿ ವಾಂಟೆಡ್ ಬ್ಯಾಂಡ್ ಘೋಷಣೆ ಮಾಡಿದ್ದು ಟಾಪ್ ಪಾರ್ಕರ್ ನಿಧನಕ್ಕೆ ಸಾಕಷ್ಟ ಮಂದಿ ಸಂತಾಪ ಸೂಚಿಸಿದ್ದಾರೆ.

ಗಾಯಕನ ನಿಧನಕ್ಕೆ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ರೆಸ್ಟ್ ಇನ್ ಹಾನರ್, ಟಾಪ್ ಪಾರ್ಕರ್ ಎಂದು ಬರೆದುಕೊಂಡಿರುವ ಯುವಿ ಹೃದಯದ ಚಿಹ್ನೆ ಹಾಕಿ ಸಂತಾಪ ಸೂಚಿಸಿದ್ದಾರೆ.

ಟಾಮ್ ಪಾರ್ಕರ್ ಪತ್ನಿ ಕೆಲ್ಸಿ ಹಾರ್ಡ್ವಿಕ್ ಪತಿಯ ನೋವಿನ ದುಃಖವನ್ನ ಹೊರ ಹಾಕಿದ್ದಾರೆ. ಟಾಮ್ಗೆ ಮಿದುಳಿನಲ್ಲಿ ಟ್ಯೂಮರ್ ಇರುವ ವಿಚಾರ 2020ರಲ್ಲಿ ತಿಳಿದಿತ್ತು. ಈ ವಿಚಾರವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಕ್ಯಾನ್ಸರ್ ಪತ್ತೆ ಆದ ನಂತರದಲ್ಲಿ ಅವರು ಸಾಕಷ್ಟು ಕುಗ್ಗಿದ್ದರು. ವಿಶ್ವದ ಪ್ರತಿಷ್ಠಿತ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಕಿಮೋಥೆರಪಿಗೆ ಒಳಗಾಗಿದ್ದರು. ಆದರೆ ಕ್ಯಾನ್ಸರ್ ಗುಣಮಾಡಲು ಸಾಧ್ಯವಾಗಲೇ ಇಲ್ಲ. ನಮ್ಮ ಹೃದಯ ಒಡೆದು ಹೋಗಿದೆ. ಟಾಮ್ ನನ್ನ ಜಗತ್ತೇ ಆಗಿದ್ದರು. ಅವರಿಲ್ಲದೆ ನಾವು ಜೀವನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದಿದ್ದಾರೆ.

ಟಾಮ್ ಹಾಗೂ ಕೆಲ್ಸಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಕುಟುಂಬ ಹಾಗೂ ಬ್ಯಾಂಡ್ ನ ಸದಸ್ಯರ ಜೊತೆ ಇರುವಾಗಲೇ ಟಾಮ್ ಕೊನೆಯುಸಿರು ಎಳೆದಿದ್ದಾರೆ.

https://twitter.com/BrainTumourOrg/status/1509257086101864457