FACT CHECK:
ಒಂದು ಮನೆ ಕಟ್ಟೋಕೆ ಇನ್ನೊಂದು ಮದುವೆ ಮಾಡೋಕೆ, ನಾವು ನೀವು ಪಡೋ ಕಷ್ಟ ಅಷ್ಟಿಷ್ಟಲ್ಲ, ಹೀಗಾಗಿ ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಅನ್ನೋ ಗಾದೆ ರೂಪುಗೊಂಡಿರೋದು. ಅಂದಾಗೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಒಂದು ವಿಚಿತ್ರ ಮದುವೆಯಾಗಿದೆ. ಮದುವೆ ಹೆಣ್ಣು ಮೇಕೆ ಅನ್ನೋದೇ ಈ ಸ್ಟೋರಿಯ ಟ್ವಿಸ್ಟ್
ಅರೇ ಇದೇನಾಪ್ಪಾ ಮೇಕೆ ಜೊತೆ ಮದುವೆನಾ? ಆ ಹುಡುಗ ಮೇಕೆಯನ್ನ ಮದುವೆಯಾಗಿದ್ದು ಯಾಕೆ ಅನ್ನೋದರ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.
ಅದು ಕೃಷ್ಣಾ ಜಿಲ್ಲೆಯ ನೂಜಿವೀಡು ಅನ್ನೋ ಗ್ರಾಮ. ಈ ಗ್ರಾಮದಲ್ಲಿರುವ ಓರ್ವ ಹುಡುಗನಿಗೆ ಮದುವೆ ಸೆಟ್ ಆಗಿರಲಿಲ್ಲ. ಸಾಕಷ್ಟು ಕಡೆ ಕನ್ಯೆಯನ್ನ ನೋಡಿಕೊಂಡು ಬರುತ್ತಿದ್ದ. ಆದ್ರೆ ಅದ್ಯಾಕೋ ಯಾವು ಸೆಟ್ ಆಗಿರಲಿಲ್ಲ. ಹೀಗಾಗಿ ಬೇಸತ್ತ ಹುಡುಗನ ಮನೆಯವರು ಅವನೊಬ್ಬ ಜ್ಯೋತಿಷಿಯನ್ನ ಭೇಟಿ ಮಾಡಿದ್ರು. ಮದುವೆ ಸೆಟ್ ಆಗದೆ ಇರೋದಿಕ್ಕೆ ಕಾರಣವೇನು ಅಂತ ಕೇಳಿದ್ರು. ಆಗ ಕೊಟ್ಟ ಜ್ಯೋತಿಷಿಯ ಉಪಾಯವೇ ಮೇಕೆ ಜೊತೆ ಮದುವೆ.
ಅಂದಾಗೆ ಹುಡುಗನ ಜಾತಕದಲ್ಲಿ ಎರಡು ಮದುವೆ ಆಗ್ತಾನೆ ಅಂತ ಇದೆ. ಮೊದಲ ಮದುವೆ ಮುರಿದು ಬೀಳುತ್ತೆ ಅಂತ ಜಾತಕ ಹೇಳುತ್ತಿತ್ತಂತೆ. ಹೀಗಾಗಿ ಆತನಿಗೆ ಯಾರು ಹೆಣ್ಣು ಕೊಡುತ್ತಿಲ್ಲ ಅಂತೇಳಿದ ಜ್ಯೋತಿಷಿ ಅದಕ್ಕೊಂದು ಉಪಾಯ ನೀಡಿದ್ದ. ಮನೆಯಲ್ಲಿರುವ ಯಾವುದಾದರೂ ಸಾಕು ಪ್ರಾಣಿ ಜೊತೆ ಮದುವೆ ಮಾಡಿದ್ರೆ, ಮೊದಲ ಮದುವೆ ಆದಂಗೆ ಆಗುತ್ತೆ ಅಂದಿದ್ದ. ಅದರಂತೆ ಮನೆಯವರು ನೂಜಿವೀಡು ಗ್ರಾಮದ ದೇವಸ್ಥಾನದಲ್ಲಿ ಹುಡುಗನಿಗೆ ಯುಗಾದಿ ಹಬ್ಬದ ದಿನ ಅದ್ದೂರಿಯಾಗಿ ಮೇಕೆ ಜೊತೆ ಮದುವೆ ಮಾಡಿಸಿದ್ದಾರೆ. ಇದೀಗ ಮೊದಲ ಮದುವೆ ಗಂಡಾಂತರ ತಪ್ಪಿದೆ ಅಂತೇಳಿ ಊರಿಗೆಲ್ಲಾ ಸಿಹಿ ಹಂಚಿ ಹೆಣ್ಣು ಹುಡುಕುತ್ತಿದ್ದಾರಂತೆ.